ಸುದ್ದಿಗಳು

ಸಲಗನಿಗೆ ಯೋಗಿಯ ಯೋಗ…!

ಸಲಗನನ್ನು ಕುಣಿಸಲು ಹಿಪ್ ಹಾಪ್ “ಯೋಗಿ ಬಿ” ಧ್ವನಿ ನೀಡಲಿದ್ದಾರೆ...!

ನಟ ದುನಿಯಾ ವಿಜಯ್ ಈಗ ನಿರ್ದೇಶಕರಾಗಿರುವುದು ಎಲ್ಲರಿಗೂ ಗೊತ್ತೇಯಿದೆ. ಸಲಗ ಚಿತ್ರದ ಮೂಲಕ ನಿರ್ದೇಶಕರಾಗಿ ಹೊಸ ಅವತಾರವನ್ನು ತಾಳಿದ್ದಾರೆ. ಈ ಅವತಾರಕ್ಕೆ ಇಂದು ಯೋಗಕೂಡಿಬಂದಿದೆ. ಸಲಗನನ್ನು ಕುಣಿಸಲು ಹಿಪ್ ಹಾಪ್ “ಯೋಗಿ ಬಿ” ಧ್ವನಿ ನೀಡಲಿದ್ದಾರೆ. ಭಾರತದಲ್ಲೇ ಜನಪ್ರಿಯ ಗಾಯಕ ಆಗಿರುವ ಯೋಗಿ ಬಿ , 2020 ರಲ್ಲಿ ರಜಿನಿಕಾಂತ್ ಅವರ ದರ್ಬಾರ್ ಸಿನಿಮಾದಲ್ಲಿ ಹಾಡಿದ್ದರು.

Image result for yogi b

ಸಲಗ ಚಿತ್ರದ ಸಂಗೀತ ನಿರ್ದೇಶಕರಾದ ಚರಣ್ ರಾಜ್, ಗಾಯಕ “ಯೋಗಿ ಬಿ” ಅವರ ಬಳಿ ಹಾಡನ್ನು ಹಾಡಿಸುವುದರ ಮೂಲಕ, ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. “ಸೂರಿ ಅಣ್ಣ” ಸಾಂಗ್ ಈಗಾಗಲೇ ಹಿಟ್ ಆಗಿದ್ದು, ಸಿದ್ದಿ ಸಾಂಗ್ ಮೇಕಿಂಗ್ ಸಡ್ಡು ಮಾಡುತ್ತಿದೆ. ಸಲಗದ ಮುಖ್ಯ ಪಾತ್ರದಲ್ಲಿ ದುನಿಯಾ ವಿಜಯ್ ಜೊತೆಗೆ, ತಾರಾಗಣದಲ್ಲಿ ಸಂಜನಾ ಆನಂದ್ ಮತ್ತು ಧನಂಜಯ್, ಅಚ್ಯುತ್ ಕುಮಾರ್, ತ್ರಿವೇಣಿ ರಾವ್, ಯಶ್ ಶೆಟ್ಟಿ, ರಂಗಾಯಣ ರಘು, ಸತೀಶ್ ನಿನಾಸಂ ಮತ್ತು ನಾಗಭೂಷನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

Image result for salaga

ಸಲಗದ ