ಸುದ್ದಿಗಳು

ನಮ್ಮ ಮನೆಯಲ್ಲಿ ಅಷ್ಟು ಸಿಕ್ತು, ಇಷ್ಟು ಸಿಕ್ತು ಅಂತಾ ಬೇಕಾಬಿಟ್ಟಿ ಸುದ್ದಿ ಮಾಡಬೇಡಿ!!

ಎರಡು ದಿನ ಹೆಂಡತಿ ಹಾಗೂ ಮಗಳನ್ನು ಬಿಟ್ಟಿರಲು ಕಷ್ಟವಾಗಿತ್ತು.

ಬೆಂಗಳೂರು,ಜ.5: ಚಂದನವನದಲ್ಲಿ  ಮೂರು, ದಿನಗಳಿಂದ ಐಟಿ ಅಧಿಖಾರಿಗಳದ್ದೇ ಹವಾ..ಯಶ್, ಪುನೀತ್ , ಕಿಚ್ಚ, ಶಿವಣ್ಣ ಹೀಗೆ ನಿರ್ಮಾಪಕರ ಮನೆಯಲ್ಲೂ ಐಟಿ ದಾಳಿ ನಡೆಸಿದೆ.. ಈಗ ರಾಕಿಂಗ್ ಸ್ಟಾರ್ ಮನೆಯಲ್ಲಿ ಐಟಿ ತನಿಖೆ ಮುಕ್ತಾಯಗೊಂಡಿದೆ. ಆದಾಯ ಇಲಾಖೆ ಅಧಿಕಾರಿಗಳು ಇಂದು ಮನೆಯಿಂದ ಹೊರನಡೆದಿದ್ದಾರೆ.

Image result for yash

ಸುಖಾ ಸುಮ್ಮನೆ ಊಹಾಪೋಹ
ಇನ್ನು ಯಶ್ ಮನೆಯಲ್ಲಿಯೂ ತನಿಖಾ ಕಾರ್ಯ ಮುಕ್ತಾಯಗೊಂಡಿದೆ. ಹೊಸಕೆರೆಹಳ್ಳಿ ಮನೆಯಿಂದ  ಹೊರ ಬಂದ ನಟ ಯಶ್​, ಸುಖಾ ಸುಮ್ಮನೆ ಊಹಾಪೋಹಗಳನ್ನು ಮಾಧ್ಯಮದವರು ಮಾಡಿದ್ದಾರೆ.. ಅಂತೆ ಜಂತೆ ಸುದ್ದಿಗಳಿಗೆ ಕಿವಿ ಕೊಡಬೇಡಿ.. ನಮ್ಮ ಮನೆಯಲ್ಲಿ ಅಷ್ಟು ಸಿಕ್ತು, ಇಷ್ಟು ಸಿಕ್ತು ಅಂತಾ ಬೇಕಾಬಿಟ್ಟಿ ಸುದ್ದಿ ಹಬ್ಬಿಸಲಾಗಿದೆ..  ಎರಡು ದಿನ ಹೆಂಡತಿ ಹಾಗೂ ಮಗಳನ್ನು ಬಿಟ್ಟಿರಲು ಕಷ್ಟವಾಗಿತ್ತು.. ಸುದ್ದಿ ಹಬ್ಬಿಸುವ ಮುನ್ನ ಸ್ವಲ್ಪ ಆಲೋಚಿಸಬೇಕು..,ಇಂತಹ ಬುಲ್​ಶಿಟ್ ​ಗಳನ್ನು ತೋರಿಸಬಾರದು ಎಂದು ಯಶ್ ಖಡಕ್ ಆಗಿ ಹೇಳಿದ್ದಾರೆ.. ಇನ್ನು ಮನೆಯ ಮುಂದೆ  ಅಭಿಮಾನಿಗಳು ನಿಂತಿದ್ದರು ಎಂದು ಕೇಳಿದ್ದೆ ಅವರಿಗೆ ಧನ್ಯವಾದಗಳು ಎಂದು ಹೇಳಿದರು…

 

Tags

Related Articles