ಸುದ್ದಿಗಳು

ಯಜ್ಞಾ ಶೆಟ್ಟಿ ಗೆ ಆಫರ್ ನೀಡಿದ ರಾಮ್ ಗೋಪಾಲ್ ವರ್ಮಾ

‘ಲಕ್ಷ್ಮೀಸ್ ಎನ್.ಟಿ.ಆರ್’ ಚಿತ್ರದಲ್ಲಿ ನಟನೆ

ಬೆಂಗಳೂರು.ಜ.12: ‘ಒಂದು ಪ್ರೀತಿಯ ಕಥೆ’, ‘ಎದ್ದೇಳು ಮಂಜುನಾಥ’, ‘ಉಳಿದವರು ಕಂಡಂತೆ’, ‘ಕಿಲ್ಲಿಂಗ್ ವೀರಪ್ಪನ್’, ‘ಲವ್ ಗುರು’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ನಟಿ ಯಜ್ಞಾ ಶೆಟ್ಟಿಗೆ ದೊಡ್ಡ ಅವಕಾಶ ಸಿಕ್ಕಿದೆ.

ಯಜ್ಞಾ ಶೆಟ್ಟಿ…

ಟಾಲಿವುಡ್ ನಲ್ಲಿ ಸದ್ಯ ಸಾಕಷ್ಟು ಸದ್ದು ಮಾಡುತ್ತಿರುವ ‘ಲಕ್ಷ್ಮೀಸ್ ಎನ್.ಟಿ.ಆರ್’ ಚಿತ್ರದಲ್ಲಿ ನಟಿಸಲು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವಕಾಶ ನೀಡಿದ್ದು, ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

“ತೆಲುಗಿನ ಸೂಪರ್ ಸ್ಟಾರ್ ನಟ ಎನ್.ಟಿ.ಆರ್ ಅವರ ಜೀವನ ಕುರಿತಾಗಿ ‘ಲಕ್ಷ್ಮೀಸ್ ಎನ್.ಟಿ.ಆರ್’ ಎಂಬ ಸಿನಿಮಾ ಮಾಡುತ್ತಿದ್ದು, ಈ ಚಿತ್ರದಲ್ಲಿ ಎನ್.ಟಿ.ಆರ್ ಅವರ ಪತ್ನಿ ಲಕ್ಷ್ಮಿ ಪಾರ್ವತಿ ಪಾತ್ರದಲ್ಲಿ ಯಜ್ಞಾ ಶೆಟ್ಟಿ ನಟಿಸಲಿದ್ದಾರೆ”.

ಚಿತ್ರದ ಬಗ್ಗೆ

ಈಗಾಗಲೇ ‘ಲಕ್ಷ್ಮೀಸ್ ಎನ್.ಟಿ.ಆರ್’ ಚಿತ್ರದ ಬಗ್ಗೆ ಸುದ್ದಿಯಾಗಿದ್ದರೂ ಸಹ, ಯಾರು ಆ ಪಾತ್ರಗಳನ್ನು ಮಾಡುತ್ತಾರೆ ಎಂಬ ಬಗ್ಗೆ ತಿಳಿದಿರಲಿಲ್ಲ. ಇದೇ ಮೊದಲ ಬಾರಿಗೆ ಆರ್.ಜಿ.ವಿ ಪಾತ್ರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಚಿತ್ರೀಕರಣ ಶುರುವಾಗಿದ್ದು, ಸದ್ಯದಲ್ಲಿಯೇ ಸಿನಿಮಾ ತೆರೆಗೆ ಬರಲಿದೆ.

ಮತ್ತೊಂದು ಪಾತ್ರ

ಸದ್ಯ ಈ ಚಿತ್ರದಲ್ಲಿನ ಯಜ್ಞಾ ಶೆಟ್ಟಿಯ ಪಾತ್ರದ ಪರಿಚಯ ಮಾಡಿರುವ ಆರ್.ಜಿ.ವಿ ಮತ್ತೊಂದು ಟ್ವೀಟ್ ಮಾಡಿದ್ದು, ಇದರಲ್ಲಿ ಚಂದ್ರು ಬಾಬು ನಾಯ್ಡು ಅವರನ್ನು ಹೋಲುವಂತಹ ವ್ಯಕ್ತಿಯ ಫೋಟೋ ಶೇರ್ ಮಾಡಿದ್ದಾರೆ.

#yajna shetty, #balakninews #filmnews, #kannadasuddigalu

Tags