ಆರೋಗ್ಯಸುದ್ದಿಗಳು

ದೇಹವನ್ನು ಆರೋಗ್ಯವಿಗಿಟ್ಟುಕೊಳ್ಳಲು ಯೋಗ ಮಾಡಿ!!

ದೇಹವನ್ನು ಆರೋಗ್ಯವಿಗಿಟ್ಟುಕೊಳ್ಳಲು ಯೋಗ ಉತ್ತಮ ಉಪಾಯ ಯೋಗಭ್ಯಾಸ  ಪುರಾತನ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ. ಯೋಗ ಮಾಡುವುದರಿಂದ ನಿಮ್ಮ ಮನಸ್ಸು  ಮತ್ತು ದೇಹ ಎರಡನ್ನೂ ಆರೋಗ್ಯವಾಗಿಟ್ಟುಕೊಳ್ಳಬಹುದು

ದೃಢವಾಗಿ ಮತ್ತು ಸುಂದರವಾಗಿಡಲು ಯೋಗ ತುಂಬಾ ಸಹಕಾರಿ. ಯೋಗದಲ್ಲಿ ಬರುವ ಉಸಿರಾಟ ಪ್ರಕ್ರಿಯೆ ಮತ್ತು ಇತರ ಆಸನಗಳು ಮೆದುಳಿನ ಎರಡೂ ಕಡೆಗಳಲ್ಲೂ ಸಮತೋಲನವನ್ನು ಕಾಪಾಡುತ್ತದೆ. ವಯಸ್ಸಾದಂತೇ ಅರಿವಿನ ಶಕ್ತಿಗಳು ಕುಂಠಿತಗೊಳ್ಳುತ್ತವೆ. ಯೋಗದಿಂದ ಮನಸ್ಸಿನ ಯೋಚನಾ ಲಹರಿ ಮತ್ತು ಚಟುವಟಿಕೆ ಎರಡನ್ನೂ ಸಮತೋಲನದಲ್ಲಿ ಇಟ್ಟು ಕೊಳ್ಳಬಹುದೆಂದು  ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ವಯಸ್ಸಾದಂತೆ ನಮ್ಮ ನೆನಪಿನ ಶಕ್ತಿ ಕುಂದುತ್ತದೆ ಮತ್ತು ಸಮತೋಲನವನ್ನು ಕಳೆದುಕೊಳ್ಳುತ್ತೇವೆ. ವಿಜ್ಞಾನಿಗಳ ಪ್ರಕಾರ ವಯಸ್ಸಾದಂತೆ ಮೆದುಳಿನ ಹೊರಕವಚ ತೆಳ್ಳಗಾಗುತ್ತಾ ಅರಿವಿನ ಅಂಶವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನಾವು ಈ ಅಂಶದಿಂದ ಹೇಗೆ ಹೊರ ಬರಬಹುದೆಂದು ಚಿಂತನಾಶೀಲರಾಗೋಣ.

Image result for yoga

ಫ್ರಂಟಿಯರ್ ಸ್  ಏಜಂಗ್ ನ್ಯೂರೋ ಸಯಿನ್ಸ್ ಪತ್ರಿಕಾ ವರದಿಯಂತೆ ಯೋಗ ಮಾಡುವುದರಿಂದ ಯೋಚನಾಲಹರಿ ಚೂರುಕುಗೊಳ್ಳಬಹುದು.

ಸಂಶೋಧಕ ಗುಂಪಿನವರು ಹೆಚ್ಚಿನ ವಯಸ್ಸಾದ ಯೋಗ ತರಬೇತುದಾರರನ್ನು ಮತ್ತು ಯೋಗ ಮಾಡದೆ ಇರುವ ವಯಸ್ಸಾದ ಜನರ ಗುಂಪನ್ನು ಪರೀಕ್ಷಿಸಿದಾಗ ಮಿದುಳಿನ ಅಂಶಗಳಲ್ಲಿ ಯಾವುದೇ ವ್ಯತ್ಯಾಸ ಕಾಣಿಸಿಕೊಳ್ಳಲಿಲ್ಲ ಇದರ ಜೊತೆಯಲ್ಲಿ ಎಂಟು ವರ್ಷದಿಂದ ಎರಡು ಬಾರಿ ಯೋಗ ಮಾಡುವ ಯೋಗಿನಿಯರನ್ನು ಮತ್ತೊಂದು ಗುಂಪು ಹದಿನೈದು ವರ್ಷದಿಂದ ಯೋಗ ನಿರತರನ್ನು ಪರೀಕ್ಷಿಸಿದ್ದಾರೆ. ಇನ್ನೂ ಮುಂದಕ್ಕೆ ಹೋಗಿ ಸಂಶೋಧಕರು ಯೋಗಿನಿಯರು ಮತ್ತು ಯೋಗ ,ಧ್ಯಾನ ಅಭ್ಯಾಸ ಮಾಡದ ಅರುವತ್ತು ವರ್ಷಕ್ಕಿಂತ ಮಿಗಿಲ್ಪಟ್ಟ ಸ್ತ್ರೀಯರನ್ನು ದೈಹಿಕವಾಗಿ ಪರೀಕ್ಷಿಸಿದರು.

ಸಂಶೋಧಕರ ಪ್ರಕಾರ ಮಿದುಳಿನಲ್ಲಿ ಅಯಸ್ಕಾಂತಅನುರಣನ ಇದೆಯೇ ಇಲ್ಲವೆಂಬುದನ್ನು ಖಾತ್ರಿ ಪಡಿಸಿದ್ದಾರೆ. ರುಯಿ ಆಫೋನ್ಸೊ ಇಸೆಲಿಟ ಆಲ್ಬರ್ಟ್ ಐನ್ ಸ್ಟಿನ್ ಸಾವೊ ಪವುಲೊ ರವರ  ಪ್ರಕಾರ ಮಿದುಳಿನ ಮುಂಭಾಗದ ಎಡ ಹೊರ ಕವಚದ ಪ್ರದೇಶಗಳಲ್ಲಿ ಜಾಸ್ತಿ ಚಿಂತನಾಶೀಲತೆ ,ಏಕಾಗ್ರತೆ ,ನೆನಪಿನ ಶಕ್ತಿ ಹೆಚ್ಚು ಕಂಡು ಬಂದಿದೆ.

Image result for yoga

 

ಮಾಧ್ಯಮದವರ ಮೇಲೆ ರೇಗಾಡಿದ್ದ ರಕ್ಷಿತಾ ಇದೀಗ ಕ್ಷಮೆಯಾಚನೆ

Tags