ಸುದ್ದಿಗಳು

ಕೆಸಿಸಿ: ಫೈನಲ್ಸ್ ಗೆ ಲಗ್ಗೆ ಇಟ್ಟ ಯಶ್ ಬಳಗ

ಗೋಲ್ಡನ್ ಹಾಗೂ ಯಶ್ ಮಧ್ಯೆ ಸಮರ

ಬೆಂಗಳೂರು,ಸೆ.09: ಕೆಪಿಎಲ್, ಸಿಸಿಎಲ್ ಆಯ್ತು. ಸ್ಯಾಂಡಲ್‍ವುಡ್‍ನಲ್ಲಿ ಇದೀಗ ನೂತನವಾಗಿ ಕೆಸಿಸಿ ಪಂದ್ಯಾವಳಿ ಆರಂಭವಾಗಿ ಒಂದು ಆಟನೂ ನಡೆದಿದ್ದು ಆಗಿದೆ. ಕಿಚ್ಚ ಸುದೀಪ್ ಸಾರಥ್ಯದ ‘ಕರ್ನಾಟಕ ಚಲನಚಿತ್ರ ಕಪ್’ ಕ್ರಿಕೆಟ್ ಟೂರ್ನಮೆಂಟ್ ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು ಒಟ್ಟಿಗೆ ಸೇರಿ ಫೀಲ್ಡ್ ಗಿಳಿದು ಬ್ಯಾಟಿಂಗ್ ಮಾಡಿದ್ದೂ ಆಗಿದೆ. ಸಿಸಿಎಲ್ ಮಾದರಿಯಲ್ಲಿ ಕನ್ನಡ ಚಿತ್ರೋದ್ಯಮದವರು ಸೇರಿ ಕೆಸಿಸಿ ಕ್ರಿಕೆಟ್ ಟೂರ್ನಮೆಂಟ್‍ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.

Kannada Chalanachitra Cup Season 2 Photos

ಅಪ್ಪುಗೆ ಸೋಲು

ಕನ್ನಡ ಚಲನಚಿತ್ರ ಕಪ್ ಎರಡನೇ ಆವೃತ್ತಿಗೆ ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ದೂರಿ ಚಾಲನೆ ಸಿಕ್ಕಿತು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೈದಾನದೊಳಗೆ ಹಳದಿ ಕೆಂಪು ಬಣ್ಣದ ಬಲೂನ್​ಗಳನ್ನು ಗಾಳಿಯಲ್ಲಿ ತೂರಿ ಬಿಡುವ ಮೂಲಕ ಎಲ್ಲ ತಂಡಗಳಿಗೆ ಶುಭ ಹಾರೈಸಿದ್ದರು

ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ‘ಗಂಗಾ ವಾರಿಯರ್ಸ್’ ತಂಡವನ್ನ ಮಣಿಸಿ, ರಾಕಿಂಗ್ ಸ್ಟಾರ್ ಯಶ್ ಅವರ ‘ರಾಷ್ಟ್ರಕೂಟ ಪ್ಯಾಂಥರ್ಸ್’ ತಂಡ ಕೆಸಿಸಿ ಎರಡನೇ ಆವೃತ್ತಿಯಲ್ಲಿ ಫೈನಲ್ ಗೆ ಲಗ್ಗೆಯಿಟ್ಟಿದೆ. ಇಂದು ರಾತ್ರಿ 8.15 ಗಂಟೆಗೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗೋಲ್ಡನ್ ಸ್ಟಾರ್ ಸಾರಥ್ಯದ ‘ಒಡೆಯರ್ ಚಾರ್ಜರ್ಸ್’ ತಂಡವನ್ನ ಯಶ್ ಅವರ ತಂಡ ಎದುರಿಸಲಿದೆ.

Kannada Chalanachitra Cup Season 2 Photos

Tags

Related Articles