ಸುದ್ದಿಗಳು

ಕೇರಳದಲ್ಲಿ ರಾಖಿ ಭಾಯ್ ಹವಾ!!

ತಿರುವನಂತಪುರಂ,ಫೆ.5:

ಯಶ್ ಅಭಿಮಾನಿಗಳೂ ಎಲ್ಲೆಲ್ಲೂ ಇದ್ದಾರೆ. ಕೇರಳಕ್ಕೆ ಎಂಟ್ರಿ ಕೊಟ್ಟ ಯಶ್ ಗೆ ರಾಖಿ ಭಾಯ್ ಅನ್ನೋ ಕೂಗಾಟ ಚೀರಾಟ ಫುಲ್ ಫಿದಾ ಮಾಡಿಸಿದೆ.

ರಾಜಶೇಖರ್ ರೆಡ್ಡಿ ಅವರ ಜೀವನಾಧಾರಿತಯಾತ್ರಾ’

ನಿನ್ನೆಯಷ್ಟೇ ಮಮ್ಮುಟ್ಟಿ ಅಭಿನಯದ ಸಿನಿಮಾ ‘ಯಾತ್ರಾ’ ಆಡಿಯೋ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಟ ಯಶ್ ಈ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಯಶ್ ಬರುತ್ತಿದ್ದಂತೆ ಕೇರಳದಲ್ಲಿ ಸಲಾಂ ರಾಖಿ ಭಾಯ್ ಅನ್ನೋ ಕೂಗಾಟ ನಿಜಕ್ಕೂ ಯಶ್ ಅವರಿಗೆ ಕಿಕ್ ಏರಿಸಿದೆ. ಎಲ್ಲೆಡೆ ಕೆಜಿಎಫ್ ಸಿನಿಮಾ ಹವಾ ಇನ್ನು ಮುಗಿದಿಲ್ಲ. ಮುಗಿಯೋದು ಇಲ್ಲ ಅನ್ನೋ ಮಟ್ಟಿಗೆ ಇದೆ.

Image result for yash in yatra audio launch

ಸಲಾಂ ರಾಖಿ ಭಾಯ್

ಹೌದು, ಬಹು ನಿರೀಕ್ಷಿತ ಯಾತ್ರಾ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮ ನಡೆದಿದ್ದು, ಯಶ್ ಕೇರಳದಲ್ಲೂ ತಮ್ಮ ಹವಾ ಸೃಷ್ಟಿ ಮಾಡಿದ್ದಾರೆ. ಅಷ್ಟೆ ಅಲ್ಲ ಕೆಜಿಎಫ್ ಸಿನಿಮಾ ಬಂದ ನಂತರದಲ್ಲಿ ಯಶ್ ಎಲ್ಲೇ ಹೋದರೂ ರಾಖಿ ಭಾಯ್ ಅಂತಾನೇ ಫೇಮಸ್ ಆಗಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯಶ್ ಮಲೆಯಾಳಂ ನಲ್ಲಿಯೇ ಮಾತನಾಡಿದ್ದಾರೆ. ಸದ್ಯ ಯಶ್ ಮಾತಿಗೆ ಅಲ್ಲಿ ನೆರೆದಿದ್ದ ಮಂದಿ ಫುಲ್ ಫಿದಾ ಆಗಿ ಕೇಕೆ ಕೂಗು ಹಾಕಿದ್ದಾರೆ.

ಪಾದಯಾತ್ರೆಯ ಮುಖ್ಯ ಅಂಶವೇ ಸಿನಿಮಾ

ಆಂಧ್ರ ಸಿಎಂ ರಾಜಶೇಖರ್ ರೆಡ್ಡಿ ಅವರ ಜೀವನಾಧಾರಿತ ಸಿನಿಮಾ ಇದಾಗಿದೆ. ಇನ್ನು ಈ ಸಿನಿಮಾವನ್ನು ಮಹಿ ವಿ ರಾಘವ್ ನಿರ್ದೇಶನ ಮಾಡಿದ್ದಾರೆ. ರಾಜಶೇಖರ್ ರೆಡ್ಡಿ ೨೦೦೩ರಲ್ಲಿ ಸುದೀರ್ಘ ೩ ತಿಂಗಳು ಆಂಧ್ರದ ಸುತ್ತಾ ಸುತ್ತಿದ್ದರು. ಅದು ಪಾದಯಾತ್ರೆ ಮೂಲಕ.. ಆ ಪಾದಯಾತ್ರೆ ಅವರ ರಾಜಕೀಯ ಜೀವನವನ್ನೇ ಬದಲಿಸಿತ್ತು. ೨೦೦೪ರ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರದ ಪಡೆದುಕೊಂಡರು. ದೊಡ್ಡ ಮಟ್ಟದ ಅಭಿಮಾನಿಗಳನ್ನೂ ಹೊಂದಿರುವ ಇವರ ಜೀವನ ಇದೀಗ ಸಿನಿಮಾವಾಗಿ ಹೊರ ಹೊಮ್ಮಲಿದೆ.

Image result for yash in yatra audio launch

ಫೆಬ್ರವರಿ ಕ್ಕೆ ತೆರೆ ಕಾಣಲಿರೋ ಸಿನಿಮಾ

ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಯಾತ್ರಾ ಸಿನಿಮಾ ಫೆ. ೮ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಂಆದ ಮುಖ್ಯ ಪಾತ್ರ ವೈಎಸ್‌ಆರ್ ಪಾತ್ರಕ್ಕೆ ಮಮ್ಮೂಟ್ಟಿ ಬಣ್ಣ ಹಚ್ಚಿದ್ದಾರೆ. ವಿಜಯ್ ಚಿಲ್ಲಾ ಮತ್ತು ಶಶಿ ಚಿತ್ರ ನಿರ್ಮಾಣ ಮಾಡಿದ್ದು, ಈಗಾಗಲೇ ಹಲವಾರು ವಿಚಾರಗಳಿಂದ ಸದ್ದು ಮಾಡಿದೆ. ಇನ್ನು ಬಿಡುಗಡೆಯಾದ ನಂತರ ಯಾವ ರೀತಿ ಸದ್ದು ಮಾಡುತ್ತೆ ಅಂತಾ ಕಾದು ನೋಡಬೇಕು.

#yash #mamootty #molywood #mollywoodmovies

Tags

Related Articles