ವೈರಲ್ ನ್ಯೂಸ್ಸುದ್ದಿಗಳು

‘ನನ್ನ ಬಾಯಿಗೆ ಮಣ್ಣು ಹಾಕಿಬಿಟ್ರಲ್ಲಾ’ ಎಂದು ಕಣ್ಣೀರು ಹಾಕಿದ ‘ಯಾಕಣ್ಣಾ’ ಹೆಂಗಸು

ಕೆಲವು ತಿಂಗಳುಗಳ ಹಿಂದೆಯಷ್ಟೇ ‘ನಿಖಿಲ್ ಎಲ್ಲಿದ್ದೀಯಪ್ಪಾ..?’ ಮತ್ತು ‘ಯಾಕಣ್ಣಾ’ ವಿಡಿಯೋಗಳು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದವು. ಇದಕ್ಕೆ ಸೋಷಿಯಲ್ ಮೀಡಿಯಾದ ಅತಿಯಾದ ಬಳಕೆಯೂ ಕಾರಣ..!! ಇದೀಗ ನಾವು ಹೇಳುತ್ತಿರುವುದು ರಾತ್ರೋರಾತ್ರಿ ವೈರಲ್ ಆದ ಮಹಿಳೆಯೊಬ್ಬಳ ‘ಯಾಕಣ್ಣಾ’ ವಿಡಿಯೋ ಬಗ್ಗೆ.

ಸಾಮಾಜಿಕ ಜಾಲಾತಾಣದ ಬಳಕೆಯಿಂದ ಕೆಲವರು ಜನಪ್ರಿಯರಾದರೆ, ಕೆಲವರು ಅದರಿಂದಲೇ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂದ ಹಾಗೆ ‘ಯಾಕಣ್ಣಾ’ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಬಾತ್ರೂಮ್ ನಲ್ಲಿ ತನ್ನ ಗಂಡನೊಂದಿಗೆ ನೋಡಬಾರದ ಸ್ಥಿತಿಯಲ್ಲಿದ್ದಾಗ, ಹುಡುಗನೊಬ್ಬ ಅದನ್ನು ಸೆರೆ ಹಿಡಿದನು.

ಅದೇ ಸಮಯದಲ್ಲಿ ಮುಗ್ದ ಮಹಿಳೆ ಯಾವ ಮುಚ್ಚು ಮರೆಯೂ ಇಲ್ಲದೆ ತನ್ನ ಊರು ಹೆಸರು, ತನ್ನೊಂದಿಗೆ ಇದ್ದ ವ್ಯಕ್ತಿಯಾರು, ಓಪನ್ ಬಾತ್ ರೂಮಿನಲ್ಲಿ ಇದ್ದಿದ್ದು ಏಕೆಂದು ಮನ ಬಿಚ್ಚಿ ಹೇಳಿಕೊಂಡಿದ್ದಾಳೆ. ಆದರೂ ಸಹ ಈ ವಿಡಿಯೋ ಸೆರೆಹಿಡಿದ ವ್ಯಕ್ತಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದರಿಂದಾಗಿ ಆ ಮಹಿಳೆಯ ಜೀವನ ಹಾಳಾಗಿ ಹೋಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಆ ಮಹಿಳೆ ‘ತಾನು ಇದರಿಂದ ನೊಂದಿದ್ದೇನೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಅಳುತ್ತಾ ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ.

‘ನನ್ನ ಬಾಯಿಗೆ ಮಣ್ಣು ಹಾಕಿಬಿಟ್ರಲ್ಲಾ, ದಿನಾ ನಾನು ಕಣ್ಣೀರಿನಲ್ಲಿ ಗೋಳಾಡುವಂತೆ ಮಾಡಿಬಿಟ್ರಲ್ಲಾ, ನನ್ನ ಜೀವನ ಸರ್ವನಾಶವಾಗಿ ಹೋಯಿತು. ನಾನೀಗ ಎಲ್ಲಿಗೆ ಹೋಗಲಿ. ಇನ್ಯಾರಿಗೂ ಈ ರೀತಿ ಮಾಡಬೇಡಿ’ ಎಂದು ಗೋಳಾಡಿದ್ದಾರೆ. ಈ ಹೆಂಗಸಿನ ನೋವಿನ ನುಡಿಗಳನ್ನು ಕೇಳುತ್ತಿದ್ದರೆ ಕಲ್ಲು ಹೃದಯದವರನ್ನೂ ಕರಗಿಸಿ ಬಿಡುತ್ತದೆ. ಒಂದು ಮಾತು, ಒಂದು ಸಾರಿ ಟ್ರೋಲ್ ಮಾಡುವ ಮುನ್ನ ಯೋಚಿಸಿ ನೋಡಿ ನಂತರ ಟ್ರೋಲ್ ಮಾಡಿ, ಆದರೆ, ಅದರಿಂದ ಒಬ್ಬರ ಜೀವನ ನಾಶವಾಗದಿರಲಿ.

ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿದ ಪಾರುಲ್ ಯಾದವ್

#yakkanna #yakkannafamelady #kannadasuddigalu

Tags