ಸುದ್ದಿಗಳು

ಕಿಚ್ಚ – ದಚ್ಚು ಬಳಿಕ ನಾನಾ ನೀನಾ ಅಂತಾರಾ ಅಪ್ಪು-ಯಶ್..!

ಬೆಂಗಳೂರು, ಮೇ.22:

ಈ ವರ್ಷ ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಹಾಗೂ ಹೈ ಬಜೆಟ್ ಚಿತ್ರಗಳು ಒಂದರ ಹಿಂದೆ ತೆರೆಗಪ್ಪಳಿಸಲು ಕಾದು ಕುಳಿತಿವೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಟಾಪ್ ಹೀರೋಗಳಾದ ಕಿಚ್ಚು- ದಚ್ಚು ನಡುವೆ ಸಿನಿಮಾ ಪೈಪೋಟಿ ನಡೆಯಲಿದೆ. ಕುರುಕ್ಷೇತ್ರ ಹಾಗೂ ಪೈಲ್ವಾನ್ ಒಮ್ಮೆಲೆ ರಿಲೀಸ್ ಆಗ್ತಿರೋದ್ರಿಂದ ಅಭಿಮಾನಿಗಳು ಖುಷಿಯಾಗಿದ್ರೆ, ಕಲೆಕ್ಷನ್ ಮೇಲೆ ಹೊಡೆತ ಬೀಳುತ್ತೆ ಅಂತಿದ್ದಾರೆ ಸಿನಿಮಾ ತಜ್ಞರು.

ಆದರೀಗ ಮತ್ತದೇ ಹಾದಿಯಲ್ಲಿ ಸಾಗ್ತಿದ್ದಾರೆ ಅಪ್ಪು ಹಾಗೂ ಯಶ್. ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ಅಪ್ಪು ಕಾಂಬಿನೇಷನ್ನಲ್ಲಿ ಬರುತ್ತಿರುವ ಎರಡನೇ ಮೂವಿ ಯುವರತ್ನ ಈಗಾಗಲೇ ಬಹಳಷ್ಟು ಸುದ್ದಿ ಮಾಡಿದೆ. ಹೀಗಾಗಿ ಅಭಿಮಾನಿಗಳು ಕಾತುರದಿಂದ ಸಿನಿಮಾ ಬಿಡುಗಡೆಗೆ ಕಾಯ್ತಿದ್ದಾರೆ.

ಇನ್ನೂ ಯುವರತ್ನ ಚಿತ್ರವನ್ನು ಡಿಸೆಂಬರ್ ನಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಬಿಡುಗಡೆ ಮಾಡುವ ಪ್ಲಾನ್ ನಡೆದಿದೆ.. ಮತ್ತೊಂದೆಡೆ ಇಡೀ ದೇಶವೇ ಕಾದು ಕುಳಿತಿರುವ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಕೂಡ ಚಿತ್ರೀಕರಣ ಹಂತದಲ್ಲಿದ್ದು ಸೆಪ್ಟೆಂಬರ್ ಒಳಗಾಗಿ ಶೂಟಿಂಗ್ ಮುಗಿಸುವ ಪ್ಲಾನ್ ನಲ್ಲಿದೆ. ಹೀಗಾಗಿ ಕೆಜಿಎಫ್ ಚಾಪ್ಟರ್-2 ಯಾವಾಗ ಬರುತ್ತೆ ಅಂತ ಕಾಯ್ತಿರೋ ಅಭಿಮಾನಿಗಳನ್ನು ಖುಷಿ ಪಡಿಸುವ ಸಲುವಾಗಿ ಇದೇ ವರ್ಷ ಡಿಸೆಂಬರ್ನಲ್ಲಿ ಕೆಜಿಎಫ್-2 ಬಿಡುಗಡೆ ಮಾಡ್ಬೇಕು ಎಂದು ಪ್ಲಾನ್ ನಡೆದಿದೆ. ಹೀಗಾಗಿ ಕಿಚ್ಚ ದಚ್ಚು ಸಿನಿಮಾಗಳಂತೆ ಪೈಪೋಟಿಗೆ ನಿಲ್ತಾರ ಯಶ್ ಹಾಗೂ ಅಪ್ಪು ಇಲ್ಲ ಕದನ ಬೇಡ ಅಂತಾ ಡೇಟ್ಸ್ ಚೆಂಜ್ ಮಾಡಿಕೊಳ್ಳೂತ್ತಾರಾ ಎನ್ನುವುದನ್ನು ವರ್ಷಾಂತ್ಯದ ವರೆಗೂ ಕಾದು ನೋಡಬೇಕಿದೆ.

Image may contain: 1 person, text

Related image

‘ವಿಶ್ವಾಸಂ’ ಚಿತ್ರದ ರಿಮೇಕ್ ನಲ್ಲಿ ನಟಿಸುತ್ತಿಲ್ಲವೆಂದ ಶಿವರಾಜ್ ಕುಮಾರ್..!!!

#balkaninews #sandalwood #yuvarathnakannadamovie #kgfchapter2 #sudeepphailwan #darshankurukshethra

 

Tags