ಸುದ್ದಿಗಳು

‘ಭರಾಟೆ’ ಗೆ ಸಿನಿಮಾಗೆ ವಿಶ್ ಮಾಡಿದ ಯಶ್ ಮತ್ತು ವಸಿಷ್ಠ ಸಿಂಹ

'ಭರ್ಜರಿ' ಚೇತನ್ ನಿರ್ದೇಶನದ ಸಿನಿಮಾ ‘ಭರಾಟೆ’

ಬೆಂಗಳೂರು, ಡಿ.15: ನಿರ್ದೇಶಕ ಭರ್ಜರಿ ಚೇತನ್ ನಿರ್ದೇಶನ ಮಾಡುತ್ತಿರುವ ‘ಭರಾಟೆ’ ಚಿತ್ರ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಇದೀಗ ಈ ಸಿನಿಮಾದ ಟೀಸರ್ ವೊಂದು ಬಿಡುಗಡೆಗೆ ಸಜ್ಜಾಗಿದೆ.

ಭರಾಟೆ ಟೀಸರ್‌ ಗೆ ರೆಡಿ

ಬಹದ್ದೂರ್ ಚೇತನ್ ನಿರ್ದೇಶನ ಮಾಡುತ್ತಿರುವ ‘ಭರಾಟೆ’ ಚಿತ್ರದಲ್ಲಿ ಶ್ರೀ ಮುರುಳಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಭಾರಿ ಸದ್ದು ಮಾಡಿತ್ತು, ಇದೀಗ ಟೀಸರ್ ಬಿಡುಗಡೆಗೆ ರೆಡಿಯಾಗಿದೆ. ಈಗಾಗಲೇ ಟೀಸರ್ ನೋಡಿರುವ ಯಶ್ ಫುಲ್ ಖುಷಿಯಾಗಿದ್ದಾರೆ. ಇನ್ನು ಸಿನಿಮಾಗೆ ಆಲ್ ದಿ ಬೆಸ್ಟ್ ಎನ್ನುತ್ತಿದ್ದಾರೆ.

ಒಳ್ಳೆಯದಾಗಲಿ ಎಂದ ಯಶ್

ಹೌದು, ಟೀಸರ್ ನೋಡಿದ ನಂತರ ಮಾತನಾಡಿದ ಯಶ್, ಈಗಾಗಲೇ ಟೀಸರ್ ಕೂಡ ತುಂಬಾ ಚೆನ್ನಾಗಿದೆ. ಮೇಕಿಂಗ್ ಕೂಡ ತುಂಬಾ ಮೂಡಿಬಂದಿದೆ. ರಾಜನಂತೆ ರಾಜಸ್ಥಾನದಲ್ಲಿ ಕಾಣಿಸಿಕೊಂಡಿದ್ದೀಯ. ನಿಂಗೆ ಆರೋಗ್ಯ ಆಯಸ್ಸು, ಯಶಸ್ಸು ಕೊಡಲಿ ಆ ದೇವರು. ಚಿಕ್ಕಂದಿನಿಂದಲೂ ನಿನ್ನ ನೋಡುತ್ತಿದ್ದೇನೆ ನಿನಗೆ ಒಳ್ಳೆಯದಾಗಲಿ. ಯಶಸ್ವಿ ಸಿನಿಮಾಗಳನ್ನು ನೀಡು. ಚೇತನ್ ಕೂಡ ಒಳ್ಳೆಯ ನಿರ್ದೇಶಕ. ನನ್ನ ಸಿನಿಮಾಗಳಲ್ಲೂ ಸಿನಿಮಾ ಮಾಡಿದವರು, ಅವರ ಮೇಲೆ ಭರವಸೆ ಇದೆ. ಪ್ರತಿ ಸಿನಿಮಾದಲ್ಲೂ ಕೂಡ ಅವರ ಪರಿಶ್ರಮ ಕಾಣಿಸುತ್ತಿದೆ ಎಂದು ಶುಭ ಕೋರಿದರು.

