ಸುದ್ದಿಗಳು

ಯಶ್ ಥರ ಗಡ್ಡ ಬಿಡಬೇಕು ಎಂದ ಬಾಲಿವುಡ್ ನಟ ಯಾರು …?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾ ಕೆಜಿಎಫ್

ಬೆಂಗಳೂರು, ಡಿ,6: ಈಗಾಗಲೇ ‘ಕೆಜಿಎಫ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಬಹಳಷ್ಟು ನಿರೀಕ್ಷೆ ಹುಟ್ಟುಕೊಂಡಿದೆ. ‘ಕೆಜಿಎಫ್’ ಟ್ರೈಲರ್ ನೋಡಿ ಈಡೀ ಬಾಲಿವುಡ್ ಮಂದಿ ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡುವಂತಾಗಿದೆ. ಕೆಜಿಎಫ್ ಕತೆ ಅದ್ಭುತ ಹಾಗೂ ಸುಂದರವಾದ ವಿಶುವಲ್ಸ್ ಇದೆ. ನಾನೂ ಕೂಡ ಯಶ್ ಥರ ಗಡ್ಡ ಬಿಡಬೇಕು ಎಂದು ಬಾಲಿವುಡ್ ನಟ ನಿರ್ಮಾಪಕ ಫರ್ಹಾನ್ ಅಖ್ತರ್ ಹೇಳಿಕೊಂಡಿದ್ದಾರೆ.ಬಾಲಿವುಡ್ ನಲ್ಲಿ ಯಶ್ ಹವಾ …!

ಹೌದು, ಹಿಂದಿಯಲ್ಲಿ ಈ ಸಿನಿಮಾ ವಿತರಿಸುವುದಕ್ಕೆ ನಮಗೆ ಖುಷಿ ಇದೆ. ಕೆಜಿಎಫ್ ಅದ್ಭುತ ಕತೆ ಮತ್ತು ಸುಂದರವಾದ ವಿಶುವಲ್ಸ್ ಹೊಂದಿದೆ. ನಾನೂ ಯಶ್ ಥರ ಗಡ್ಡ ಬಿಡಬೇಕು ಅಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ ಫರ್ಹಾನ್ . ಕೆಜಿಎಫ್ ಹಿಂದಿಯ ಎರಡನೇ ಟ್ರೈಲರ್ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಫರ್ಹಾನ್ ಅವರು ಕೆಜಿಎಫ್, ಯಶ್ ಮತ್ತು ಚಿತ್ರತಂಡವನ್ನು ಮೆಚ್ಚಿಕೊಂಡರು. ಇಂಟರೆಸ್ಟಿಂಗ್ ಅಂದ್ರೆ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಟ್ರೈಲರ್ 1 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಅಷ್ಟರಮಟ್ಟಿಗೆ ಬಾಲಿವುಡ್‌ ನಲ್ಲಿ ಯಶ್ ಹವಾ ಶುರುವಾಗಿಬಿಟ್ಟಿದೆ.ಮುಂಬೈನಲ್ಲಿ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೆಜಿಎಫ್’ …!

ಪ್ರಮೋಷನ್ ಕಾರ್ಯಕ್ರಮದ ಸಲುವಾಗಿ ಚಿತ್ರದ ನಾಯಕ ನಟ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಎರಡು ದಿನಗಳ ಕಾಲ ಮುಂಬೈನಲ್ಲಿದ್ದರು. ‘ಬಾಲಿವುಡ್ ನಟರಂತೆಯೇ ಯಶ್ ಅವರನ್ನು ಮುಂಬೈಯಲ್ಲಿ ಸ್ವಾಗತಿಸಿದ್ದಾರೆ. ಸದ್ಯ ಕೆಜಿಎಫ್ ಮುಂಬೈನಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ ಎನ್ನುವುದು ಇನ್ನು ತಿಳಿದುಬಂದಿಲ್ಲ. ಆದರೆ, ಚಿತ್ರಕ್ಕೆ ಈಗಲೇ ಭಾರೀ ಬೇಡಿಕೆ ಬಂದಿದೆ ಎನ್ನುವ ಮಾತನ್ನು ವಿತರಕ ಫರ್ಹಾನ್ ಅಖ್ತರ್ ಹೇಳಿಕೊಂಡಿದ್ದಾರೆ. ಸದ್ಯಕ್ಕೀಗ ಸಿಕ್ಕಿರುವ ರೆಸ್ಪಾನ್ಸ್ ನೋಡಿದರೆ, ಮುಂಬೈನಲ್ಲಿ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಕೆಜಿಎಫ್’ ತೆರೆ ಕಾಣುವುದು ಗ್ಯಾರಂಟಿ.

Tags