ಸುದ್ದಿಗಳು

ರಾಣಾ ದಗ್ಗುಬಾಟಿಗೆ ಧನ್ಯವಾದ ಹೇಳಿದ ಯಶ್!!

ಬೆಂಗಳೂರು,ಫೆ.10:

ಸದ್ಯ ರಾಣಾ ದಗ್ಗು ಬಾಟಿ ಕೆಜಿಎಫ್ ಸಿನಿಮಾ ನೋಡಿ ಹೊಗಳಿದ್ದರು. ಇದೀಗ ರಾಣಾ ಗೆ ನಟ ಯಶ್ ಧನ್ಯವಾದ ಹೇಳಿದ್ದಾರೆ.

ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಷ್ಟೆ ಅಲ್ಲ ಆ ಸಿನಿಮಾ ಗಳಿಕೆಯಲ್ಲೂ ಮುಂದಿದೆ. ಇದೀಗ ಈ‌ ಸಿನಿಮಾ ನೋಡಿದ ಸೆಲಿಬ್ರಿಟಿಗಳು ಕೂಡ ಸಿನಿಮಾವನ್ನು ಮೆಚ್ವಿಕೊಂಡಿದ್ದಾರೆ. ಇದೀಗ ನಟ ರಾಣಾ ದಗ್ಗುಬಾಟಿ ಕೂಡ ಸಿನಿಮಾ ನೋಡಿ ಫಿದಾ ಆಗೋದ್ರ ಜೊತೆಗೆ ಸಿನಿಮಾದಲ್ಲಿನ ನಟನೆ ಬಗ್ಗೆ ಟ್ವಿಟ್ ಮಾಡಿದ್ದರು.

೫೦ ದಿನ ದಾಟಿದ ಕೆಜಿಎಫ್

ಕೆಜಿಎಫ್ ಸಿನಿಮಾ 50 ದಿನಗಳನ್ನು ಪೂರೈಸಿ ಮುನ್ನುಗುತ್ತಿದ್ದು, ಸದ್ಯ ಅಮೆಜಾನ್ ಪ್ರೈಮ್ ನಲ್ಲಿ ಸಿನಿಮಾ ನೋಡಲು ಲಭ್ಯವಿದೆ. ಕನ್ನಡ, ತೆಲುಗು, ತಮಿಳು, ಮಲಯಾಲಂ, ಹಿಂದಿ ಭಾಷೆಯಲ್ಲಿ ಕೆಜಿಎಫ್ ಬಿಡುಗಡೆಯಾಗಿತ್ತು. ಇದೀಗ ಈ ಸಿನಿಮಾವನ್ನು ನೋಡಿ ಮೆಚ್ಚದ ಇರೋವ್ರಿಲ್ಲ. ಈ ಸಿನಿಮಾ ನೋಡಿ ಮೆಚ್ವಿ ರಾಣಾ ಟ್ವಿಟ್ ಮಾಡಿದ್ದರು. ಈ ಟ್ವಿಟ್ ಗೆ ಯಶ್ ರೀಟ್ವಿಟ್ ಮಾಡಿದ್ದಾರೆ.

ರಾಣಾಗೆ ಧನ್ಯವಾದ

ಹೌದು, ಈ ನಟ ಲೇಟಾಗಿ ನೋಡಿದ್ರು ಕೆಜಿಎಫ್ ಸಿನಿಮಾ ನೋಡಿದ ಖುಷಿ ಇದೆ ಎಂದಿದ್ದರು. ಇದಕ್ಕೆ ಯಶ್. ನಿಮ್ಮ ಮಾತಿಗೆ ಧನ್ಯವಾದಗಳು. ಈ ಸಿನಿಮಾ ಲೇಟಾಗಿ ನೋಡಿದ್ರು ಕೂಡ ನೋಡಿದ್ದೀರಾ. ಅಷ್ಟೆ ಅಲ್ಲ ನಿಮ್ಮ ಸಪೋರ್ಟ್ ನನಗೆ ಮುಖ್ಯ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

 

ಸನ್ನಿ ಹೀಗೆ ಟ್ವಿಟ್ ಮಾಡಿದ್ದು ಯಾಕೆ..? ತಲೆಕೆಡಿಸಿಗೊಂಡ ಅಭಿಮಾನಿಗಳು

#balknainews #ranadaggubati #ranamovies #yash #yashkgf #yashtweet

Tags