ಸುದ್ದಿಗಳು

ಯಶ್ ಇನ್ ಇನ್ಸ್ಟಾಗ್ರಾಂ !! ಮೊದಲ ಫೊಟೋ ಹಂಚಿಕೊಂಡ ಯಶ್!!

ನನಗೀಗ ಗೊತ್ತಾಗಿದೆ ಯಾಕೆ ಇನ್ಸ್ಟಾಗ್ರಾಂನಲ್ಲಿ ಇರಬೇಕು!!

ಬೆಂಗಳೂರು,ಡಿ.9: ಚಂದನವನದ ಮುದ್ದಾದ ಜೋಡಿ ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿಗೆ ಇಂದು 2ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ.. ಈ ಜೋಡಿಗೆ ಡಿಸೆಂಬರ್ ತಿಂಗಳು ಬಹಳ ವಿಶೇಷ.. ಇಂದು ರಾಧಿಕಾ ಡಿಸ್ಚಾರ್ಜ್ ಆಗಿದ್ದು ಇಂದು ಮನೆಗೆ ಮುದ್ದಾದ ಮಹಾಲಕ್ಷ್ಮಿ ಕೂಡ ಬಂದಿದ್ದಾಳೆ..

ಯಶ್ ಇನ್ಸ್ಟಾಗ್ರಾಂ

ಡಬಲ್ ಖುಷಿಯೊಂದಿಗೆ  ಯಶ್ ಇನ್ಸ್ಟಾಗ್ರಾಂ ಸೇರುತ್ತಿದ್ದಾರೆ. ಇಷ್ಟು ದಿನ ಯಶ್ ಇನ್ಸ್ಟಾಗ್ರಾಂ ನಲ್ಲಿ ಇರಲಿಲ್ಲ.. ನಿನ್ನೆಯಷ್ಟೇ ಯಶ್ ಇದರ ಕುರಿತಾಗಿ ಒಂದು ಸ್ಪರ್ಧೆ ಹಮ್ಮಿಕೊಂಡಿದ್ದರು.. ನಾನು ಇನ್ಸ್ಟಾಗ್ರಾಂಗೆ ಯಾಕೆ ಬರಬೇಕು? ಉತ್ತಮ ಉತ್ತರವನ್ನು ಯಾರು ನೀಡುತ್ತಾರೋ , ಅವರ ಬರಹಗಳನ್ನು ತಮ್ಮ ಪೇಜ್ ನಲ್ಲಿ ಫೋಸ್ಟ್ ಮಾಡಲಾಗುವುದು ಎಂದು ಹೇಳಲಾಗಿತ್ತು…

ಈಗ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಇನ್ಸ್ಟಾಗ್ರಾಂ ಸೇರುವ ವಿಚಾರ ಹಂಚಿಕೊಂಡಿದ್ದಾರೆ ಈ ಆಕೌಂಟ್‌ ಹೆಸರು ಕೂಡ “ದ ನೇಮ್ ಈಸ್ ಯಶ್” ಎಂದಾಗಿದೆ.

ಮೊದಲ ಫೊಟೋ

“ನನಗೀಗ ಗೊತ್ತಾಗಿದೆ ಯಾಕೆ ಇನ್ಸ್ಟಾಗ್ರಾಂನಲ್ಲಿ ಇರಬೇಕು ಎಂದು, ಐ ವಿಲ್ ಹೋಪ್ ನಿಮ್ಮೆಲ್ಲರಿಗೂ ರೇಸ್ಪಾನ್ಸ್ ಮಾಡ್ತೀನಿ, ಆ್ಯಂಡ್ ನನಗೀಗ ತಿಳಿದು ಬಂತು ಏನೆಲ್ಲಾ ಹಂಚಿಕೊಳ್ಳಬೇಕೆಂದು ಸ್ಟೇ ಟ್ಯೂನ್ಡ್” ಎಂದಿದ್ದಾರೆ. ಅಷ್ಟು ಹೇಳಿದ್ದೇ ತಡ ಯಶ್ ಈಗಾಗಲೇ ಒಂದು ಫೊಟೋ ಕೂಡ ಹಂಚಿಕೊಂಡಿದ್ದಾರೆ. ರಾಧಿಕಾ ಹಾಗೂ ಯಶ್ ಸಮುದ್ರದ ಕಿನಾರೆಯಲ್ಲಿ ಬೆಳದಿಂಗಳ ನಸುಕಿನಲ್ಲಿ ಫೊಟೋಶೂಟ್ ಮಾಡಿಸಿಕೊಂಡಿದ್ದನ್ನು ಹಂಚಿದ್ದಾರೆ.. ಇಷ್ಟೇ ಅಲ್ಲದೆ ಎಕೌಂಟ್ ಮಾಡಿದ ಕಲವೇ ಗಂಟೆಗಳಲ್ಲಿ ಹತ್ತುಸಾವಿರಕ್ಕಿಂತಲೂ ಹೆಚ್ಚಿನ ಫಾಲೋವರ್ಸ್ ಹೊಂದಿದ್ದಾರೆ..

Tags