ಸುದ್ದಿಗಳು

ಯಾವುದೇ ಬೆದರಿಕೆ ಕರೆ ಬಂದಿಲ್ಲ ಯಶ್ ಸ್ಪಷ್ಟನೆ!!

ಬೆಂಗಳೂರು,ಮಾ.9: ಕನ್ನಡದ ಪ್ರಸಿದ್ಧ ನಟರಾದ ಯಶ್ ರನ್ನು ಈ ಹಿಂದೆ ಹತ್ಯೆ ಮಾಡಲು ಸಂಚು ನಡೆದಿತ್ತು ಎಂಬ ಸುದ್ದಿ ವೈರಲ್ ಆಗಿತ್ತು… ಈಗ ಪುನಃ ಅದಕ್ಕೆ ಪುಷ್ಟಿ ಸಿಕ್ಕಿ ಇಂದು ಬೆಳಗ್ಗೆಯಿಂದ ಕೆಲವು ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿದ್ದವು.. ಈಗ ಇದರ ಸಲುವಾಗಿ ಯಶ್ ಮಾಧ್ಯಮಗೋಷ್ಟಿ ಕರೆಸಿ ಮಾತನಾಡಿದ್ದು,

ಆಪ್ತರು ಹಾಗೂ ಕುಟುಂಬಸ್ಥರಲ್ಲಿ ಭಯದ ವಾತಾವರಣ

“ಕೆಲವರು ಅನಾವಶ್ಯಕವಾಗಿ ನನ್ನ ಹೆಸರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಂಧಿತ ಆರೋಪಿಗಳ ಮೇಲೆ ದಾಖಲಾದ ಎಫ್‍ಐಆರ್ ನ್ನು ನಾನು ನೋಡಿದ್ದೇನೆ, ಅಲ್ಲಿಯೂ ಕೇವಲ ನಟ ಎಂಬುವುದು ಮಾತ್ರ ಇತ್ತು, ಯಾವ ನಟ ಎಂದು ಮಾತ್ರ ಹೇಳಿಲ್ಲ..  ಈ ರೀತಿ ನನ್ನ ಹೆಸರು ತಪ್ಪು ಬಳಕೆ ಮಾಡುವುದರಿಂದ ಆಪ್ತರು ಹಾಗೂ ಕುಟುಂಬಸ್ಥರಲ್ಲಿ ಭಯದ ವಾತಾವರಣ  ನಿರ್ಮಾಣವಾಗುತ್ತಿದೆ.. ಎಂದು ನಟ ಯಶ್ ಬೇಸರ ವ್ಯಕ್ತಪಡಿಸಿದರು.

Image result for yash

ಕೊಲೆ ಮಾಡಲು ಸುಪಾರಿ ನೀಡುವಂತಹ ಕಲಾವಿದರು ನಮ್ಮ  ಚಿತ್ರರಂಗದಲ್ಲಿ ಇಲ್ಲ

ಇನ್ನು ತಾನು ಗೃಹಸಚಿವ ಎಂ.ಬಿ.ಪಾಟೀಲ್ ಜೊತೆ ಮಾತನಾಡಿದ್ದೇನೆ, ಅವರು ಸಹ ಆ ನಟ ನಾನು ಅಲ್ಲ ಎಂಬುವುದನ್ನು ಖಾತ್ರಿ ಪಡೆಸಿದ್ದಾರೆ…ಸ್ಟಾರ್  ನಟನೊಬ್ಬನ ಕೊಲೆ ಮಾಡಲು ಸುಪಾರಿ ನೀಡುವಂತಹ ಕಲಾವಿದರು ನಮ್ಮ  ಚಿತ್ರರಂಗದಲ್ಲಿ ಇಲ್ಲ. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಬೇಡಿ ಇದರಿಂದ ಚಂದನವನದ ವಾತಾವರಣ ಹದಗೆಡುತ್ತದೆ”. ಎಂದು ಯಶ್ ಸ್ಪಷ್ಟನೆ ನೀಡಿದರು..

ಧೋನಿಯ ಬಗ್ಗೆ ಯಾರಿಗೂ ತಿಳಿಯದ ಮಾಹಿತಿ ಇದೀಗ ನಿಮಗೆ ವೆಬ್ ಸಿರೀಸ್ ನಲ್ಲಿ ಲಭ್ಯ

Tags