ಸುದ್ದಿಗಳು

ಯಶ್ ಮನೆಗೆ ಬಂದೋಬಸ್ತ್

ಯಶ್ ಮನೆಗೆ ಇದೀಗ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.

ಬೆಂಗಳೂರು, ಮಾ.24:

ನಟ ಯಶ್ ಮನೆಗೆ ಸದ್ಯ ಪೊಲೀಸ್ ಸೆಕ್ಯುರಿಟಿ ನೀಡಿದ್ದಾರೆ. ನಿನ್ನೆ ಬೆಳಗ್ಗಿನ ಜಾವ 3 ಗಂಟೆಗೆ ದುಷ್ಕರ್ಮಿಗಳು ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್ ನಲ್ಲಿರುವ ದರ್ಶನ್ ಅವರ ಮನೆ ಹಾಗೂ ಕಚೇರಿ ಮೇಲೆ ಕಲ್ಲು ತೂರಿದ್ದರು. ಕಲ್ಲು ತೂರಾಟದಿಂದ ದರ್ಶನ್ ಅವರ ಕಾರಿನ ಗಾಜು ಜಖಂ ಆಗಿದೆ. ಕಲ್ಲು ತೂರಾಟ ನಡೆಸಿದ್ದ ವೇಳೆ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಮಾತ್ರ ಇದ್ದರು. ಹಾಗಾಗಿ ಸೆಕ್ಯೂರಿಟಿ ದೂರನ್ನು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ

ಸೆಕ್ಯುರಿಟಿ ಹಾಕಿದ ಡಿಸಿಪಿ

ಈ ಘಟನೆ ಯಶ್ ಮನೆ ಮೇಲೆ ಆಗಬಾರದು ಅಂತಾ ಇದೀಗ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಇನ್ನು ಸುಮಲತಾಗೆ ಯಶ್ ದರ್ಶನ್ ಇಬ್ಬರು ಸಾಥ್ ನೀಡಿದ್ದರು. ಹಾಗಾಗಿ ರಾಜಕೀಯ ದ್ವೇಶದಿಂದಲೇ ದರ್ಶನ್ ಮನೆ ‌ಮೇಲೆ ಅಟ್ಯಾಕ್ ಮಾಡಲಾಗಿದೆ ಅನ್ನೋದು ಹಲವರ ಮಾತು. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಇದೀಗ ಡಿಸಿಪಿ ಅಣ್ಣಾಮಲೈ ಸೆಕ್ಯುರಿಟಿ ಹಾಕಿದ್ದಾರೆ.

ಸೊರಗಿದ ಕೈಗಳ ಅಂದಕ್ಕೆ ಮೆನಿಕ್ಯೂರ್

#balkaninews #sandalwood #yash #yashhouse #yashhousepolice

Tags