ಸುದ್ದಿಗಳು

ಯಶ್ ಹಾಗೂ ರಕ್ಷಿತ್ ಗೆ ಡಿಸೆಂಬರ್ ಲಕ್ಕಿ ತಿಂಗಳಂತೆ…!

ಕನ್ನಡ ರಾಜ್ಯೋತ್ಸವ ವಿಶೇಷವಾಗಿ ತೆರೆಗೆ ಬರಲಿರುವ ಕೆಜಿಎಫ್

ರಾಧಿಕಾ ಡೆಲಿವರಿ ಡೇಟ್ ಡಿಸೆಂಬರ್ ನಲ್ಲಿರುವ ಕಾರಣ, ಹೀಗಾಗಿ ಈ ಹೊತ್ತಿನಲ್ಲಿ ಸಿನಿಮಾ ವಿಚಾರವಾಗಿ ಬ್ಯುಸಿ ಆಗಿರಬಾರದು ಅನ್ನೋ ಕಾರಣಕ್ಕೆ ಕೆಜಿಎಫ್ ಸಿನಿಮಾ ಒಂದು ತಿಂಗಳು ಮೊದಲೇ ರಿಲೀಸ್ ಆಗಲಿದೆ.

ಬೆಂಗಳೂರು, ಆ.30: ಆರಂಭದಿಂದಲೇ ‘ಕೆಜಿಎಫ್’ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿಕೊಂಡು ಬಂದಿತ್ತು. ಎರಡು ವರ್ಷಗಳಿಂದ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. 5 ಭಾಷೆಗಳಲ್ಲಿ ತೆರೆಕಾಣಲಿರುವ ಈ ಸಿನಿಮಾದ ಮೊದಲ ಪಾರ್ಟ್ ಯಶ್ ಲಕ್ಕಿ ತಿಂಗಳು  ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆಯಂತ ಯಶ್  ಫ್ಯಾನ್ಸ್ ಅಂದುಕೊಂಡಿದ್ದರು. ಆದ್ರೆ ‘ಕೆಜಿಎಫ್’ ಒಂದು ತಿಂಗಳು ಮೊದಲೇ ಅಂದರೆ ನವೆಂಬರ್ ನಲ್ಲಿ ಕನ್ನಡ ರಾಜ್ಯೋತ್ಸವ ವಿಶೇಷವಾಗಿ  ತೆರೆಗೆ ಬರಲಿದೆ.

ಸಿನಿಮಾ ವಿಚಾರವಾಗಿ ಡಿಸೆಂಬರ್ ತಿಂಗಳಿನಲ್ಲಿ ಬ್ಯುಸಿಯಾಗಿರುವುದಿಲ್ಲ

ಡಿಸೆಂಬರ್ ನಲ್ಲಿ ‘ಕೆಜಿಎಫ್’ ಚಿತ್ರವನ್ನು ರಿಲೀಸ್ ಮಾಡುವ ಎಲ್ಲಾ ಅವಕಾಶ ಯಶ್ ಗೆ ಇದೆ. ಆದ್ರು ಲಕ್ಕಿ ತಿಂಗಳಿಗೆ ಸಿನಿಮಾ ಯಾಕೆ ರಿಲೀಸ್ ಆಗ್ತಿಲ್ಲ ಅನ್ನೋದಕ್ಕೆ ವಿಶೇಷ ಕಾರಣ ಇದೆ. ಹೌದು ಈ ಡಿಸೆಂಬರ್ ನಲ್ಲಿ ಯಶ್ ಅಪ್ಪನಾಗಿ ಬಡ್ತಿ ಪಡೆಯಲಿದ್ದಾರೆ. ರಾಧಿಕಾ ಡೆಲಿವರಿ ಡೇಟ್ ಡಿಸೆಂಬರ್ ನಲ್ಲಿರುವ ಕಾರಣ, ಹೀಗಾಗಿ ಈ ಹೊತ್ತಿನಲ್ಲಿ ಸಿನಿಮಾ ವಿಚಾರವಾಗಿ ಬ್ಯುಸಿ ಆಗಿರಬಾರದು ಅನ್ನೋ ಕಾರಣಕ್ಕೆ ‘ಕೆಜಿಎಫ್’ ಸಿನಿಮಾ ಒಂದು ತಿಂಗಳು ಮೊದಲೇ ರಿಲೀಸ್ ಆಗಲಿದೆ.  ಹೀಗಾಗಿ ಈ ವರ್ಷದ ಡಿಸೆಂಬರ್ ಕೂಡ ಯಶ್ ಬದುಕಲ್ಲಿ ತುಂಬಾ ಪ್ರಮುಖವಾಗಿರಲಿದೆ.ವರ್ಷದ ಕೊನೆಯಲ್ಲಿ ‘ಅವನೇ ಶ್ರೀಮನ್ನಾರಾಯಣ’

ಆದ್ರೆ, ವರ್ಷದ  ಕೊನೆಯ ವಾರ ಯಾವ ಬಿಗ್ ಸಿನಿಮಾ ತೆರೆಗೆ ಬರಬಹುದು ಅನ್ನೋ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಅದಕ್ಕೆ ಉತ್ತರ ‘ಅವನೇ ಶ್ರೀಮನ್ನಾರಾಯಣ’. ಹೌದು ರಕ್ಷಿತ್ ನಟನೆಯ ಈ ಸಿನಿಮಾ ವರ್ಷದ ಕೊನೆಯಲ್ಲಿ ತೆರೆಗೆ ಬರಲಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಪಾಲಿಗೂ ಡಿಸೆಂಬರ್ ಲಕ್ಕಿ. ಯಾಕಂದ್ರೆ ‘ಕಿರಿಕ್ ಪಾರ್ಟಿ’ ಸಿನಿಮಾ 2016ರ ಡಿಸೆಂಬರ್ 29ರಂದು ತೆರೆಗೆ ಬಂದಿತ್ತು. ವರ್ಷದ ಕೊನೆಯಲ್ಲಿ ತೆರೆಗೆ ಬಂದ ಈ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಹೀಗಾಗಿ ಡಿಸೆಂಬರ್ ಮೇಲೆ ರಕ್ಷಿತ್ ಗೂ ಕೂಡಾ ಮೋಹವಿದೆ.ಒಟ್ಟಿನಲ್ಲಿ ಯಶ್ ಮತ್ತು ರಕ್ಷಿತ್ ಗೆ  ಡಿಸೆಂಬರ್ ಲಕ್ಕಿ ಅನ್ನೋದರಲ್ಲಿ ಅನುಮಾನವೇ ಇಲ್ಲ. ವಿಶೇಷ ಅಂದ್ರೆ ಈ ವರ್ಷದ ಡಿಸೆಂಬರ್ ಕೂಡ ಅವರಿಬ್ಬರ ಲೈಫ್ ನಲ್ಲಿ ವಿಶೇಷ ಸ್ಥಾನ ವಹಿಸಲಿದೆ.

 

Tags