ಸುದ್ದಿಗಳು

ಪ್ರಶಸ್ತಿ ಪತ್ನಿಗೆ ಮುಡಿಪಿಟ್ಟ ಯಶ್!!

ಬೆಂಗಳೂರು,ಏ.1: ಜೀ ಕನ್ನಡ ನೀಡಿದ ಪ್ರಶಸ್ತಿಯನ್ನು ತಮ್ಮ ಮಡದಿಗೆ ಡೆಡಿಕೇಟ್ ಮಾಡಿದ್ದಾರೆ ಯಶ್.

ಕೆಜಿಎಫ್ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಪ್ರಶಸ್ತಿ ಗಳ ಮೇಲೆ ಪ್ರಶಸ್ತಿ ಪಡೆದಿದೆ ಈ‌ ಸಿನಿಮಾ. ಇದೀಗ ಮತ್ತೊಂದು ಪ್ರಶಸ್ತಿ ತಮ್ಮ ಮುಡಿಗೆ ಮುಡಿದಿದೆ ಕೆಜಿಎಫ್. ಹೌದು, ನಟ ಯಶ್ ಗೆ ಕೆಜಿಎಫ್ ಸಿನಿಮಾದಲ್ಲಿ ನಟಿಸಿದ್ದ ಹಿನ್ನೆಲೆ ಜೀ ಕನ್ನಡ ಹೆಮ್ಮೆಯ ನಾಯಕ ನಟ ಅವಾರ್ಡ್ ನೀಡಿದೆ. ಈ ಖಾಸಗಿ ವಾಹಿನಿ ಆಯೋಜನೆ ಮಾಡಿದ್ದ ಹೆಮ್ಮೆಯ ಕನ್ನಡಿಗ ಕಾರ್ಯಕ್ರಮದಲ್ಲಿ ಹೆಮ್ಮೆಯ ನಾಯಕ ನಟ ಪ್ರಶಸ್ತಿ ನೀಡಲಾಯ್ತು. ಈ ವೇಳೆ ಈ ಪ್ರಶಸ್ತಿಯನ್ನು ರಾಧಿಕಾಗೆ ನೀಡಿದ್ದಾರೆ ಯಶ್.

ರಾಧಿಕಾಗೆ ಡೆಡಿಕೇಟ್ ಮಾಡಿದ ಯಶ್

ನಾನು ಈ ಪ್ರಶಸ್ತಿಯನ್ನು ನನ್ನ ಪತ್ನಿಗೆ ಮುಡುಪಿಡುತ್ತೇನೆ. ಯಾಕಂದರೆ ನನ್ನ ಸಿನಿಮಾ ಪ್ರಮೋಷನ್ ಸಮಯದಲ್ಲಿ ರಾಧಿಕಾ ತುಂಬು ಗರ್ಭಿಣಿ. ಅನಿವಾರ್ಯವಾಗಿ ನಾನು ಬೇರೆ  ಊರುಗಳಿಗೆ ಹೋಗಬೇಕಿತ್ತು. ಈ ಸಮಯದಲ್ಲಿ ಅವಳು ತುಂಬು ಗರ್ಭಿಣಿಯಾಗಿದ್ದರು ಕೂಡ ಸ್ಟ್ರಾಂಗ್ ಆಗಿ ಇದ್ದಳು. ಹಾಗಾಗಿ ನಾನು ಪ್ರಮೋಷನ್ ನಲ್ಲಿ ಭಾಗಿಯಾಗಲು ಸಾಧ್ಯವಾಯಿತು. ಹಾಗಾಗಿ ನಾನು ಅವಳಿಗೆ ಈ ಪ್ರಶಸ್ತಿ ಮುಡುಪಿಡುತ್ತೇನೆ ಅಂತಾ ದೊಡ್ಡ ವೇದಿಕೆಯಲ್ಲಿ ಭಾವನಾತ್ಮಕವಾಗಿ ನುಡಿದರು.

ಸಿನಿಮಾ ಬಗ್ಗೆ ಹೇಳಿದ ಯಶ್

ಇನ್ನು ಸಿನಿಮಾ ಬಗ್ಗೆ ಮಾತನಾಡಿದ ಅವರು, ನಿಜಕ್ಕೂ ಈ ಸಿನಿಮಾ ಕನ್ನಡವನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ. ಏನಾದರೂ ಸಾಧಿಸ ಬೇಕು ಅನ್ನೋ ಛಲ ಇತ್ತು. ಅಷ್ಟು ಜನ ಜೂನಿಯರ್ ಆರ್ಟಿಸ್ಟ್ ಗಳನ್ನು ನಿಭಾಯಿಸುವ ಕೆಲಸ ಪ್ರಶಾಂತ್ ನೀಲ್ ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ನಿಜಕ್ಕೂ ಈ ಸಿನಿಮಾ ಎಲ್ಲಾ ಕಡೆ ರೀಚ್ ಆಗಿದೆ. ಸಿನಿಮಾ ಇಷ್ಟರ ಮಟ್ಟಿಗೆ ತೆಗೆದುಕೊಂಡು ಹೋದ ಅಭಿಮಾನಿಗಳಿಗೆ ನನ್ನ ಹೃದಯ ಪೂರ್ವಕ ಧನ್ಯವಾದ ಅಂತಾ ತಿಳಿಸಿದ್ರು. ಇನ್ನು ಡೈಲಾಗ್ ಹೊಡೆಯೊ ಮೂಲಕ ಮತ್ತೆ ಅಭಿಮಾನಿಗಳಿಗೆ ಕ್ರೇಜ್ ಹೆಚ್ಚಿಸಿದ್ರು.

ಮಾಂಗಲ್ಯಂ ತಂತು ನಾನೇನಾ

Tags