ಸುದ್ದಿಗಳು

‘ಆನೆ ನಡೆದಿದ್ದೇ ದಾರಿ’ ಬಂದೇ ಬಿಟ್ಟ ‘ಯಜಮಾನ’..

ಬೆಂಗಳೂರು,ಫೆ.10:

‘ಯಜಮಾನ’ ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ.

ಯಜಮಾನ ಸಿನಿಮಾ ಸೆಟ್ಟೇರಿದಾಗಿನಿಂದಲೂ ಕೂಡ ಬಾರೀ ಸದ್ದು ಮಾಡುತ್ತಿರುವ ಸಿನಿಮಾ. ಒಂದೊಂದು ಪೋಸ್ಟರ್ ರಿಲೀಸ್ ಆದಾಗಲೂ ಕೂಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಬ್ಬದಂತೆ ಆಚರಣೆ ಮಾಡುವಂತಾಗಿದೆ‌. ಯಾಕಂದ್ರೆ ಅಭಿಮಾನಿಗಳು ಯಜಮಾನನ ದರ್ಶನಕ್ಕೆ ಕಾದು ಕುಳಿತಿದ್ದಾರೆ. ಇದೀಗ ಈ ಕಾಯುವಿಕೆಗೆ ಅಭಿಮಾನಿಗಳಿಗೆ ಕೊಂಚ ಸಿಹಿ ನೀಡಿದ್ದಾರೆ ದರ್ಶನ್.

Image result for yajaman darshana

ಟ್ರೇಲರ್ ನಲ್ಲಿ ಮತ್ತೆ ಝಲಕ್ ತೋರಿಸಿದ ಯಜಮಾನ

ಹೌದು, ಯಜಮಾನ ಸಿನಿಮಾ ಸೆಟ್ಟೇರಿದಾಗಿನಿಂದಲೂ ಕೂಡ ಬಾರೀ ಸದ್ದು ಮಾಡುತ್ತಿರುವ ಸಿನಿಮಾ. ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಯಜಮಾನ ಸಿನಿಮಾ ಕೂಡ ಒಂದು. ಅಭಿಮಾನಿಗಳು ಬಾರೀ ಕಾತುರರಾಗಿ ಕಾದಿರುವ ಸಿನಿಮಾ ಇದಾಗಿದೆ‌. ವಿ ಹರಿಕೃಷ್ಣ ಮತ್ತು ಪಿ ಕುಮಾರ್ ನಿರ್ದೇಶನ, ಶೈಲಜಾ ನಾಗ್ ಮತ್ತು ಬಿ ಸುರೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಯಜಮಾನ ಸಿನಿಮಾದ ಟ್ರೇಲರ್ ಲಾಂಚ್ ಆಗಿದ್ದು, ಅದ್ಬುತವಾಗಿ ಮೂಡಿ ಬಂದಿದೆ.

Image result for yajaman darshan

ಹೇಗಿದೆ ಗೊತ್ತಾ ಚಾಲೆಂಜಿಂಗ್ ಸ್ಟಾರ್ ಅಬ್ಬರ

ಈ ಸಿನಿಮಾದ ಮೂರು ಹಾಡುಗಳು ಬಿಡುಗಡೆಯಾದಾಗಲೂ ಕೂಡ ಅದ್ಬುತ ರೆಸ್ಪಾನ್ಸ್ ಪಡೆದುಕೊಂಡಿತ್ತು. ಇದೀಗ ಈ ಸಿನಿಮಾದ ಟ್ರೇಲರ್ ಲಾಂಚ್ ಆಗಿದ್ದು ಬಿಡಿಗಡೆಯಾದ ಕೆಲವೇ ಹೊತ್ತಿನಲ್ಲಿ ಹೆಚ್ಚಿನ ವೀವ್ಸ್ ಪಡೆದಿದೆ. ಇದೀಗ ಈ ಸಿನಿಮಾ ಟ್ರೇಲರ್ ಕೂಡ ಹಾಗೇ ಹುಚ್ಚೆಬ್ಬಿಸುವಂತಿದೆ. ಮಾಸ್ ಡೈಲಾಗ್ ಅಂಡ್ ಫೈಟ್ ಅಭಿಮಾನಿಗಳಿಗೆ ಊರಣವನ್ನೇ ಇಟ್ಟಿದೆ. ಇನ್ನು ಹಳ್ಳಿಯ ಮಗ ವಿಲನ್ ಗಳಿಗೆನೀಡುವ ಟಕ್ಕರ್ ಅಧ್ಬುತ ವಾಗಿ ಮೂಡಿ ಬಂದಿದೆ. ಪ್ರತಿಯೊಂದು ದೃಷ್ಯಗಳು ಕೂಡ ಒಂದಕ್ಕೊಂದು ಅಂಟಿಕೊಂಡ ರೀತಿಯಲ್ಲಿಯೇ ಇವೆ. “ಆನೆ ನಡೆದಿದ್ದೇ ದಾರಿ ತಾಕತ್ತ್ ಇದ್ದರೆ ಕಟ್ಟ ಹಾಕು” ಎನ್ನುವ ಡೈಲಾಗ್ ಅಂತೂ ಚಿಂದಿಯಾಗಿದೆ. ಇನ್ನು ವಿಲನ್ ಪಾತ್ರದಲ್ಲಿ ಮಿಂಚಿರುವ ಡಾಲಿ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಾಯಿಯ ಪ್ರೀತಿ, ದೇವರ ಮೇಲಿನ ಭಕ್ತಿ, ವಿಲನ್ ಗಳಿಗರ ಮಣ್ಣು ಮುಕ್ಕಿಸುವ ರೀತಿ ಹೀಗೆ ಎಲ್ಲಾ ದೃಶ್ಯಗಳು ಕೂಡ ಅದ್ಬುತವಾಗಿ ಮೂಡಿ ಬಂದಿದ್ದು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

Tags