ಸುದ್ದಿಗಳು

ಯಶ್ ಮನೆ ವಿಚಾರ, ಮೇ 31 ರೊಳಗೆ ಮನೆ ಖಾಲಿ ಮಾಡಬೇಕೆಂದು ಕೋರ್ಟ್ ಆದೇಶ

ಕೋರ್ಟ್ ನಲ್ಲಿರುವ ಬಾಡಿಗೆ ಮನೆ ವಿವಾದ

ಬೆಂಗಳೂರು.ಮಾ.30: ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆ ವಿವಾದದ ವಿಷಯ ಸದ್ಯ ಕೋರ್ಟ್ ನಲ್ಲಿದೆ. ಆದರೆ ಈ ಬಗ್ಗೆ ನಿನ್ನೆಯಷ್ಟೇ ಹೈ ಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿದೆ. ಬನಶಂಕರಿಯಲ್ಲಿ ಯಶ್ ಕುಟುಂಬ ಬಾಡಿಗೆಗೆ ಇರುವ ಮನೆಯನ್ನು ಇನ್ನೆರಡು ತಿಂಗಳಿನಲ್ಲಿ ಖಾಲಿ ಮಾಡುವಂತೆ ಆದೇಶ ನೀಡಿದೆ.

ಹೌದು, ಯಶ್ ಗೆ ಬನಶಂಕರಿಯ ಬಾಡಿಗೆ ಮನೆ ಖಾಲಿ ಮಾಡಲು ಹೈಕೋರ್ಟ್ 2 ತಿಂಗಳ ಕಾಲಾವಕಾಶ ನೀಡಿದೆ. ಹೈಕೋರ್ಟ್ ಹಿಂದಿನ ಆದೇಶದಂತೆ ಯಶ್ ಕುಟುಂಬ, ಮಾರ್ಚ್ 31 ಕ್ಕೆ ಮನೆ ಖಾಲಿ ಮಾಡಬೇಕಿತ್ತು.

ಈ ಬಗ್ಗೆ ಯಶ್ ಅವರ ತಾಯಿ ಪುಷ್ಪಾ, ನಾವು ಹಾಸನದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದೇವೆ. ಅಲ್ಲಿಗೆ ಶಿಫ್ಟ್ ಆಗಲು ನಿರ್ಧರಿಸಿದ್ದೇವೆ. ಅಲ್ಲಿನ ಮನೆ ನಿರ್ಮಾಣ ಕಾರ್ಯ ಮುಗಿಯಲು ಇನ್ನೂ 6 ತಿಂಗಳು ಬೇಕು. 6 ತಿಂಗಳಿಗೆ ಬಾಡಿಗೆ ಮನೆ ಹುಡುಕಲು ಕಷ್ಟ. ಹೀಗಾಗಿ ಮನೆ ಖಾಲಿ ಮಾಡಲು 6 ತಿಂಗಳು ಕಾಲಾವಕಾಶ ಕೊಡಿ ಅಂತಾ ಮನವಿ ಮಾಡಿದ್ದರು.

ಹೀಗಾಗಿ ಪುಷ್ಪಾರ ಮನವಿಗೆ ಮನೆ ಮಾಲೀಕರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ 2 ತಿಂಗಳು ಕಾಲಾವಕಾಶಕ್ಕೆ ಮನೆ ಮಾಲೀಕ ಡಾ. ಮುನಿಪ್ರಸಾದ್ ಒಪ್ಪಿಗೆ ನೀಡಿದರು. ಇದೀಗ ಮೇ 31 ರವರೆಗೆ ಯಶ್ ಕುಟುಂಬಕ್ಕೆ ಹೈಕೋರ್ಟ್ ಕಾಲಾವಕಾಶ ನೀಡಿ ಆದೇಶಿಸಿದೆ. ಹೀಗಾಗಿ ಯಶ್ ಹಾಗೂ ಕುಟುಂಬ ಈ ಬಾಡಿಗೆಯನ್ನು ತೆರೆವು ಮಾಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ‘ಚಾರ್ಲಿ’ ಶೂಟಿಂಗ್

#yash,#house, #balkaninews #kannadasuddigalu, #filmnews, #pushpa, #courtcase

Tags