ಸುದ್ದಿಗಳು

ಡಿಸೆಂಬರ್ ನಲ್ಲಿ ರಾಕಿಂಗ್ ಸ್ಟಾರ್ ಗೆ ಡಬಲ್ ಧಮಾಕ

ಯಶ್ ಅಭಿನಯದ 'ಕೆಜಿಎಫ್' ಸಿನಿಮಾ

ಬೆಂಗಳೂರು, ಅ.11: ರಾಕಿಂಗ್ ಸ್ಟಾರ್ ಯಶ್ ನ ಬಹು ನಿರೀಕ್ಷಿತ ಕೆಜಿಎಫ್ ಸಿನಿಮಾ ನವೆಂಬರ್ ನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿಂದೆ  ಡಿಸೆಂಬರ್ ನಲ್ಲಿ ಬಿಡುಗಡೆಯಾದ ಯಶ್ ಎಲ್ಲ ಚಿತ್ರಗಳು  ಬಾಕ್ಸ್ ಆಫೀಸ್ ನಲ್ಲಿ ಸಖತ್ ಕಲೆಕ್ಷನ್ ಮಾಡಿವೆ. ಅದೇ ರೀತಿ ಕೆಜಿಎಫ್ ಸಿನಿಮಾ ಕೂಡ ಭರ್ಜರಿಯಾಗಿ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುವ ಎಲ್ಲ  ಸೂಚನೆಗಳು ಸಿಗುತ್ತಿವೆ.

ತಂದೆಯಾಗಲಿದ್ದಾರೆ ರಾಕಿಂಗ್ ಸ್ಟಾರ್

ಈಗಾಗಲೇ ಎಲ್ಲರಿಗೂ ಗೊತ್ತಿರುವಂತೆ ನಟಿ ರಾಧಿಕಾ ಪಂಡಿತ್ ಆರು ತಿಂಗಳ ಗರ್ಭಿಣಿ ಡಿಸೆಂಬರ್ ತಿಂಗಳಲ್ಲೇ ಮಗುವಿಗೆ ಜನ್ಮ ನೀಡಲಿದ್ದು,  ಅದೇ ತಿಂಗಳು ಯಶ್ ಅವರ ಮಹತ್ವಾಕಾಂಕ್ಷೆಯ ಚಿತ್ರ ‘ಕೆಜಿಎಫ್’ ಕೂಡ ತೆರೆಗೆ ಬರಲಿದೆ.ಡಿಸೆಂಬರ್ ನಲ್ಲಿ ಯಶ್ ಮನೆಗೆ ಮುದ್ದು ಮಗುವಿನ ಆಗಮನ

ಯಶ್  ಅವರೇ ಹೇಳುವಂತೆ ನನಗೆ ಕೆಜಿಎಫ್ ಕೂಡ ಒಂದು ಮಗು ಹಾಗೂ ರಾಧಿಕಾ ಕೂಡ ಒಂದು ಮಗುವಿಗೆ ಜನ್ಮ ನೀಡಲಿದ್ದಾರೆ. ಹಾಗಾಗಿ ಇಬ್ಬರಿಗೂ ಕೂಡ ನಾನು ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ. ಯಾವ ರೀತಿಯಲ್ಲಿ ಸಮಯ ಹೊಂದಾಣಿಕೆ  ಮಾಡಿಕೊಳ್ಳುತ್ತೇನೆ ಎಂಬುದು ನಮಗೆ ಕೂಡ ಇನ್ನೂ ತಿಳಿದಿಲ್ಲ ಎಂದಿದ್ದಾರೆ .ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ

ಸಿನಿಮಾ ಬಿಡುಗಡೆಯಾಗುತ್ತಿದ್ದು ಹಾಗೂ ರಾಧಿಕಾ ಡಿಸೆಂಬರ್ ನಲ್ಲೇ ಮಗುವಿಗೆ ಜನ್ಮ ಕೊಡುತ್ತಿರುವುದು ಯಶ್ ಗೆ ತಲೆನೋವಾಗಿದೆ. ಆದರೆ ಅಭಿಮಾನಿಗಳಿಗಂತೂ ಸಂಭ್ರಮ ದುಪ್ಪಟ್ಟಾಗಿದೆ. ಇತ್ತ ಸಿನಿಮಾ ನೋಡಿ ಆನಂದ ಪಡೆಯುವ ಒಂದು ವಿಚಾರವಾದರೆ ಮತ್ತೊಂದೆಡೆ ರಾಕಿಂಗ್ ಸ್ಟಾರ್ ಮನೆಗೆ ಮುದ್ದು ಮಗುವಿನ ಆಗಮನವಾಗಲಿದೆ ಎನ್ನುವ ಸಂತೋಷ ಸಂಭ್ರಮ ಅಭಿಮಾನಿಗಳಿಗೆ ಎನ್ನಲಾಗಿದೆ.

Tags