ಸುದ್ದಿಗಳು

ಒಂದು ಮಾಧ್ಯಮ ನನ್ನನು ಟಾರ್ಗೆಟ್ ಮಾಡಿದೆ: ಗರಂ ಆದ ರಾಕಿಂಗ್ ಸ್ಟಾರ್ ಯಶ್

ಸುದ್ದಿಗಾರರು ಕೇಳಿದ ಪ್ರಶ್ನೆಗೆ ಗರಂ ಆಗಿಯೇ ಉತ್ತರಿಸಿದ ಯಶ್

ಬೆಂಗಳೂರು.ಜ.11: ಕೆಲವು ದಿನಗಳ ಹಿಂದೆಯಷ್ಟೇ ಸ್ಯಾಂಡಲ್ ವುಡ್ ಕೆಲವು ನಟರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಸತತ ಮೂರು ದಿನಗಳ ಕಾಲ ಯಶ್ ಮನೆಯಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಸಾಲದಕ್ಕೆ, ಯಶ್ ಪತ್ನಿ ರಾಧಿಕಾ ಪಂಡಿತ್ ಮನೆಯಲ್ಲೂ ಶೋಧ ನಡೆದಿತ್ತು. ಇಷ್ಟೆಲ್ಲಾ ಆದ್ಮೇಲೆ ಇಂದು ವಿಚಾರಣೆಗಾಗಿ ತಾಯಿ ಪುಷ್ಟ ಜೊತೆಗೆ ಯಶ್ ಐಟಿ ಕಛೇರಿಗೆ ಆಗಮಿಸಿದ್ದರು.

ಯಶ್ ಗೆ 40 ಕೋಟಿ ಸಾಲವಿದೆ

ಐಟಿ ಕಛೇರಿಯಿಂದ ಹೊರ ಬಂದ ಯಶ್, ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಗರಂ ಕೂಡಾ ಆದರು, “ಯಶ್ ಗೆ 40 ಕೋಟಿ ಸಾಲ ಇದೆ, ಯಶ್ ಆಡಿಟರ್ ಮನೆ ಮೇಲೆ ದಾಳಿ ನಡೆಸಿದ್ದಾರೆ ಅಂತಾ ಒಂದು ಮಾಧ್ಯಮ ಸುಳ್ಳು ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದೆ. ಇಂತಹ ವದಂತಿ ಯಾಕೆ ಹರಡುತ್ತೀರಿ. ನಮ್ಮ ಮನೆಯಲ್ಲಿ ಎಷ್ಟು ಕೋಟಿ ಸಿಕ್ಕಿದೆ ಅಂತ ಅಧಿಕಾರಿಗಳು ಹೇಳಿದ್ದಾರಾ? ಎಂದು ಖಾರವಾಗಿ ಯಶ್ ಪ್ರಶ್ನಿಸಿದರು.

ಆ ಮಾಧ್ಯಮ ಇದೆಯಲ್ಲಾ

“ನಾನು ಪಬ್ಲಿಕ್ ಪಿಗರ್ ಇರಬಹುದು. ಹಾಗಂತಾ ನನ್ನ ಎಲ್ಲಾ ವಿಷಯಗಳನ್ನು ಹೇಳಲು ಆಗುವುದಿಲ್ಲ. ಹಾಗಂತಾ ಸಮಾಜದ ಕಣ್ತಪ್ಪಿಸಿ ನನಗೆ ಏನೂ ಮಾಡಲು ಸಾಧ್ಯವಿಲ್ಲ. ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಆದರೆ ಊಹಾಪೋಹಗಳಿಗೆಲ್ಲಾ ಉತ್ತರಿಸಲ್ಲ” ಎಂದು ಯಶ್ ಖಡಕ್ ಆಗಿಯೇ ಹೇಳಿದ್ದಾರೆ.

ಸುಮ್ಮ ಸುಮ್ಮನೇ ಸುಳ್ಳು ಸುದ್ದಿ ಹಬ್ಬಿಸಬೇಡಿ

“ಕೆಲವು ಕಡೆ ನನಗೆ 40 ಕೋಟಿ ಲೋನ್ ಇದೆ ಎನ್ನುವ ಸುದ್ದಿ ಹರಿದಾಡುತ್ತಿದೆ, ಆದರೆ ನನಗೆ ಅಷ್ಟು ಹಣದ ಅವಶ್ಯಕತೆ ಏನು? ನಾನೇಕೆ ಅಷ್ಟು ಸಾಲ ಪಡೆಯಲಿ. ಆ ಒಂದು ಮಾಧ್ಯಮ ನನ್ನ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನು ಹಬ್ಬಿಸುತ್ತಿದೆ.

ಸಾರ್ವಜನಿಕ ವ್ಯಕ್ತಿ ಎಂದ ತಕ್ಷಣ ತೇಜೋವಧೆ ಮಾಡಿಕೊಂಡು ಇದ್ದರೆ, ನೋಡಿಕೊಂಡು ನಾನು ಸುಮ್ಮನೆ ಇರಲ್ಲ. ವೈಯುಕ್ತಿಕ ದ್ವೇಷಗಳನ್ನು ಇಟ್ಟುಕೊಳ್ಳಬಾರದು. ನನಗೆ ಯಾರ ಮೇಲೂ ವೈಯುಕ್ತಿಕ ದ್ವೇಷ ಇಲ್ಲ. ಯಶ್ ವಿಚಾರಣೆಗೆ ಬರಲಿಲ್ಲ, ಶೂಟಿಂಗ್ ನಲ್ಲಿದ್ದಾರೆ ಅಂತೆಲ್ಲಾ ಸುದ್ದಿ ಬಂತು. ನಾನು ಶೂಟಿಂಗ್ ಮಾಡುತ್ತಿಲ್ಲವೆಂದು ಇಡೀ ಕರ್ನಾಟಕಕ್ಕೆ ಗೊತ್ತು. ಹೀಗೆಲ್ಲಾ ಸುಳ್ಳು ಹೇಳಬಾರದು ” ಎಂದು ಯಶ್ ಹೇಳಿದ ಹೇಳಿಕೆಗೆ, ‘ಯಾವ ಮಾಧ್ಯಮ ಹೇಳಿ…” ಎಂದು ಮಾಧ್ಯಮದವರು ಕೇಳಿದಾಗ, ”ಅದು ಜನರಿಗೆ ಗೊತ್ತಾಗುತ್ತದೆ ಬಿಡಿ” ಅಂತ ಹೇಳಿದರು.

#yash, #balkaninews #kgf, #filmnews, #kannadasuddigalu

Tags