ಸುದ್ದಿಗಳು

“ಯಶ್ ಯು ಆರ್ ಗ್ರೇಟ್ ಬ್ಯಾಟ್ಸ್ ಮ್ಯಾನ್” ಎರಡನೇ ಬಾರಿಗೆ ತಂದೆಯಾಗುತ್ತಿರುವ ಯಶ್ ಗೆ ಸಖತ್ ಟ್ರೋಲ್!!

ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವುದು ಇದೇನೂ ಹೊಸ ವಿಚಾರವಲ್ಲ..  ಎಷ್ಟೇ ಖುಷಿಯ ವಿಚಾರವನ್ನು ಹಂಚಿಕೊಂಡರೂ ಟ್ರೋಲ್​ ಮಾಡುವವರು ಮಾತ್ರ  ಸುಮ್ಮನಿರುವುದಿಲ್ಲ.. ರಾಕಿಂಗ್​ ಸ್ಟಾರ್​ ಯಶ್​ ವಿಚಾರದಲ್ಲೂ ಈಗ ಹಾಗೆಯೇ ಆಗಿದೆ. ಯಶ್​ ಎರಡನೇ ಬಾರಿಗೆ ತಂದೆ ಆಗುತ್ತಿರುವ  ಸಂತಸದ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದೇ ತಡ ಟ್ರೋಲಿಗರು ಸಖತ್ ಆಗಿ ಮಾಡಿದ್ದಾರೆ.

ಇತ್ತೀಚೆಗೆಯಷ್ಟೇ ಮಗುವಿಗೆ ‘ಐರಾ’ ಎಂದು ನಾಮಕರಣ  ಮಾಡಿದ್ದರು.. ಫೋಟೋಗಳು ಕೂಡ ವೈರಲ್ ಆಗಿತ್ತು.. ಇನ್ನು ನಾಮಕರಣ ಮಾಡುವ ವೇಳೆ ಯಶ್​ ಪತ್ನಿ ಅವರ ಹೊಟ್ಟೆ ಸ್ವಲ್ಪ ದೊಡ್ಡದಾಗಿ ಕಾಣಿಸಿದ್ದು ರಾಧಿಕಾ ಮತ್ತೆ ಗರ್ಭಿಣಿಯಾಗಿದ್ದಾರೆ ಎನ್ನುವ ಚರ್ಚೆ  ಎ್ಲಲೆಡೆ ಕೇಳಿಬಂದಿತ್ತು.. ಕೆಲವರು ಹಾಗೇನು ಇಲ್ಲ ಈಗಷ್ಟೇ  ಮಗು ಹುಟ್ಟಿ ತಿಂಗಳು ಕಳೆದಿವೆ ಹಾಗಾಗಿ ಹೊಟ್ಟೆ ದೊಡ್ಡದಾಗಿ  ಕಾಣುತ್ತಿದೆ ಎಂದು ಹೇಳತೊಡಗಿದರು… ಇನ್ನು ಯಶ್ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಖಚಿತ ಪಡಿಸಿದ್ದೇ ತಡ, ಇನ್ಸ್ಟಾಗ್ರಾಂ, ಫೇಸ್ ಬುಕ್ , ಟ್ವಿಟರ್ ನಲ್ಲಿ ಯಶ್ ನನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ

ಜಗತ್ತಿನ ಅತಿ ವೇಗವಾಗಿ ಸಾಗುವ ಪೈಕಿ ಬುಗಾಟಿ, ಚಿರತೆ, ಹುಸೇನ್​ ಬೋಲ್ಟ್​​ ಹಾಗೂ ಯಶ್​ ಇದ್ದಾರೆ ಎಂದು ಬರೆದುಕೊಂಡಿದ್ದಾರೆ. ಯಶ್ ಯು ಆರ್ ಗ್ರೇಟ್ ಬ್ಯಾಟ್ಸ್ ಮ್ಯಾನ್ , ಇನ್ನೂ ಕೆಲವರು ‘ಮಿಸ್ಟರ್​​ ಆ್ಯಂಡ್​ ಮಿಸೆಸ್​ ರಾಮಾಚಾರಿ’ ಸಿನಿಮಾದಲ್ಲಿ ಬರುವ ‘ನೀನು ನನಗೆ ಸಿಕ್ಕಿದ್ದೇ ಲಕ್ಕಿ, ವರ್ಷಕ್ಕೊಂದು ಮಗು ಕೊಡ್ತೀಯಾ’ ಎನ್ನುವ ಹಾಡಿನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಖತ್ ಆಗಿ ಟ್ರೋಲ್ ಮಾಡುತ್ತಿದ್ದಾರೆ..

 

View this post on Instagram

 

Good vibes only🤭 #kull_motru #troll_halli #goodvibes

A post shared by ಟ್ರೋಲ್ ಹಳ್ಳಿ (@troll_halli) on

ಮೂರು ವಿಭಿನ್ನ ಚಿತ್ರಗಳು ಬಿಡುಗಡೆ: ಈ ವಾರ

#yashtroll #yashmovies #yashradhikapandit #radhikapregnant

Tags