ಸುದ್ದಿಗಳು

ಡಿಜಿಟಲ್ ರೈಟ್ಸ್ ಮಾರಾಟ: ‘ಕೆ.ಜಿ.ಎಫ್’ ಫಸ್ಟ್ , ‘ಯಜಮಾನ’ ಸೆಕೆಂಡ್

ಬೆಂಗಳೂರು.ಮಾ.06: ಕಳೆದ ಶುಕ್ರವಾರ ತೆರೆ ಕಂಡ ‘ಯಜಮಾನ’ ಸಿನಿಮಾ ನೋಡುಗರಿಗೂ ಇಷ್ಟವಾಗಿದ್ದು, ಬಾಕ್ಸ್ ಆಫೀಸ್ ನಲ್ಲಿಯೂ ಕಮಾಲ್ ಮಾಡುತ್ತಿದೆ. ಕ್ಲಾಸ್ ಮತ್ತು ಮಾಸ್ ಪ್ರೇಕ್ಷಕರಿಗೆ ಇಷ್ಟವಾಗಿರುವ ಈ ಚಿತ್ರಕ್ಕೆ ಎಲ್ಲೆಡೆ ಗುಣಗಾನಗಳು ಕೇಳಿ ಬರುತ್ತಿದ್ದು, ಹೌಸ್ ಪುಲ್ ಪ್ರದರ್ಶನ ಕಾಣುತ್ತಿದೆ.

ಡಿಜಿಟಲ್ ಮಾರಾಟ ಹಕ್ಕು

ಈಗಾಗಲೇ ದಾಖಲೆಯ ವಿಚಾರದಲ್ಲಿಯೂ ಮುಂದಿರುವ ‘ಯಜಮಾನ’ ಸಿನಿಮಾ ಡಿಜಿಟಲ್ ರೈಟ್ಸ್ ವಿಷಯದಲ್ಲಿಯೂ ಕಮಾಲ್ ಮಾಡಿದೆ. ಆದರೆ ಎರಡನೇಯ ಸ್ಥಾನದಲ್ಲಿದೆ. ಕನ್ನಡದ ‘ಕೆ.ಜಿ.ಎಫ್’ ಸಿನಿಮಾ ಈಗಲೂ ನಂಬರ್ 1 ಸ್ಥಾನದಲ್ಲಿದೆ.

ಹೌದು, ಯಶ್ ನಟನೆಯ ಈ ಸಿನಿಮಾ ಬರೋಬ್ಬರಿ 18 ಕೋಟಿ ರೂಪಾಯಿಗೆ ಸೇಲ್ ಆಗಿತ್ತು. ಅದಕ್ಕಿಂತ ಕಡಿಮೆ ಬೆಲೆಗೆ ‘ಯಜಮಾನ’ ಮಾರಾಟವಾಗಿದೆ. ಆದರೆ ಕಲೆಕ್ಷನ್ ವಿಚಾರದಲ್ಲಿಯೂ ದಾಖಲೆ ಮಾಡುತ್ತಿದೆ.

3.75 ಕೋಟಿ

ದರ್ಶನ್ , ರಶ್ಮಿಕಾ, ತಾನ್ಯಾ ಹೋಪ್ ನಟಿಸಿರುವ ‘ಯಜಮಾನ’ ಚಿತ್ರದ ಡಿಜಿಟಲ್ ಹಕ್ಕುಗಳು 3.75 ಕೋಟಿ ರೂಪಾಯಿಗಳಿಗೆ ಅಮೆಜಾನ್ ಪ್ರೈಮ್ ಪಾಲಾಗಿದೆ. ಹೀಗಾಗಿ ಡಿಜಿಟಲ್ ಹಕ್ಕುಗಳ ಮಾರಾಟದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆಗಿರುವ ಎರಡನೇ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಉಳಿದಂತೆ ‘ಯಜಮಾನ’ ಚಿತ್ರದ ಪ್ರಸಾರದ ಹಕ್ಕುಗಳು ಕನ್ನಡದ ಸ್ಟಾರ್ ಸುವರ್ಣ ವಾಹಿನಿ ಪಾಲಾಗಿದೆ. ಇನ್ನು ‘ಕೆ.ಜಿ.ಎಫ್’ ತೆರೆಕಂಡ ಬರೀ 45 ದಿನಗಳಿಗೆ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗಿತ್ತು. ಹೀಗಾಗಿ ‘ಯಜಮಾನ’ ಯಾವಾಗ ಬರಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.

ರಾಘವೇಂದ್ರ ರಾಜ್ ಕುಮಾರ್ ಪುತ್ರಿ ಈಗ ನಾಯಕಿ..!!!

#yajamana, #settelite, #rights, #balkaninews #yash, #darshan, #filmnews, #kannadasuddigalu, #suvarnanews

Tags