ಸುದ್ದಿಗಳು

ಪ್ರಧಾನಿ ಮೋದಿಗೆ ಸೆಲೆಬ್ರಿಟಿಗಳ ಸಾಥ್..‌

ಮುಗಿಲು ಮುಟ್ಟಿದ ಕರತಾಡನ..

ಕರೊನಾ ಎನ್ನುವ ಮಹಾಮಾರಿ ಇಂದ ಪ್ರಪಂಚವೇ ಕಂಗಾಲಾಗಿ ಹೋಗಿದೆ..ಯಾರೂ ಓಡಾಡದ ಸ್ಥಿತಿ ನಿರ್ಮಾಣವಾಗಿರುವಾಗ, ತಮ್ಮ ಜೀವ ಲೆಕ್ಕಿಸದೇ ಹಗಲು-ರಾತ್ರಿ ಎಂದು ನಿರಂತರವಾಗಿ ಶ್ರಮಿಸುತ್ತಿರುವ ವೈದ್ಯಕೀಯ, ಮಾಧ್ಯಮ, ಸೇನಾ ಸಿಬ್ಬಂದಿ, ಪೊಲೀಸ್ ವರ್ಗಕ್ಕೆ ಚಪ್ಪಾಳೆ ಮೂಲಕ ಕೃತಜ್ಞತೆ ತಿಳಿಸಲು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದರು. ಜೊತೆಗೆ ಜನತಾ ಕರ್ಫ್ಯೂ ಅನ್ನುವ ಅಭೂತಪೂರ್ವ ಕಲ್ಪನೆಗೆ ವ್ಯಾಪಕ ಬೆಂಬಲವೂ ಸಿಕ್ಕಿತು.Image result for modi

ಯೆಸ್, ಕರೊನಾ ಎನ್ನುವ ನೆಗೆಟಿಪ್ ಎನರ್ಜಿ ಓಡಿಸಲು ಪಾಸಿಟಿವ್ ಆ್ಯಕ್ಷನ್ ಕೈಗೆತ್ತಿಕೊಂಡಿರುವ ಪ್ರಧಾನಿ ಮೋದಿ ಅವರ ಬೆಂಬಲಕ್ಕೆ ಜನ ಸಾಮಾನ್ಯರೂ ಸೇರಿದಂತೆ ಸೆಲಬ್ರೆಟಿಗಳೂ ಕೂಡ ಜನತಾ ಕರ್ಫ್ಯೂಗೆ ಮನೆಯಲ್ಲಿಯೇ ಉಳಿದು ಸಂಜೆಯ ವೇಳೆ ಕರತಾಡನ, ವಿವಿಧ ವಾದ್ಯಗಳ ಮೂಲಕ ದೇಶದ ನೆರವಿಗೆ ಇಂತಹ ಕಷ್ಟದಲ್ಲೂ ಸಹಕರಿಸುತ್ತಿರುವವರಿಗೆ ಅಭಿನಂದನೆ ಸಲ್ಲಿಸಿದರು.

ಅನೇಕ ನಟ-ನಟಿಯರು ಪ್ರಧಾನಿಯವರ ಕರೆಗೆ ಸ್ಪಂದಿಸಿದ್ದು ಖುಷಿಯ ವಿಚಾರ. ನಟ ಪುನೀತ್ ರಾಜ್‍ಕುಮಾರ್ ಭಾನುವಾರ ತಮ್ಮ ಕೆಲಸಕ್ಕೆ ಬ್ರೇಕ್ ಹಾಕಿ, ಸದಾಶಿವ ನಗರದ ತಮ್ಮ ಮನೆಯಲ್ಲಿಯೇ ಸಮಯ ಕಳೆದು ಸಂಜೆ ೫ ಗಂಟೆಯ ವೇಳೆ ಮನೆಯ ಬಾಲ್ಕನಿಗೆ ಬಂದು ಚಪ್ಪಾಳೆ ತಟ್ಟುವ ಮೂಲಕ ಸಮಾಜದ ಸ್ವಾಸ್ಥ್ಯಕ್ಕಾಗಿ ನಿರಂತರ ಶ್ರಮ ವಹಿಸುತ್ತಿರುವವರಿಗೆ ಧನ್ಯವಾದ ಅರ್ಪಿಸಿದರು.Image result for puneeth rajkumar clap

ಅಭಿನಯ ಚರ್ಕವರ್ತಿ ಕಿಚ್ಚ ಸುದೀಪ್ ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು. ಜೊತೆಗೆ ಇದೊಂದು ಅದ್ಭುತ ಯೋಚನೆ, ನಾವು ಕರ್ಫ್ಯೂನಲ್ಲಿರಲಿಲ್ಲ, ಆದರೆ ತಾಯಿ ಪ್ರಕೃತಿಗೆ ಸ್ವಲ್ಪ ವಿರಾಮ ನೀಡಿದ್ದೇವೆ ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಜೊತೆಗೆ ನವರಸ ನಾಯಕ, ಸಮಾಜ ಸೇವಕ, ರಾಜಕೀಯ ಮುಖಂಡ ಜಗ್ಗೇಶ್ ಕೂಡ ದೇವರ ಮುಂದೆ ಮಂತ್ರ ಪಠಿಸಿ, ಸಂಜೆಯ ವೇಳೆ ಚಪ್ಪಾಳೆ ತಟ್ಟಿ ದೇಶದ ಆರೋಗ್ಯ, ರಕ್ಷಣೆಗೆ ದುಡಿಯುತ್ತಿರುವವರಿಗೆ ಧನ್ಯವಾದ ತಿಳಿಸಿದ್ದಾರೆ.

ಶ್ವೇತ ವಸ್ತ್ರ ತೊಟ್ಟ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಸೊಸೆ ಐ ಶ್ವರ್ಯ, ಮೊಮ್ಮಗಳು ಹಾಗೂ ತಮ್ಮ ಮಗಳೊಂದಿಗೆ ಚಪ್ಪಾಳೆ ತಟ್ಟಿದರು. ಜೊತೆಗೆ ತಮ್ಮ ಟ್ವಿಟ್ಟರ್ ಖಾರೆಯಲ್ಲಿ ‘ನಾವು’ ಗೆದ್ದೆವು ಎಂದು ಬರೆದುಕೊಂಡಿದ್ದಾರೆ ಬಚ್ಚನ್.Image result for Proud To Be An Indian, Says Amitabh Bachchan Praising Janta Curfew Success

ಇನ್ನು ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮಂಬೈನ ತಮ್ಮ ಫ್ಲಾಟ್ ಹೊರಗೆ ನಿಂತು ಚಪ್ಪಾಳೆ ತಟ್ಟಿ ಆರೋಗ್ಯ ಸೇವಕರಿಗೆ ಕೃತಜ್ಞತೆ ಸಲ್ಲಿಸಿದರು‌‌.. ರಣವೀರ್ ವಾದ್ಯಮೊಂದನ್ನು ನುಡಿಸಿ ಸಹಕರಿಸಿದರು.

Image result for deepika padukone clap

 

#BalkaninewsKannada #Modi #Doctors #IndianArmy #IndianPolic #KannadafilmActors #IndianFilmActors #PuneethrajKumar #kichaSudeep #NavarasanayakaJaggesh #AmitabhBachchan #DeepikaPaddukone #Clap

 

ಅಂದು ಶ್, A ಇಂದು ‘S’ 

Tags