ಸುದ್ದಿಗಳು

ಪ್ರೇಮ ಕಾಶ್ಮೀರದಲ್ಲಿ ಸೃಜನ್ ಹಾಗೂ ಹರಿಪ್ರಿಯಾ

ಭರದಿಂದ ಸಾಗುತ್ತಿರುವ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರೀಕರಣ

ಬೆಂಗಳೂರು.ಫೆ.1

ಬಹಳ ದಿನಗಳ ನಂತರ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ನಾಯಕನಟರಾಗಿ ನಟಿಸುತ್ತಿರುವ ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸದ್ಯ ಕಾಶ್ಮೀರದಲ್ಲಿ ಬೀಡು ಬಿಟ್ಟಿರುವ ಚಿತ್ರತಂಡ ಹಾಡಿನ ಚಿತ್ರೀಕರಣ ನಡೆಸುತ್ತಿದೆ.

ಚಿತ್ರದ ಬಗ್ಗೆ

ಚಿತ್ರದ ಶೀರ್ಷಿಕೆ ಗೀತೆಯ ಚಿತ್ರೀಕರಣಕ್ಕಾಗಿ ಕಾಶ್ಮೀರವನ್ನು ಆಯ್ದುಕೊಂಡಿರುವ ನಿರ್ದೇಶಕ ತೇಜಸ್ವಿ, ಕಳೆದ ನಾಲ್ಕೈದು ದಿನದಿಂದ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ. ಕಾಶ್ಮೀರದ ಗುಲ್ವಾರ್ಗ್ ನಲ್ಲಿ ನಾಯಕ ನಟ ಸೃಜನ್ ಲೋಕೇಶ್ ಹಾಗೂ ನಾಯಕಿ ಹರಿಪ್ರಿಯಾ ದಟ್ಟವಾದ ಮಂಜಿನಲ್ಲಿ, ಚುಮು ಚುಮು ಚಳಿಯಲ್ಲಿ ಈ ಡ್ಯುಯೆಟ್ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ.

ಚಿತ್ರದ ಬಗ್ಗೆ

ಅಂದ ಹಾಗೆ ಚಿತ್ರದ ಹೆಸರು ಕೇಳುತ್ತಿದ್ದಂತೆಯೇ ನಮಗೆಲ್ಲಾ ಲೋಕೇಶ್ ಅವರು ನಟಿಸಿರುವ ಚಿತ್ರದ ಹಾಡು ನೆನಪಾಗುತ್ತದೆ. ಹೀಗಾಗಿ ತಂದೆಯ ಜನಪ್ರಿಯ ಹಾಡಿನ ಸಾಲನ್ನೇ ಚಿತ್ರದ ಟೈಟಲ್ ಮಾಡಿಕೊಂಡಿದ್ದಾರೆ ಸೃಜನ್ ಲೋಕೇಶ್.

ವಿಶೇಷವೆಂದರೆ ಈ ಚಿತ್ರದಲ್ಲಿ ನಾಯಕ-ನಾಯಕಿ ಇಬ್ಬರೂ ಸತಿ-ಪತಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಾಯಕ ಸೃಜನ್ ಲೋಕೇಶ್ ಸ್ವತಃ ನಿರ್ಮಾಣ ಮಾಡುತ್ತಿರುವ ಇದು ಪಕ್ಕಾ ಕಮರ್ಶಿಯಲ್ ಕಥನ ಹೊಂದಿರುವ ಸಿನಿಮಾ.

ಸಾಧು ಕೋಕಿಲ, ರಾಧಿಕ ರಾವ್, ತಾರಾ ಅನುರಾದ, ಅವಿನಾಶ್, ತಬಲಾ ನಾಣಿ, ಗಿರಿ ಹಾಗೂ ಇತರರು ಇದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಎಚ್.ಸಿ. ವೇಣು ಛಾಯಾಗ್ರಾಹಣ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳನ್ನು ಮನರಂಜನೆಗಷ್ಟೇ ಸೀಮಿತಗೊಳಿಸಿಕೊಳ್ಳಿ

#yelliddeillithanaka, #balkaninews #srujanlokesh, #haripriya, #filmnews, #kannadasuddigalu

Tags

Related Articles