ಸುದ್ದಿಗಳು

‘ಯಜಮಾನ’ನ ಮುಂದೆ ಈ ಸ್ಟಾರ್ ಗಳ ಆಟ ನಡೆಯಲಿಲ್ಲ!!

ಬೆಂಗಳೂರು,ಜ.16: ಸಂಕ್ರಾಂತಿ ಹಬ್ಬಕ್ಕೆ ಅಭಿಮಾನಿಗಳಿಗೆ ಹಬ್ಬದೂಟ !! ಯಾಕೆಂದರೆ ನಿನ್ನೆಯಷ್ಟೇ ‘ಯಜಮಾನ’ ಸಿನಿಮಾದ ಟೈಟಲ್ ಟ್ರ್ಯಾಕ್​ ‘ಶಿವನಂದಿ’ ಹಾಡು ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಈ ದಾಖಲೆ ಮೇಲೆ ದಾಖಲೆ ಮಾಡಿತ್ತು.. ಈಗ  ಯ್ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿ ನಂ.1 ರಲ್ಲಿ ಇದೆ..

Image result for yajaman darshan shivanandi

ಯೂ ಟ್ಯೂಬ್​ ಟ್ರೆಂಡಿಂಗ್​​​​​​ನಲ್ಲಿ ನಂ.1

‘ಶಿವನಂದಿ’ ಹಾಡು ಬಿಡುಗಡೆಯಾಗಿದ್ದೇ ತಡ ಗಂಟೆ ಗಂಟೆಗೆ ಒಂದೊಂದರಂತೆ ದಾಖಲೆ ಬರೆಯುತ್ತಾ ಬಂತು…. ಕೆಲವೇ ಗಂಟೆಗಳಲ್ಲಿ ಮಿಲಿಯನ್​ ವೀವ್ಸ್​ ಪಡೆದಿತ್ತು.  ದಚ್ಚು ಗೆ ಕಾಂಪಿಟೀಷನ್ ಕೊಡಲು ತಮಿಳಿನ ಚಿಯಾನ್ ವಿಕ್ರಮ್​ ಅವರ ‘ಕೊಡರಂ ಕೊಂಡನ್’​ ಸಿನಿಮಾದ ಟೀಸರ್​,  ಅಷ್ಟೇ ಅಲ್ಲದೆ ಪ್ರಭುದೇವ ನಟನೆಯ ‘ಚಾರ್ಲಿ ಚಾಪ್ಲಿನ್​-2 ಟ್ರೈಲರ್’ ಬಿಡುಗಡೆಯಾಗಿತ್ತು.. ಇವರಿಬ್ಬರೂ ಕಾಲಿವುಡ್ ನಲ್ಲಿ ಹೆಸರು ಪಡೆದ ನಟರು… ಆದರೆ “ಯಜಮಾನನ ಮುಂದೆ ಇವರ ಆಟ ನಡೆಯಲಿಲ್ಲ.. ಸದ್ಯಕ್ಕೆ ಶಿವನಂದಿ ಹಾಡು 2.6 ಮಿಲಿಯನ್​ ವೀಕ್ಷಣೆ ಪಡೆದಿದ್ದು, ಇನ್ನೂ ಟ್ರೆಂಡಿಂಗ್ 1ರಲ್ಲಿ ಇದ್ದು ದಚ್ಚು ಫ್ಯಾನ್ಸ್ ಗೆ ಹಬ್ಬದೂಟವಾಗಿದೆ.

Tags