ಸುದ್ದಿಗಳು

ಕೊಲ್ಲೂರಿನಲ್ಲಿ ಯೇಸುದಾಸ್ ಹುಟ್ಟುಹಬ್ಬ ಆಚರಣೆ

ಬೆಂಗಳೂರು, ಜ.11: ಯೇಸುದಾಸ್ ಹಾಡುಗಳು ಅಂದರೆ ತಲೆದೂಗದವರೇ ಇರುವವರಿಲ್ಲ. ಯಾಕಂದ್ರೆ ಅವರ ಗಾಯನ ಶೈಲಿಯೇ ಅಂತಹದ್ದು, ಗಾನ ಗಂಧರ್ವ ಅನ್ನೋ ಬಿರುದು ಪಡೆದಿರುವ ಈ ಖ್ಯಾತ ಗಾಯಕರ ಹುಟ್ಟುಹಬ್ಬ ನಿನ್ನೆ ನೆರವೇರಿದೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ತಮ್ಮ 79ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಕೊಲ್ಲೂರಿನಲ್ಲಿ ಹುಟ್ಟುಹಬ್ಬ

ಹೌದು, ಪ್ರತಿ ವರ್ಷ ಕೊಲ್ಲೂರಲ್ಲಿ ಹುಟ್ಟುಹಬ್ಬ ಆಚರಿಸುತ್ತಾ ಬಂದಿದ್ದಾರೆ ಯೇಸುದಾಸ್. ಅದರಂತೆ ಈ ವರ್ಷ ಕೂಡ ಅಲ್ಲಿಈ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಪತ್ನಿ ಪ್ರಭಾ ಯೇಸುದಾಸ್ ಅವರೊಂದಿಗೆ ದೇವಸ್ಥಾನಕ್ಕೆ ಬಂದು ಹುಟ್ಟುಹಬ್ಬದ ಅಂಗವಾಗಿ ದೇವರ ದರ್ಶನ ಪಡೆದರು.

ಪೂಜೆಯಲ್ಲಿ ಭಾಗಿಯಾದ ಯೇಸುದಾಸ್

ಇನ್ನು, ಇದಾದ ನಂತರ ಚಂಡಿಕಾ ಹೋಮ ನೆರವೇರಿಸಿ ಪೂರ್ಣಾಹುತಿ ಸಲ್ಲಿಸಿದರು. ಅರ್ಚಕ ಗೋವಿಂದ ಅಡಿಗ ಧಾರ್ಮಿಕ ವಿಧಾನ ಮಾಡಿದರು. ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಆವರಣದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು ಮಕ್ಕಳಿಗೆ ಅಕ್ಷರಾಭ್ಯಾಸ ಸೇವೆ ನಡೆಸಿದರು.

ಯೇಸುದಾಸ್ ಹಾಡಿಗೆ ಭಕ್ತರು ಪರವಶ

ನಂತರ ಸ್ವರ್ಣಮುಖಿ ಸಭಾಭವನದಲ್ಲಿ ಭಕ್ತಿಗೀತೆಯನ್ನು ಹಾಡುವ ಮೂಲಕ ಭಕ್ತರನ್ನು ಪರವಶರನ್ನಾಗಿ ಮಾಡಿದರು. ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

#yesudas #yesudasbirthday #singer #balkaninews

Tags