ಸುದ್ದಿಗಳು

‘ಎಲ್ಲೋ ಬೋರ್ಡ್’ ಪ್ರದೀಪನಿಗೆ ಕಿಚ್ಚನ ಶುಭ ಹಾರೈಕೆ

ಎಲ್ಲೋ ಬೋರ್ಡ್ ಸಿನಿಮಾಗೆ ವಿಶ್ ಮಾಡಿದ ಕಿಚ್ಚ

ಬೆಂಗಳೂರು, ಡಿ.15: ಕನ್ನಡ ಸಿನಿಮಾ ರಂಗದಲ್ಲಿ ವಿಭಿನ್ನ ಸಿನಿಮಾಗಳು ತೆರೆಗೆ ಬರುವುದು ಹೊಸತೇನಲ್ಲ. ಈಗಾಗಲೇ ನಾವು ಊಹೆ ಮಾಡಲು ಸಾಧ್ಯವಾಗದೇ ಇರುವಂತಹ ಅನೇಕ ಸಿನಿಮಾಗಳು ತೆರೆಗೆ ಬಂದು ಯಶಸ್ವಿಯಾಗಿವೆ. ಅದರಲ್ಲಿ ಕೆಲವೊಂದು ಯಶಸ್ವಿಯಾದ್ರೆ ಇನ್ನು ಕೆಲವೊಂದು ಮಕಾಡೆ ಮಲಗಿದೆ. ಇದೀಗ ಹೊಸ ಕಾನ್ಸೆಪ್ಟ್ ಹಾಗೂ ವಿಭಿನ್ನ ಹೆಸರಿನ ಸಿನಿಮಾವೊಂದು ಸೆಟ್ಟೇರಲು ರೆಡಿಯಾಗಿದೆ.

ಪ್ರದೀಪ್ ಮುಂದಿನ ಸಿನಿಮಾ ‘ಎಲ್ಲೋ ಬೋರ್ಡ್’

ನಟ ಪ್ರದೀಪ್, ಈ ಹೆಸರು ಕೇಳಿದ ತಕ್ಷಣ ನೆನಪಾಗೋದು ‘ಜಾಲಿಡೇಸ್’ ಸಿನಿಮಾ. ಜಾಲಿಡೇಸ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಪ್ರದೀಪ್ ಇದೀಗ ‘ಎಲ್ಲೋ ಬೋರ್ಡ್’ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಹೌದು, ಸದ್ದಿಲ್ಲದೆ ‘ಎಲ್ಲೋ ಬೋರ್ಡ್’ ಸಿನಿಮಾದಲ್ಲಿ ಹೀರೋ ಆಗುತ್ತಿದ್ದಾರೆ ಪ್ರದೀಪ್. ಈಗಾಗಲೇ ಈ ಸಿನಿಮಾ ಸ್ಕ್ರಿಪ್ಟ್ ಕೂಡ ರೆಡಿಯಾಗಿದ್ದು, ಚಿತ್ರೀಕರಣ ಸದ್ಯದಲ್ಲೇ ಶುರುವಾಗಲಿದೆ.ಪ್ರದೀಪ್ ಗೆ ಕಿಚ್ಚ ವಿಶ್

ಇನ್ನು ಪ್ರದೀಪ್‌ ಗೆ ಬೆನ್ನೆಲುಬಾಗಿ ಇರುವ ನಟ ಸುದೀಪ್.  ಇದೀಗ ಇಡೀ ಎಲ್ಲೋ ಬೋರ್ಡ್  ತಂಡಕ್ಕೆ ವಿಶ್ ಮಾಡಿದ್ದಾರೆ. ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ನಟ ಸುದೀಪ್, ಎಲ್ಲೋ ಬೋರ್ಡ್ ಸಿನಿಮಾ ಮಾಡುತ್ತಿದ್ದೀಯಾ ನಿನಗೆ ಒಳ್ಳೆಯದಾಗಲೀ. ಇಡಿ ಸಿನಿಮಾಗೆ ನನ್ನ ಕಡೆಯಿಂದ ಶುಭಾಷಯಗಳು. ನಿನಗೆ ಒಳ್ಳೆಯದಾಗುತ್ತೆ ಎಂಬುದು ನನ್ನ ನಂಬಿಕೆ. ಒಳ್ಳೆಯದಾಗಲಿ ಗೆಳೆಯ ಎಂದಿದ್ದಾರೆ.

Tags