ಸುದ್ದಿಗಳು

ಯಶ್ ಜೊತೆಗಿನ ಫೋಟೋ ಹಾಕಿ ಟ್ವಿಟ್ ಮಾಡಿದ ಫರ್ಹಾನ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ

ಬೆಂಗಳೂರು, ಡಿ.06: ಒಂದು ಕಡೆ ಲಿರಿಕಲ್ ಹಾಡಿನ ಮೂಲಕ ‘ಕೆಜಿಎಫ್’ ಚಿತ್ರ ದೇಶಾದ್ಯಂತ ಸಕತ್ ಸೌಂಡ್ ಮಾಡುತ್ತಿದೆ. ಇದರ ಬೆನ್ನಲ್ಲೇ ಕೆಜಿಎಫ್  ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದೆ. ಇವೆಲ್ಲದರ ನಡುವೆ ಇದೀಘ ಫರ್ಹಾನ್ ಖಾಬ್ ಯಶ್ ಜೊತೆಗಿನ ಫೋಟೋ ಒಂದನ್ನು ಟ್ವಿಟ್ ಮಾಡಿದ್ದಾರೆ.

ಬಿಡುಗಡೆಯಾಯ್ತು ‘ಕೆಜಿಎಫ್’ ಚಿತ್ರದ ಎರಡನೇ ಟ್ರೇಲರ್

‘ಕೆಜಿಎಫ್’ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆಯಾಗುತ್ತಿದ್ದಂತೆ ಎಲ್ಲಿ ನೋಡಿದರೂ ಕೆಜಿಎಫ್ ಚಿತ್ರದ್ದೇ ಮಾತುಗಳು ಹರಿದಾಡುತ್ತಿದೆ. ಹಾಡು ಆ ಥರಾ ಇದೆ, ಈ ಥರಾ ಇದೆ, ಸೂಪರ್ ಆಗಿದೆ, ಅಂತೆಲ್ಲ ಮಾತನಾಡುತ್ತಿರುವಾಗಲೇ ಸದ್ದುಗದ್ದಲವಿಲ್ಲದೇ ಚಿತ್ರತಂಡ ಈಗ ಕೆಜಿಎಫ್ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆ ಮಾಡಿ ಸಿನಿ ಪ್ರೇಮಿಗಳಿಗೆ ಮತ್ತೊಂದು ಖುಷಿ ವಿಚಾರ ನೀಡಿದೆ.ಟ್ವಿಟ್ಟರ್‌ ನಲ್ಲೇನಿದೆ…?

ನಿನ್ನೆ ಬಿಡುಗಡೆಯಾಗಿರುವ ಟ್ರೇಲರ್ ಪ್ರೇಕ್ಷಕರ ಮನ ಗೆದ್ದಿದೆ. ಇದೀಗ ಈ ಟ್ರೇಲರ್ ಬಿಡುಗಡೆ ಮಾಡಿರುವ ಫರ್ಹಾನ್ ಅಖ್ತರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಯಶ್ ಜೊತೆಗಿನ  ಫೋಟೋವನ್ನು  ಹಾಕಿದ್ದಾರೆ. ಅಷ್ಟೆ ಅಲ್ಲ ರಾಖಿ ಈಸ್ ಇಯರ್ ಎಂಬ ಅಡಿ ಬರಹವನ್ನು ಬರೆದಿದ್ದಾರೆ. ಈ ಫೋಟೋ ವಿಶೇಷವಾಗಿದ್ದು, ಅಭಿಮಾನಿಗಳು ಈ ಪೋಟೊಗೆ ಫಿದಾ ಆಗಿದ್ದಾರೆ.

ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ ಕೆಜಿಎಫ್ ಚಿತ್ರ

ಇನ್ನೂ ಈ ಚಿತ್ರದ ಮೇಲೆ ಎಲ್ಲರ ಕಣ್ಣು ಇದ್ದು , ಚಿತ್ರ ಬಿಡುಗಡೆಗಾಗಿ ದಿನಗಳನ್ನು ಲೆಕ್ಕ ಹಾಕುತ್ತ ಕಾಯುತ್ತಿದ್ದಾರೆ ಚಿತ್ರ ಪ್ರೇಮಿಗಳು. ಅದರಲ್ಲೂ ಅಚ್ಚರಿ ಅಂದ್ರೆ ಡಿಸೆಂಬರ್ 21ಕ್ಕೆ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ ಈ ಕೆಜಿಎಫ್, ಹಾಗಾಗಿ ಸ್ಯಾಂಡಲ್‌ವುಡ್ ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳು ಕೂಡಾ ಕೆಜಿಎಫ್‌ ಗಾಗಿ ಕಾದು ಕುಳಿತಿವೆ. ಸದ್ಯ ಟ್ರೇಲರ್, ಹಾಡು ಅಂತೆಲ್ಲ ಒಂದಿಲ್ಲೊಂದು ಸುದ್ದಿಯಲ್ಲಿರುವ ಕೆಜಿಎಫ್ ಚಿತ್ರ, ಬಿಡುಗಡೆಯಾಗಿ ಯಾವ ರೀತಿ ಸದ್ದು ಮಾಡುತ್ತೆ ಎಂದು ನೋಡುವುದಕ್ಕೆ ಕೊಟ್ಯಾಂತರ ಜನ ಕಾಯುತ್ತಿದ್ದಾರೆ. ಆದರೆ ಈ ಎಲ್ಲಾ ಕೂತುಹಲಕ್ಕೂ ಡಿಸೆಂಬರ್ 21ರವರೆಗೂ ಕಾಯಲೇಬೇಕು.

Tags