ಸುದ್ದಿಗಳು

ಆಂಧ್ರ–ಕಡಪದಲ್ಲಿ ‘ಮಾಸ್ಟರ್ ಪೀಸ್’ನನ್ನು ನೋಡಲು ಮುಗಿಬಿದ್ದ ಫ್ಯಾನ್ಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ .ಕೆ.ಜಿ.ಎಫ್-2’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈಗಾಗಲೇ ಚಿತ್ರತಂಡ ಶೂಟಿಂಗ್ ಗಾಗಿ ಆಂಧ್ರದ ಕಡಪದಲ್ಲಿ ಬೀಡು ಬಿಟ್ಟಿದೆ. ಹೀಗಾಗಿ ಚಿತ್ರೀಕರಣಕ್ಕಾಗಿ ಆಂಧ್ರಕ್ಕೆ ಬಂದ ಯಶ್ ರನ್ನು ನೋಡಿ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ.

‘ಕೆ.ಜಿ.ಎಫ್’ ಸಿನಿಮಾ ಆದ್ಮೇಲೆ ಯಶ್ ನ್ಯಾಶನಲ್ ಸ್ಟಾರ್ ಆಗಿರುವುದು ಎಲ್ಲರಿಗೂ ತಿಳಿದ ವಿಚಾರವೇ..! ಸದ್ಯ ‘ಕೆ.ಜಿ.ಎಫ್-2’ ಶೂಟಿಂಗ್ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಹಳ್ಳಿಯೊಂದರಲ್ಲಿದ್ದಾರೆ. ಶೂಟಿಂಗ್ ಕಾರಣದಿಂದ ಅಲ್ಲಿಗೆ ಹೋಗಿರುವ ಯಶ್ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ನೆರೆದಿದ್ದಾರೆ.

ಹಾಗೆಯೇ ಅಲ್ಲಿ ನೆರೆದಿದ್ದ ಜನರೊಂದಿಗೆ ಯಶ್ ನಗುನಗುತ್ತಲೇ ಸೆಲ್ಫಿಗೆ ಫೋಸ್ ನೀಡಿದ್ದಾರೆ. ಈ ಮೂಲಕ ತೆಲುಗಿನಲ್ಲೂ ರಾಕಿ ಬಾಯ್ ಗೆ ಸಾಕಷ್ಟು ಅಭಿಮಾನಿ ಹೊಂದಿದ್ದಾರೆ ಎಂಬುದಕ್ಕೆ ಈ ದೃಶ್ಯ ಸಾಕ್ಷಿಯಾಗಿದೆ.

ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್ ಫೋಟೋಶೂಟ್

#Yash #YashMovies #YashFans  #SandalwoodMovies  ‍#KannadaSuddigalu

Tags