ಸುದ್ದಿಗಳು

ನಿಖಿಲ್ ಆಯ್ತು, ಈಗ ದರ್ಶನ್, ಯಶ್ ಮೇಲೆ ಟ್ರೋಲ್..!!!

ಜೋಡೆತ್ತುಗಳು ಖಾಲಿ ಎಂದು ಕೆಲವರಿಂದ ವ್ಯಂಗ

ಬೆಂಗಳೂರು.ಮಾ.24: ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈಗಾಗಲೇ ಸ್ಪರ್ಧಿಗಳಿಂದ ಪ್ರಚಾರ ಕಾರ್ಯವೂ ಭರದಿಂದ ಸಾಗುತ್ತಿದೆ. ಅದರಲ್ಲೂ ಮಂಡ್ಯದ ಕ್ಷೇತ್ರದಲ್ಲಂತೂ ಚುನಾವಣೆಯ ಪ್ರಚಾರ ಬಿರುಸಾಗಿ ಸಾಗುತ್ತಿದೆ.

ಹೌದು, ಮಂಡ್ಯದ ಲೋಕಸಭಾ ಕ್ಷೇತ್ರದ ಚುನಾವಣೆಗಾಗಿ ಸುಮಲತಾ ಅಂಬರೀಶ್ ಹಾಗೂ ನಿಖಿಲ್ ಕುಮಾರ್ ನಡುವೆ ತೀರ್ವ ಪೈಪೋಟಿ ನಡೆಯುತ್ತಿದೆ. ಒಂದು ಕಡೆ ಚುನಾವಣೆಯ ಪ್ರಕ್ರಿಯೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲೂ ಪರಸ್ಪರ ಕಾಲೆಳೆಯೋ ಟ್ರೋಲ್ ಗಳು ನಡೆಯುತ್ತಿವೆ.

ಒಂದು ಕಡೆ ನಿಖಿಲ್ ಕುಮಾರ್ ಬಗ್ಗೆ ‘ನಿಖಿಲ್ ಎಲ್ಲಿದ್ದೀಯಪ್ಪ..?’ ಎಂಬ ಹೆಸರಿನಲ್ಲಿ ಟ್ರೋಲ್ ಗಳು ನಡೆಯುತ್ತಿದ್ದವು. ಅದೇ ವೇಳೆ ಯಶ್ ಹಾಗೂ ದರ್ಶನ್ ಮೇಲೆಯೂ ಸಹ ಟ್ರೋಲ್ ನಡೆಯುತ್ತಿದೆ.

ಸುಮಲತಾ ನಾಮಪತ್ರ ಸಲ್ಲಿಕೆ ವೇಳೆ ಕಾಣಿಸಿಕೊಂಡಿದ್ದ ದರ್ಶನ್ ಹಾಗೂ ಯಶ್ ಬಳಿಕ ಪ್ರಚಾರಕ್ಕೆ ಬಂದಿಲ್ಲ. ಹೀಗಾಗಿ ಮಂಡ್ಯದಿಂದ ಜೋಡೆತ್ತುಗಳು ಕಾಣೆಯಾಗಿವೆ, ಮಿಸ್ಸಿಂಗ್ ಎಂದು ದರ್ಶನ್ ಮತ್ತು ಯಶ್ ಫೋಟೋ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ ಮಾಡಲಾಗುತ್ತಿದೆ.

ದರ್ಶನ್ ಮತ್ತು ಯಶ್ ಅವರನ್ನು ‘ಜೋಡಿ ಎತ್ತುಗಳು’ ಎಂದು ಕರೆದು, ‘ಮಂಡ್ಯದಿಂದ ಕಾಣೆಯಾಗಿವೆ’, ‘ಮಿಸ್ಸಿಂಗ್, ಮಿಸ್ಸಿಂಗ್’ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡುತ್ತಿದ್ದಾರೆ. ಈ ಅಪ-ಪ್ರಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಯಾರು ಮಾಡಿಸುತ್ತಿದ್ದಾರೆ ಎಂಬುದನ್ನು ಕರ್ನಾಟಕದ ಜನತೆ ಕುತೂಹಲದಿಂದ ನೋಡುತ್ತಿದೆ ಎನ್ನಬಹುದು.

ಈ ಘಟನೆಗೆ ಸಂಬಂಧ ಪಡದಿದ್ದರೂ, ಶನಿವಾರ ಬೆಳಗ್ಗಿನ ಜಾವ 3 ಗಂಟೆಗೆ ದುಷ್ಕರ್ಮಿಗಳು ನಟ ದರ್ಶನ್ ಅವರ ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ಕಲ್ಲು ತೂರಿದ್ದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಮಲತಾರವರು ‘ಅವರ ಪಾಡಿಗೆ ಅವರು ಶೂಟಿಂಗ್ ನಲ್ಲಿದ್ದಾರೆ. ಆದರೆ ಖಂಡಿತಾ ಉಳಿದ ದಿನಗಳಲ್ಲಿ ಬಂದೇ ಬರುತ್ತಾರೆ, ಅವರು ಎಲ್ಲಿಗೂ ಹೋಗಿಲ್ಲ” ಎಂದಿದ್ದಾರೆ.

ಶಾರೂಖ್ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಕರಣ್ ಜೋಹರ್

#yash, #darshan, #troll, #balkaninews #sumalathaambarish, #lokasabhaelection, #kumarswami, #nikhilkumar

Tags