ಸುದ್ದಿಗಳು

ಯಶ್ ನಂತರ ಗಡ್ಡದಾರಿಗಳಾಗುತ್ತಿರುವ ನಾಯಕರು

ಧ್ರುವ ಸರ್ಜಾ ಹಾಗೂ ನಿರೂಪ್ ಭಂಡಾರಿ ಹೊಸ ವೇಷದಲ್ಲಿ

ಬೆಂಗಳೂರು, ಸ.14: ಸತತ ಎರಡು ವರ್ಷಗಳಿಂದ ರಾಕಿಂಗ್ ಸ್ಟಾರ್ ಯಶ್ ‘ಕೆ.ಜಿ.ಎಫ್’ ಚಿತ್ರಕ್ಕಾಗಿ ಗಡ್ಡದಾರಿಯಾಗಿದ್ದರು. ಇದೀಗ ಚಂದನವನದ ಇಬ್ಬರು ನಾಯಕ ನಟರು ಗಡ್ಡದಾರಿಗಳಾಗುತ್ತಿದ್ದಾರೆ. ಅವರೇ ಹ್ಯಾಟ್ರಿಕ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನಿರೂಪ್ ಭಂಡಾರಿ.

‘ಪೊಗರು’ಗಾಗಿ ಗಡ್ಡ

ಮೂರು ಚಿತ್ರಗಳ ‘ಭರ್ಜರಿ’ ಯಶಸ್ಸಿನ ನಂತರ ಧೃವ ಸರ್ಜಾ ಅಭಿನಯಿಸುತ್ತಿರುವ ‘ಪೊಗರು’ ಚಿತ್ರ ಈಗಾಗಲೇ ಅನೇಕ ಕಾರಣಗಳಿಂದ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಎರಡು ಭಿನ್ನ ಪಾತ್ರಗಳನ್ನು ಮಾಡುತ್ತಿರುವ ಅವರು ಮೊದಲಾರ್ಧದಲ್ಲಿ ಶಾಲಾ ಬಾಲಕನಾಗಿ ಕಾಣಿಸಿಕೊಂಡರೆ, ದ್ವಿತಿಯಾರ್ಧದಲ್ಲಿ ಗಡ್ಡದಾರಿಯಾಗಿ ಕಂಗೊಳಿಸುತ್ತಿದ್ದಾರೆ. ಅದಕ್ಕಾಗಿ ಭರ್ಜರಿ ಗಡ್ಡವನ್ನೂ ಬಿಟ್ಟಿದ್ದಾರೆ. ಈ ಚಿತ್ರವನ್ನು ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ.

ಗಡ್ಡ ಬಿಟ್ಟ ನಿರೂಪ್ ಬಂಡಾರಿ

‘ರಂಗಿತರಂಗ’ ಚಿತ್ರದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಿರೂಪ್ , ಸದ್ಯ ‘ಆದಿ ಲಕ್ಷ್ಮಿ ಪುರಾಣ’ ದಲ್ಲಿ ನಟಿಸುತ್ತಿದ್ದು, ಇವರಿಗೆ ಜೋಡಿಯಾಗಿ ರಾಧಿಕಾ ಪಂಡಿತ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ಎರಡು ಚಿತ್ರಗಳಲ್ಲಿ ಸಾಮಾನ್ಯನಂತೆ ಕಾಣಿಸಿದ್ದ ಅವರು ಈ ಚಿತ್ರಕ್ಕಾಗಿ ಮತ್ತು ಮುಂದಿನ ಚಿತ್ರಕ್ಕಾಗಿ ಪೊಗದಸ್ತಾಗಿ ಗಡ್ಡ ಮೀಸೆ ಬಿಡುತ್ತಿದ್ದಾರೆ.

ಹೀಗೆ ನಟ ಯಶ್ ನಂತರ ಈ ಇಬ್ಬರೂ ಕಲಾವಿದರು ಗಡ್ಡ ಮೀಸೆ ಬಿಟ್ಟು ಸ್ವಲ್ಪ ವಿಭಿನ್ನವಾಗಿ ಕಾಣುತ್ತಿದ್ದಾರೆ. ಈ ಹಿಂದೆ ನಟ ಉಪೇಂದ್ರ ‘ಎ’ , ರಾಘವೇಂದ್ರ ರಾಜ್ ಕುಮಾರ್ ‘ಸ್ವಸ್ತಿಕ್’, ರವಿಚಂದ್ರನ್ ‘ಸಿಪಾಯಿ’.. ಹೀಗೆ ಅನೇಕ ಸೇರಿದಂತೆ ಹಲವಾರು ನಟರು ಗಡ್ಡದಾರಿಗಳಾಗಿ ಅಭಿನಯಿಸಿದ್ದರು.

 

 

Tags

Related Articles