ಸುದ್ದಿಗಳು

ಆಡಿಟರ್ ಆಫೀಸ್ ಮೇಲೆ ಐಟಿ ದಾಳಿ, ವಿಚಾರಣೆಗೆ ಯಶ್

ಬೆಂಗಳೂರು, ಜ.11: ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಐಟಿ ಅಧಿಕಾರಿಗಳ ರೇಡ್ ನಡೆದಿದ್ದರೂ ಏಕಕಾಲಕ್ಕೆ ಚಂದನವನದ ಪ್ರಮುಖ ನಟರು ಮತ್ತು ನಿರ್ಮಾಪಕರುಗಳ ಮನೆಯ ಮೇಲೆ ದಾಳಿ ನಡೆದಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಈ ರೀತಿಯ ದೊಡ್ಡ ದಾಳಿಯಾಗಿರುವುದು ಕನ್ನಡ ಚಿತ್ರರಂಗದಲ್ಲಿ ಆಘಾತವನ್ನು ಸೃಷ್ಟಿ ಮಾಡಿತ್ತು.

ಯಶ್ ಗೂ ನೋಟೀಸ್ ನೀಡಲಾಗಿತ್ತು

ಕಿಚ್ಚ ಸುದೀಪ್, ಪುನೀತ್ ರಾಜ್‌ಕುಮಾರ್, ಶಿವರಾಜ್ಕುಮಾರ್, ರಾಕಿಂಗ್ ಸ್ಟಾರ್ ಯಶ್, ಹಾಗೂ ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ವಿಜಯ್ ಕಿರಗಂದೂರು, ಸಿಆರ್ ಮನೋಹರ್ ಸೇರಿದಂತೆ ಎಲ್ಲರ ಮನೆಯ ಮೇಲೂ ಗುರುವಾರದಿಂದಲೇ ಐಟಿ ಅಧಿಕಾರಿಗಳು ತೆರಿಗೆಯ ಬಾಕಿಯನ್ನು ಪರೀಶಿಲಿಸಿದರು. ಇದರ ಜೊತೆಗೆ ಇತರೆ ವ್ಯವಹಾರಗಳಲ್ಲಿ ತೊಡಗಿದ್ದರೆ ಅದರ ತೆರಿಗೆಯನ್ನು ಕಟ್ಟಿದ್ದಾರಾ ಅಥವಾ ಬಾಕಿ ಉಳಿಸಿಕೊಂಡಿದ್ದಾರಾ ಎಂದು ಅವರ ಆಸ್ತಿ-ಪಾಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ಮಾಡಲಾಗಿತ್ತು. ಇದೀಗ ಈ ಎಲ್ಲಾ ನಟರಿಗೆ ನೋಟೀಸ್ ಕೂಡ ನೀಡಲಾಗಿತ್ತು.

ಕಾಲವಕಾಶ ಕೇಳಿದ್ದ ಯಶ್

ನೋಟಿಸ್ ನೀಡಿದ್ದ ಕೆಲವು ನಟರಲ್ಲಿ ಪುನೀತ್ ಹಾಗೂ ಶಿವರಾಜ್‌ಕುಮಾರ್ ಹಾಜರಾಗಿದ್ದರು. ಇನ್ನು ಸುದೀಪ್ ಹಾಗೂ ಯಶ್ ಗೆ ನಿನ್ನೆ ಸಮಯ ಕೊಡಲಾಗಿತ್ತು. ಆದರೆ ಚಿತ್ರೀಕರಣ ಇದೆ ಅಂತಾ ಯಾರೂ ವಿಚಾರಣೆಗೆ ಹಾಜರಾಗಿಲ್ಲ. ಇನ್ನು ಯಶ್ ಕೂಡ ಇದೇ ಉತ್ತರವನ್ನು ನೀಡಿದ್ದರು. ಶೂಟಿಂಗ್ ಇದೆ, ಊರಿನಿಂದ ಹೊರಗೆ ಹೋಗ್ತಾ ಇದ್ದೀನಿ ಅಂತ ಹೇಳಿದ್ದ ಯಶ್, ಅದ್ರೆ ಐಟಿ ವಿಚಾರಣೆಗೂ ಹಾಜರಾಗದೇ, ಶೂಟಿಂಗ್ ಕೂಡ ಹೋಗದೇ ಇದ್ದರಂತೆ. ಆದರೆ, ಐಟಿ ರೈಡ್ ಬಗ್ಗೆ ಆಡಿಟರ್ ಕಚೇರಿಗೆ ಓಡಾಡ್ತಿದ್ದರು ಯಶ್ ಅಂತಾ ಹೇಳಲಾಗುತ್ತಿದೆ.

ತಾಯಿ ಜೊತೆ ಆಡಿಟರ್ ಆಫೀಸ್‌ ಗೆ ಭೇಟಿ

ಆಡಿಟರ್ ಮನೆಗೆ ಓಡಾಡ್ತಿದ್ದ ಯಶ್ ಮೇಲೆ ಕಣ್ಣಿಟ್ಟಿದ್ದರು ಐಟಿ ಗುಪ್ತಚರ ಇಲಾಖೆ. ಕೆಲವೊಂದು ಪ್ರಮುಖ ದಾಖಲೆಗಳನ್ನು ಆಡಿಟರ್ ಮನೆಯಲ್ಲಿಯೇ ಇಟ್ಟಿದ್ದ ಶಂಕೆ ವ್ಯಕ್ತವಾಗಿದೆ. ನಿನ್ನೆ ಆಡಿಟರ್ ಮನೆ ದಾಳಿ ಬಳಿಕ ಕಡತಗಳು, ದಾಖಲೆಗಳನ್ನು ವಶಪಡಿಸಲಾಗಿದೆಯಂತೆ. ಆಡಿಟರ್ ಮನೆಯಲ್ಲಿ ಸಿಕ್ಕ ದಾಖಲೆಗಳು, ಕಾಗದ ಪತ್ರಗಳಿಂದ ಯಶ್‌ ಗೆ ಮತ್ತೆ ಹೊಸ ಸಂಕಷ್ಟ ಪ್ರಾರಂಭವಾಗುವ ಸಾಧ್ಯತೆ ಇದೆ. ಈ ಬೆನ್ನಲ್ಲೇ ಇಂದು ಯಶ್ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಐಟಿ ಕಚೇರಿ ವಿಚಾರಣೆಗೆ ಬರಬೇಕಾದ ಅನಿವಾರ್ಯತೆ ಬಂದಿದೆ. ಹಾಗಾಗಿ ಈ ನಟ ಇಂದು ಹಾಜರಾಗಿದ್ದಾರೆ. ತಾಯಿ ಪುಷ್ಪಾ ಜೊತೆ ಯಶ್ ಆಗಮಿಸಿದ್ದರು.

#sandalwood #yash #yashmovies #yashhouseitraid #balkaninews

Tags