ಸುದ್ದಿಗಳು

‘ಎಲ್ಲಿದ್ದೆ ಇಲ್ಲಿ ತನಕ’ ಸೆಟ್ ಗೆ ಭೇಟಿ ನೀಡಿದ ಡಿ ಬಾಸ್!!

ಬೆಂಗಳೂರು,ಜ.12: ಸೃಜನ್ ಲೋಕೇಶ್ ಇದೀಗ ತೆರೆಯ ಮೇಲೆ ಮದುವೆಯಾಗಿದ್ದಾರೆ. ‘ಎಲ್ಲಿದ್ದೆ ಇಲ್ಲಿ ತನಕ’ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ..

ದರ್ಶನ್ ಭೇಟಿ

ಈ ಚಿತ್ರದ ಸೆಟ್ ಗೆ ಡಿ ಬಾಸ್ ಭೇಟಿ ನೀಡಿದ್ದಾರೆ.. ಇನ್ನು ಈ ಸೃಜನ್ ಲೋಕೇಶ್ ಹಾಗೂ ದರ್ಶನ್ ಆಪ್ತ ಸ್ನೇಹಿತರು.. ದರ್ಶನ್ ಸೆಟ್ ಗೆ ಆಗಮಿಸಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.. ಮಜಾ ಟಾಕೀಸ್ ನಲ್ಲಿ ಎಲ್ಲರನ್ನು ಮನರಂಜಿಸುತ್ತಿರುವ ನಟ ಸೃಜನ್ ಲೋಕೇಶ್  ಚಿತ್ರರಂಗದಿಂದ ಕೊಂಚ ದೂರಾನೇ ಉಳಿದಿದ್ದರು… ಈಗ ‘ಎಲ್ಲಿದೆ ಇಲ್ಲಿ ತನಕ’ ಸಿನಿಮಾ ಮೂಲಕ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಹೌದು, ಸೃಜನ್ ಗೆ ನಾಯಕಿಯಾಗಿ ಹರಿಪ್ರಿಯ ನಟಿಸುತ್ತಿರುವ ಸಿನಿಮಾವೇ ‘ಎಲ್ಲಿದ್ದೆ ಇಲ್ಲಿ ತನಕ’.

ಪತಿಪತ್ನಿ ಪಾತ್ರ

ಈ ಸಿನಿಮಾದಲ್ಲಿ ಇವರಿಬ್ಬರು ಪತಿ-ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ, ಫೋಟೋ ಶೂಟ್ ಕೂಡ ನಡೆದಿದೆ. ಈ ಸಿನಿಮಾವನ್ನು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಮಜಾ ಟಾಕೀಸ್’ ಶೋ ನಿರ್ದೇಶಕ ತೇಜಸ್ವಿ ಅವರೇ  ನಿರ್ದೇಶನ ಮಾಡುತ್ತಿದ್ದಾರೆ..

#srujanlokesh #darshan #balkaninews

Tags