ಸುದ್ದಿಗಳು

ಹಿಂದಿ ಡಬ್ಬಿಂಗ್ ನಲ್ಲಿ 50 ಮಿಲಿಯನ್ ವೀಕ್ಷಣೆ ಪಡೆದ ‘ಮಾಸ್ಟರ್ ಫೀಸ್’ ಸಿನಿಮಾ

ಬೆಂಗಳೂರು, ಏ.25:

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಿಟ್ ಸಿನಿಮಾ ‘ಮಾಸ್ಟರ್ ಫೀಸ್’. ತನ್ನ ವಿಭಿನ್ನ ಮ್ಯಾನರಿಸಂ, ಡೈಲಾಗ್ ನಿಂದ ಬಹಳಷ್ಟು ಪ್ರಶಂಸೆ ಪಡೆದ ಚಿತ್ರವಿದು. ಹಾಗೆಯೇ ಚಿತ್ರದ ಕಥೆಯೂ ಕೂಡ ಜನರಿಗೆ ಇಷ್ಟವಾಗಿತ್ತು. ಹೊಂಬಾಳೆ ಫಿಲ್ಮ್ ಬ್ಯಾನರ್ ಅಡಿಯಲ್ಲಿ  ಮಂಜು ಮಾಂಡವ್ಯ ನಿರ್ದೇಶನದಲ್ಲಿ ಮಾಸ್ಟರ್ ಫೀಸ್ ಚಿತ್ರ ಅದ್ಭುತವಾಗಿ ಮೂಡಿಬಂದಿತ್ತು.

ಚಿತ್ರದ ಬಗ್ಗೆ ಹೇಳುವುದಾದರೆ, ಈ ಚಿತ್ರದಲ್ಲಿ ಯಶ್ ಹಾಗೂ ಶಾನ್ವಿ ಶ್ರೀವಾತ್ಸವ್ ಜೋಡಿ ಜನರಿಗೆ ಮನೆರಂಜನೆ ನೀಡುವುದರ ಜೊತೆಗೆ ಚಿಕ್ಕಣ್ಣ, ಅಚ್ಯುತ್ ಕುಮಾರ್ ರವರ ಕಾಮಿಡಿ ಜನರನ್ನು ನಗೆಗಡಲಲ್ಲಿ ದೂಡಿತ್ತು. ಈ ಚಿತ್ರ ಇದೀಗ ಹಿಂದಿಯಲ್ಲಿ ಡಬ್ಬಿಂಗ್ ಆಗಿದ್ದು, ಯೂಟ್ಯೂಬ್ ನಲ್ಲಿ ಐವತ್ತು ಮಿಲಿಯನ್ ವೀಕ್ಷಣೆ ಕಂಡಿದೆ. ಈ ಖುಷಿಯ ವಿಶೇಷವನ್ನು ಹೊಂಬಾಳೆ ಫಿಲ್ಮ್ ಬ್ಯಾನರ್ ನವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಾಜಣ್ಣನ ಹುಟ್ಟುಹಬ್ಬ ನಮ್ಮ ಮನೆಯಲ್ಲಿ ಭಾವನ್ಮಾತಕವಾಗಿ ಬೆಸೆದಿದೆ ಎಂದ ನವರಸ ನಾಯಕ..!!! ಕಾರಣವೇನು ಗೊತ್ತೆ…?

#balkaninews #yash #masterpiece #sandalwood #Hindidubbedmovie

Tags