ಸುದ್ದಿಗಳು

ಪಿಯುಸಿ ಫಲಿತಾಂಶದ ಹಿನ್ನೆಲೆ ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿದ ವಿಕಟಕವಿ ಯೋಗರಾಜ್ ಭಟ್

ಬೆಂಗಳೂರು, ಏ.15:

ಸದ್ಯ ಇಂದು ಪಿಯುಸಿ ಫಲಿತಾಂಶ ಹೊರ ಬಿದ್ದಿದೆ. ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ರೆ, ಚಿತ್ರ ದುರ್ಗ ಜಿಲ್ಲೆ ಅಂತಿಮ ಸ್ಥಾನದಲ್ಲಿದೆ. ಈ ಬಾರಿಯಲ್ಲಿ 671653 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.  ಇವರಲ್ಲಿ 441587 ಮಂದಿ ಪಾಸ್ ಆಗಿದ್ದಾರೆ. ಇದೀಗ ನಿರ್ದೇಶಕ ಯೋಗರಾಜ್ ಭಟ್ ತಮ್ಮದೇ ಆದ ಶೈಲಿಯಲ್ಲಿ ವಿದ್ಯಾರ್ಥಿಗಳಿಗೆ ಓಂದಿಷ್ಟು ಕಿವಿ ಮಾತನ್ನು ತಿಳಿಸಿದ್ದಾರೆ.

ಪಿಯುಸಿ ಹುಡುಗ ಹುಡುಗಿಯರಿಗೆ ಜೈ…

ರಿಸಲ್ಟ್ ಏನೇ ಬರ್ಲಿ ತಲೆ ಕೆಡುಸ್ಕೋಬೇಡಿ ಯಾಕೆಂದ್ರೆ ಏನೇ ರಿಸಲ್ಟ್ ಬಂದ್ರೂ ಅದು ದಿ ಎಂಡ್ ಅಂತ ಅಲ್ಲ…

ಫೇಲಾದವ್ನೆ ಪಾಸಾಗೋದು ಹೊಡಿ  9

ಇದ್ನ ತಿಳ್ಕಂಡವ್ನೆ ಮೇಷ್ಟ್ರಾಗೋದು ಹೊಡಿ 9.

ಎಜುಕೇಷನ್ಗಿಂತ ದೊಡ್ಡದು ಜೀವನ… ಎಷ್ಟೊಳ್ಳೆ ಮೇಷ್ಟ್ರು ಕೂಡ ಜೀವನ ಹೇಳ್ಕೊಡಕ್ಕಾಗಲ್ಲ… ಜೀವನ ಚೂರು ಅರ್ಥ ಆಗೋಕೆ ಶುರು ಆಗೋದೇ ಪಿಯುಸಿ ಹಾಗೂ ಸಿಈಟಿ ರಿಸಲ್ಟ್ ದಿನ..! ಹೆಚ್ಚು ಕಮ್ಮಿ ಹದಿನೆಂಟು ತುಂಬುತ್ತಲ್ಲಾ..!

ಈ ಜೀವನ ಎಲ್ಲಾ ಕಲಿಸುತ್ತೆ ಬದುಕೋದೊಂದನ್ನ ಬಿಟ್ಟು ಅಂತಾರೆ.. ಸೋ.. ಯಾವುದೇ ಕಾರಣಕ್ಕೂ ಟೆನ್ಷನ್ ಆಗ್ಬೇಡಿ… ಒಳ್ಳೆ ಮಾರ್ಕ್ಸ್ ಬಂದ್ರೂ ಕೆಟ್ಟ ಮಾರ್ಕ್ಸ್ ಬಂದ್ರೂ ಸಮನಾಗಿ ತಗೋಳಿ… ಓದುವುದರಲ್ಲಿ ತಪ್ಪು ಮಾಡಿದ್ರೆ ತಿದ್ಕೊಳ್ಳೋ ಪ್ಲಾನ್ ಮಾಡಿ… ತುಂಬಾ ಸರಿಯಾಗಿ ಓದ್ಕೊಂಡವ್ರು, ಜಾಸ್ತಿ ಮಾರ್ಕ್ಸ್ ತಗೊಂಡವ್ರು ಅಹಂಕಾರ  ಪಡ್ಬೇಡಿ… ಏನೇ ಕಿಸ್ದು ದಬ್ಬಾಕಿದ್ರೂ ಜೀವನ ತಾನಾಗೇ ಅರ್ಥ ಆಗ್ಬೇಕು… ಏನೋ ಒಂದು ಮಾಡೋವರೆಗೆ “ಅನುಭವ” ಕೂಡಾ ನಮ್ಮನ್ನ ನೋಡಿ ದೂರದಿಂದ ನಗತ್ತೆ… ಯಾವುದಕ್ಕೂ ಶಾರ್ಟ್ ಕಟ್ ಇಲ್ಲ… ಚೆನ್ನಾಗಿರಿ ಅಷ್ಟೆ…

ರ‍್ಯಾಂಕ್ ಬಂದವ್ರಿಗೆ, ಡಿಸ್ಟಿಕ್ಷನ್ ಬಂದವ್ರಿಗೆ, ಹೈಯರ್ ಸೆಕೆಂಡ್ ಕ್ಲಾಸ್ ಬಂದವ್ರಿಗೆ, ಜಸ್ಟ್ ಪಾಸ್ ಆದವ್ರಿಗೆ ಹಾಗೂ ಫೇಲ್ ಆದವ್ರಿಗೆಲ್ಲಾ ನನ್ನ ಶುಭಾಶಯ ಜೀವನ ಮತ್ತು ಯೌವನ ಎರಡೂ ಸರಿ ದಾರಿಗೆ ಸಾಗಲಿ ಎಂದು ಪಾಸ್ ಮಾಡ್ತೇನೆ… ಸರಿಯಾಗಿ ಬದುಕೋದಕ್ಕಿಂತ ದೊಡ್ಡದು ಸದ್ಯಕ್ಕೆ ಬೇರೇನೂ ಇಲ್ಲ..!

ಯೋಗರಾಜ್ ಭಟ್ ಹಾಗೂ ಪಂಚತಂತ್ರ ತಂಡ… ಹೀಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

‘ಬಟರ್ ಫ್ಲೈ’ ಫೋಟೋ ಶೂಟ್ ಮಾಡಿಸಿದ ನಟಿ ಪಾರುಲ್

#yogarajbhatt #yogarajbhattmovies #sandalwood #kannadamovies #balkaninews #yogarajbhattinstagram #pucstudents #pucresultannounce

Tags