ಸುದ್ದಿಗಳು

ಯಶ್ ಜೊತೆ ಅಭಿನಯಿಸಲ್ಲ ಅಂದ್ರು ಶ‍್ರದ್ದಾ ಶ್ರೀನಾಥ್..!!!

ಬೆಂಗಳೂರು.ಏ.22: ‘ಯೂರ್ಟನ್’ ಬೆಡಗಿ ಶ್ರದ್ಧಾ ಶ್ರೀನಾಥ್, ‘ಆಪರೇಷನ್ ಅಲಮೇಲಮ್ಮ’, ‘ಊರ್ವಿ’ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿ ಕಾಲಿವುಡ್ ಗೆ ಹಾರಿದ್ದು ಎಲ್ರಿಗೂ ಗೊತ್ತೇ ಇದೆ. ಕಾಲಿವುಡ್ ನಲ್ಲೀಗ ಈಕೆಗೇನೋ ಆಫರ್ ಗಳ ಸುರಿಮಳೆಯೇ ಬರ್ತಿದೆ, ಆದ್ರೆ ಈಕೆ ಮಾತ್ರ ಒಂದಲ್ಲೊಂದು ವಿವಾದಗಳಿಗೆ ಬಲಿಯಾಗ್ತಿದಾರೆ.

Image result for shradda srinatha and yash

ಇತ್ತೀಚೆಗಷ್ಟೇ ಸಮಂತಾ ಅಕ್ಕಿನೇನಿ ಅಭಿನಯದ ಬಗ್ಗೆ ಕಮೆಂಟ್ ಮಾಡಿ ಸಮಂತಾ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದ ಶ್ರದ್ಧಾ ಇದೀಗ ಯಶ್ ಅಭಿಮಾನಿಗಳ ಪಾಲಿಗೆ ದುಶ್ಮನ್ ಆಗ್ಬಿಟ್ಟಿದ್ದಾರೆ.

ಇತ್ತೀಚೆಗೆ ‘ಜರ್ಸಿ’ ಪ್ರಮೋಷನ್ ವೇಳೆ ಯಶ್ ಅಥವಾ ನಾನಿ ಈ ಇಬ್ಬರಲ್ಲಿ ಯಾರ ಜೊತೆ ಅಭಿನಯಿಸಲು ಇಷ್ಟಪಡುತ್ತಿರಾ ಎಂಬ ಪ್ರಶ್ನೆಗೆ ತೀರಾ ಸಲೀಸಾಗಿ ಈಗಾಗ್ಲೇ ನಾನಿ ಜೊತೆ ಅಭಿನಯಿಸಿರೋದ್ರಿಂದ ನಾನಿ ಜೊತೆ ಆ್ಯಕ್ಟ್ ಮಾಡಲು ರೆಡಿ ಇದ್ದೇನೆ.

Yash, Shraddha Srinath and Nani

ಯಶ್ ಸೀರಿಯಲ್ ಮೂಲಕ ಬಂದು ಸದ್ಯ ಸ್ಯಾಂಡಲ್ ವುಡ್ ನಲ್ಲಿ ಬಾಕ್ಸ್ ಆಫೀಸ್ ಕಬಳಿಸ್ತಿರೋ ಸ್ಟಾರ್ ನಟ. ಆದ್ರೆ ನಾನು ಇದುವರೆಗೂ ಯಶ್ ಅವರನ್ನು ಭೇಟಿ ಮಾಡಿರೋದು ಒಮ್ಮೆ ಮಾತ್ರ ಹಾಗಾಗಿ ಈ ಬಗ್ಗೆ ನಾನೇನು ಹೇಳಲಾರೆ ಎಂದಿದ್ದಾರೆ.

ಹೀಗಾಗಿ ಕನ್ನಡದ ನಟಿಯಾಗಿದ್ದುಕೊಂಡು ಯಶ್ ಜೊತೆ ಅಭಿನಯಿಸಲು ಶ್ರದ್ಧಾ ತಿರಸ್ಕರಿಸಿದ್ದಾರೆ ಎಂದು, ಯಶ್ ಫ್ಯಾನ್ಸ್ ಫುಲ್ ಸಿಟ್ಟಾಗಿರೋದಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಶ್ರದ್ಧಾರ ವಿರುದ್ಧ ಸಮರ ಸಾರುತ್ತಿದ್ದಾರೆ.

ಪಿಎಮ್ ನರೇಂದ್ರ ಮೋದಿ ವೆಬ್ ಸೀರಿಸ್ ಬ್ಯಾನ್…!!?!!

#yash, ,#shraddasrinath, #filmnews, #balkaninews #filmnews, #jourcey,

Tags