ಸುದ್ದಿಗಳು

ಯಶ್ ಬೆಂಗಳೂರಿಗೆ ಬಂದಾಗ ಇದ್ದಿದ್ದು ಕೇವಲ 300ರೂ. ಅಂತೆ!!

ಬೆಂಗಳೂರು,ಜ.8:ಯಶ್ ಈಗ ಚಂದನವನದ ಟಾಪ್ ನಂ.1 ನಟ.. ಕೆಜಿಎಫ್ ಸಕ್ಸಸ್ ಯಶ್ ಗೆ ಅಪಾರ ಕೀರ್ತಿ ತಂದು ಕೊಟ್ಟಿದೆ.. 200 ಕೋಟಿ ಹತ್ತಿರ ಗಳಿಸಿದ ಮೊದಲ ಕನ್ನಡದ ಸಿನಿಮಾ ಎಂಬ ಹೆಗ್ಗಳಿಕೆ ಕೆಜಿಎಫ್ ಗೆ ಸಲ್ಲುತ್ತದೆ..

Image may contain: 1 person, standing, child and outdoor

ಸೋಲು ಒಪ್ಪಿಕೊಳ್ಳಲು ನಾನು ಸಿದ್ದನಿರಲಿಲ್ಲ

ಇನ್ನು ಯಶ್  ಬಂದ ಹಾದಿ ಸುಗಮವಾಗಿಲ್ಲ..  ನಟನಾಗಲು ಮನೆಬಿಟ್ಟು ಓಡಿಹೋಗಲು ನಿರ್ಧರಿಸಿದ್ದರಂತೆ. “ಹೀಗೆ ಮನೆಬಿಟ್ಟು ಬೆಂಗಳೂರಿಗೆ ಬಂದಾಗ ನನ್ನ ಕೈಯಲ್ಲಿದ್ದಿದ್ದು 300 ರೂಪಾಯಿಗಳು. ನಿಜ ಹೇಳಬೇಕು ಎಂದರೆ ಮೊದಲಬಾರಿಗೆ ಬೆಂಗಳೂರಿಗೆ ಬಂದಾಗ ನಾನು ದೊಡ್ಡ ಶಾಕ್ ಗೆ ಒಳಗಾಗಿದ್ದೆ. ಎಲ್ಲಿ ನೋಡಿದರೂ ದೊಡ್ಡ ಸಿನಿ. ಇಷ್ಟೊಂದು ದೊಡ್ಡ ನಗರದಲ್ಲಿ ಹೇಗೆ ಬದುಕುವುದು ಎಂಬ ಗೊಂದಲವಿದ್ದರೂ, ಸೋಲು ಒಪ್ಪಿಕೊಳ್ಳಲು ನಾನು ಸಿದ್ದನಿರಲಿಲ್ಲ. ಇನ್ನೂ ನನ್ನಲ್ಲಿ ಒಂದು ರೀತಿಯ ಆತ್ಮಸ್ಥರ್ಯ ಹಾಗೆ ಇತ್ತು. ಒಂದು ದಿನ ವಿಶ್ವವೇ ನನ್ನತ್ತ ತಿರುಗಿ ನೋಡುತ್ತೆ ಎಂಬ ಭರವಸೆ ನನ್ನಲ್ಲಿತ್ತು. ನಾನು ವಾಪಾಸ್ ಹೋಗೋದು ಬೇಡ ಎಂಬ ನಿರ್ಧಾರ ಕೈಗೊಂಡೆ. ಚಿತ್ರರಂಗದ ಆರಂಭದ ದಿನಗಳು ಕೂಡ ನನ್ನ ಪಾಲಿಗೆ ಅಷ್ಟೊಂದು ಸುಲಭವಾಗಿರಲಿಲ್ಲ ಎಂದಿದ್ದಾರೆ ಯಶ್.

#yash #kgf #balkaninews

 

Tags

Related Articles