ಸುದ್ದಿಗಳು

ಅತ್ತೆ – ಮಾವನ ಮದುವೆ ವಾರ್ಷಿಕೋತ್ಸವಕ್ಕೆ ಸ್ಪೆಷಲ್ ಆಗಿ ವಿಶ್ ಮಾಡಿದ ಸಿಂಡ್ರೆಲಾ

ಬೆಂಗಳೂರು,ಏ.14: ರಾಕಿಂಗ್ ಸ್ಟಾರ್ ಯಶ್ ಇಂದು ಅವರ ತಂದೆ-ತಾಯಿ, ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.. ಹೀಗಿರುವಾಗ ರಾಧಿಕಾ ಪಂಡಿತ್ ತಮ್ಮ ಅತ್ತೆ – ಮಾವನಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ…

ನನ್ನ ಪ್ರೀತಿಯ ಅತ್ತೆಮಾವನಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು

ಶನಿವಾರ ರಾತ್ರಿಯೇ ಯಶ್ ಮತ್ತು ರಾಧಿಕಾ ಕೇಕ್ ತಂದು ಕಟ್ ಮಾಡಿಸಿ ಮದುವೆ ವಾರ್ಷಿಕೋತ್ಸವ ಆಚರಿಸಿದ್ದಾರೆ….ಯಶ್ ಅವರ ಅಪ್ಪ ತಮ್ಮ ಪತ್ನಿಗೆ ಕೇಕ್ ತಿನ್ನಿಸುತ್ತಿರುವ ಫೋಟೋವನ್ನು ತೆಗೆದು ಅದನ್ನು ಫೇಸ್ಬುಕ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಹಂಚಿದ್ದಾರೆ

“ನನ್ನ ಪ್ರೀತಿಯ ಅತ್ತೆ-ಮಾವನಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ನನ್ನ ಜೀವನದಲ್ಲಿ ನಿಮ್ಮಿಬ್ಬರನ್ನು ಪಡೆದಿರುವುದಕ್ಕೆ ನನಗೆ ಬಹಳ ಸಂತೋಷವಾಗಿದೆ. ಅಲ್ಲದೆ ನನಗೆ ಅತ್ಯುತ್ತಮ ಉಡುಗೊರೆಯನ್ನು ನೀಡಿದ್ದಕ್ಕಾಗಿ ಇಬ್ಬರಿಗೂ ಧನ್ಯವಾದಗಳು. ನಿಮ್ಮ ಮಗನೇ ನನಗೆ ಪ್ರಪಂಚ” ಎಂದು  ಬರೆದಿದ್ದಾರೆ

ಗರ್ಭಿಣಿಯಾಗಿರುವ ವಿಷಯವನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿರುವ ದಿಶಾ ಮದನ್

#sandalwood #radhikapandit #yash #fathetrmotheranniversary

Tags