 

View this post on Instagram

 

#RockingStar @yash.official__ wishes #The Team #BHARAATE:)

A post shared by SriiMurali OFFICIAL (@sriimurali_official) on

ಸಿನಿಮಾ ಬಗ್ಗೆ ಚಿಟ್ಟೆ ಮಾತು

ಭರಾಟೆ ಸಿನಿಮಾಗೆ ವಿಶ್ ಮಾಡಿದ ವಸಿಷ್ಠ ಸಿಂಹ, ನಾನು ಮಫ್ತಿ ಸಿನಿಮಾದಲ್ಲಿ ಶ್ರೀ ಮುರುಳಿ ಜೊತೆಗೆ ನಟಿಸಿದ್ದೇನೆ. ಇದೀಗ ಮುರುಳಿ ಭರಾಟೆ ಸಿನಿಮಾ ಮಾಡಿದ್ದಾರೆ. ಭರಾಟೆಯ ಭರಾಟೆ ಜೋರಾಗಿದೆ. ಇದೇ ರೀತಿ ಮುಂದುವರೆಯಲಿ ದೊಡ್ಡ ಮಟ್ಟದಲ್ಲಿ ಹೆಸರು ತಂದುಕೊಡಲಿ, ತುಂಬಾ ಚೆನ್ನಾಗಿ ಕಾಣುತ್ತಿದ್ದೀರಾ, ಭಗವಂತ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಎಂದು ವಿಡಿಯೋ ಮೂಲಕ ತಿಳಿಸಿದರು.

 

View this post on Instagram

 

#Sandalwood #Simha @vasishta_n_simha #Gurujii Wishes The Team #BHARAATE !❤

A post shared by SriiMurali OFFICIAL (@sriimurali_official) on

ಹೇಗಿರುತ್ತೆ ಭರಾಟೆ ಟೀಸರ್..?

ಎಂದಿನಂತೆ ಉಗ್ರಂ, ರಥಾವರ, ಹಾಗೂ ಮಫ್ತಿಯಂತಹ ಚಿತ್ರಗಳ ಟೀಸರ್‌ ಗಳಲ್ಲಿ ತಮ್ಮ ಡೈಲಾಗ್ಸ್ ಮೂಲಕವೇ ಸಿನಿ ಪ್ರೇಕ್ಷಕರಿಗೆ ಚಿತ್ರದ ಬಗ್ಗೆ ಕುತೂಹಲ ಹುಟ್ಟುವಂತೆ ಮಾಡಿದ ನಟ ಶ್ರೀ ಮುರುಳಿ, ಭರಾಟೆ ಚಿತ್ರದಲ್ಲೂ ಖಡಕ್ ಡೈಲಾಗ್ ಹೊಡೆಯುವ ಮೂಲಕ ಭರಾಟೆ ಮೇಲೆ ಭರ್ಜರಿಯಾದ ನೀರೀಕ್ಷೆಗಳನ್ನಿಡುವಂತೆ ಮಾಡಿದ್ದಾರೆ. ನಿರ್ದೇಶಕ ಚೇತನ್ ಕೂಡಾ ತಮ್ಮ ಮೊದಲೆರಡು ಚಿತ್ರಗಳಂತೆ ಈ ಚಿತ್ರವನ್ನೂ ಯಶಸ್ಸಿನ ಹಾದಿಯತ್ತ ಕೊಂಡೊಯ್ಯುವ ಲಕ್ಷಣಗಳು ಸಿನಿಮಾ ಪೋಸ್ಟರ್‌ ಗಳಲ್ಲಿ ಗೊತ್ತಾಗಿತ್ತು. ಇದೀಗ ಟೀಸರ್ ಹೇಗಿರುತ್ತೆ ಅನ್ನವುದು ಕೂಡ ಮುಖ್ಯವಾಗಿದೆ.

 

Tags