ಸುದ್ದಿಗಳು

ಗರುಡನ ಮನೆಗೆ ಬಂದ ಹೊಸ ಅತಿಥಿಯನ್ನು ಕಂಡ ರಾಕಿಂಗ್ ಸ್ಟಾರ್

ಬೆಂಗಳೂರು, ಏ.02:

‘ಕೆಜಿಎಫ್’ ಸಿನಿಮಾದಲ್ಲಿ ಪ್ರತಿಯೊಂದು ಪಾತ್ರವೂ ಕೂಡ ಮುಖ್ಯ ಅನ್ನೋದು ಸಿನಿಮಾ ನೋಡಿದವರ ಮಾತು. ಅದರಲ್ಲಿರುವ ಹೀರೋಯಿನ್ ನಿಂದ ಜೂನಿಯರ್ ಆರ್ಟಿಸ್ಟ್ ವರೆಗೂ ಈ ಸಿನಿಮಾದಲ್ಲಿ ಪಾತ್ರಗಳು ಮುಖ್ಯವಾಗಿವೆ. ಇದೀಗ ಈ ನಡುವೆ ಗರುಡ ಪಾತ್ರವೂ ಕೂಡ ಮುಖ್ಯವಾಗಿದ್ದಲ್ಲದೇ ಎಲ್ಲರಿಗೂ ಇಷ್ಟವಾಗಿತ್ತು. ಇದೀಗ ಗರುಡ ಪಾತ್ರಧಾರಿ ರಾಮ್ ರವರು ಹೊಸ ಕಾರನ್ನು ಖರೀದಿಸಿದ್ದಾರೆ.

ಗರುಡ ಮನೆಗೆ ಹೊಸ ಕಾರು

ಹೌದು, ‘ಕೆಜಿಎಫ್’ ಸಿನಿಮಾದಲ್ಲಿ ಗರುಡ ಪಾತ್ರ ಮುಖ್ಯವಾಗಿದೆ. ‘ಕೆಜಿಎಫ್’ ಮೂಲಕ ಕನ್ನಡ ಅಷ್ಟೇ ಅಲ್ಲ ಇಡೀ ಚಿತ್ರರಂಗಕ್ಕೆ ವಿಲನ್ ಒಬ್ಬರ ಎಂಟ್ರಿಯಾಗಿದ್ದು, ಇದೀಗ ಈ ಸಿನಿಮಾ ಮೂಲಕ ಗರುಡ ಎನ್ನುವ ಹೆಸರಿನೊಂದಿಗೆ ಚಿರ ಪರಿಚಿತರಾಗಿದ್ದಾರೆ ರಾಮ್. ಇದೀಗ ಈ ರಾಮ್ ಮನೆಗೆ ಹೊಸ ಕಾರೊಂದು ಬಂದಿದ್ದು ಆ ಕಾರು ಕೂಡ ಕೆಜಿಎಫ್ ನಂತೆ ವೀಶೇಷತೆ ಹೊಂದಿದೆ.

ಯಶ್ ರಿಂದ ವಿಶ್

ಗರುಡ ಪಾತ್ರದಾರಿ ರಾಮ್ ಮನೆಗೆ ಇದೀಗ ಫಾಚ್ಯುನರ್ ಕಾರೊಂದು ಬಂದಿದೆ. ರಾಮ್ ಇದೀಗ ಫಾರ್ಚುನರ್ ಕಾರು ಖರೀದಿ ಮಾಡಿದ್ದಾರೆ. ಈ ಕಾರಿನ ವೀಶೇಷತೆ ಅಂದರೆ ಈ ಕಾರಿನ ಮುಂಭಾಗ ಗರುಡನ ಸಿಂಬಲ್ ಹಾಕಿಸಿದ್ದಾರೆ. ಇನ್ನೂ ಈ ಕಾರು ಖರೀದಿಯ ನಂತರ ಗರುಡ ರಾಮ್ ಯಶ್ ಮನೆಗೆ ತೆರಳಿದ್ದಾರೆ. ಈ ವೇಳೆ ಯಶ್ ಕೂಡ ತಮ್ಮ ಪ್ರೀತಿಯ ಸ್ನೇಹಿತನಿಗೆ ವಿಶ್ ಮಾಡಿದ್ದಾರೆ.

ಮದುವೆಯಾಗುವ ಹುಡುಗಿ ಬಗ್ಗೆ ಚಿಕ್ಕಣ್ಣನ ಮಾತು

#balkaninews #sandalwood #garudaram #yash #yashmovies #yashandgarudaram #kgf

Tags