ಸುದ್ದಿಗಳು

ರಾಕಿಂಗ್ ಸ್ಟಾರ್ ಗೆ ಅಭಿಮಾನಿಯ ಪ್ರೀತಿಯ ಉಡುಗೊರೆ

ಸಿನಿಮಾ ಕಲಾವಿದರಿಗೆ ಅಭಿಮಾನಿಗಳ ಮೇಲೆ ಹೇಗೆ ಪ್ರೀತಿ ಇರುತ್ತದೋ ಹಾಗೆಯೇ ಅಭಿಮಾನಿಗಳಿಗೂ ಸಹ ಕಲಾವಿದರ ಮೇಲೆ ಅಷ್ಟೇ ಪ್ರೀತಿ, ಅಭಿಮಾನ, ಹಾರೈಕೆ ಇದ್ದೇ ಇರುತ್ತದೆ. ಹಾಗೆಯೇ ಅವರನ್ನು ಪೂಜಿಸುವ ಅಭಿಮಾನಿ ಬಳಗವಿದ್ದು, ಅಭಿಮಾನಕ್ಕಾಗಿ ಟ್ಯಾಟೋ ಹಾಕಿಸಿಕೊಳ್ಳುತ್ತಾರೆ, ಅಥವಾ ಉಡುಗೊರೆಗಳನ್ನು ನೀಡುತ್ತಾರೆ.

ಅಂದ ಹಾಗೆ ನಟ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಯೊಬ್ಬ ತನ್ನ ಮೆಚ್ಚಿನ ನಟ ಯಶ್ ರಿಗೆ ಮರೆಯಲಾಗದ ಉಡುಗೊರೆಯೊಂದನ್ನು ನೀಡಿದ್ದಾರೆ. ಹೌದು, ಅದೇನೆಂದರೆ, ‘ಕೆ.ಜಿ.ಎಫ್’ ಚಿತ್ರದಲ್ಲಿ ನಾಯಕ ರಾಕಿಯ ತಲೆಗೆ ಪೇಟಾ ಸುತ್ತಿ, ಗಡ್ಡ ಬಿಟ್ಟು ಮಾಸ್ ಲುಕ್ ನಲ್ಲಿ ದರ್ಶನ ನೀಡುತ್ತಾರೆ.


ಇದೀಗ ಆ ರಾಕಿಯ ಫೋಸ್ ಅನ್ನು ಹತ್ತಾರು ಮರದ ಹಲಗೆಗಳಿಂದ ಮಾಡಿಸಿ ಕೆತ್ತಿರುವ ಚಿತ್ರದ ಫೋಟೋವನ್ನು ಅಭಿಮಾನಿ ಯಶ್ ರಿಗೆ ಕೊಟ್ಟಿದ್ದಾರೆ. ಸದ್ಯ ಯಶ್ ‘ಕೆ.ಜಿ.ಎಫ್-2’ ಚಿತ್ರದ ಶೂಟಿಂಗ್ ಗಾಗಿ ಮೈಸೂರಿನಲ್ಲಿದ್ದಾರೆ. ಶೂಟಿಂಗ್ ಸ್ಥಳಕ್ಕೆ ಹೋಗಿ, ಯಶ್ ರನ್ನು ಭೇಟಿಯಾಗಿ ಅಭಿಮಾನಿಯೊಬ್ಬ ಮರೆಯಲಾಗದ ಉಡುಗೊರೆ ನೀಡಿದ್ದಾರೆ. ಯಶ್ ಸಹ ಸಂತಸ ವ್ಯಕ್ತಪಡಿಸಿದ್ದಾರೆ.

ಬಾಣಂತಿಯರಲ್ಲಿ ಎದೆಹಾಲಿನ ಪ್ರಮಾಣವನ್ನು ಹೆಚ್ಚಿಸುವ ನುಗ್ಗೆ ಸೊಪ್ಪು

#yash, #gift, #fans, #balkaninews  #filmneews, #kannadasuddigalu

Tags