ಸುದ್ದಿಗಳು

ಯಶ್ ಫೇವರೀಟ್ ನಟಿ ಯಾರು ಗೊತ್ತೇ?

ಆಲಿಯಾ ಭಟ್ ನಟನೆ ಇಷ್ಟ!!

ಬೆಂಗಳೂರು,ಡಿ.7: ನಟ ಯಶ್ ಈಗ ‘ಕೆಜಿಎಫ್’  ಪ್ರಮೋಶನ್ ನಲ್ಲಿ ಬ್ಯುಸಿ.. ಇನ್ನೊಂದೆಡೆ ಮನೆಗೆ ಮುದ್ದಾದ ಭಾಗ್ಯಲಕ್ಷ್ಮಿಯ ಆಗಮನವಾಗಿದೆ.. ‘ಕೆಜಿಎಫ್’ ಚಿತ್ರ ಪಂಚಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು  ಭಾರತದಾದ್ಯಂತ ಯಶ್ ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ..  ಇನ್ನು ಯಶ್ ಯಾರ ಅಭಿಮಾನಿ ಗೊತ್ತೇ?

ನನಗೆ ಆಲಿಯಾ ಭಟ್ ನಟನೆ ಇಷ್ಟ

ಹೌದು, ಇತ್ತೀಚೆಗೆಯಷ್ಟೇ ಯಶ್ ಸಂದರ್ಶನವೊಂದು ನಡೆದಿತ್ತು. ಬಾಲಿವುಡ್ ನಟರಲ್ಲಿ ಯಾರು ಫೇವರೀಟ್ ನಟಿ ಎಂದು ಕೇಳಿದ್ದಕ್ಕೆ ನನಗೆ ಆಲಿಯಾ ಭಟ್ ನಟನೆ ಇಷ್ಟ ಎಂದು ಹೇಳಿದ್ದಾರೆ..ಆಲಿಯಾ ಭಟ್ ಸದ್ಯ ಬಾಲಿವುಡ್ ನ ಬ್ಯುಸಿಯಸ್ಟ್ ನಟಿ.. ಕಳಂಕ್, ಹಾಗೂ ಬ್ರಹ್ಮಾಸ್ತ್ರದಲ್ಲಿ ನಟಿಸುತ್ತಿದ್ದಾಳೆ..

Related image

ಡಿ.21 ರಂದು ‘ಕೆಜಿಎಫ್’

ಇನ್ನು ಬಾಲಿವುಡ್ ನಲ್ಲಿ ‘ಕೆಜಿಎಫ್’ ಪ್ರೋಮೋ ಹಾಡು ಬಿಟ್ಟಿದ್ದು ಎಲ್ಲೆಡೆಯಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.. ಇದೇ ಡಿ.21ರಂದು ಕೆಜಿಎಫ್ ಚಿತ್ರ ಬಿಡುಗೆಯಾಗಲಿದ್ದು ಈ ಚಿತ್ರವನ್ನು ಪ್ರಾಂತ್ ನೀಲ್ ನಿರ್ದೇಶಿಸುತ್ತಿದ್ದು, ಶ್ರೀನಿಧಿ  ಶೆಟ್ಟಿ ನಾಯಕಿಯಾಗಿ ಅಭಿಮಯಿಸಿದ್ದಾರೆ..

Tags

Related Articles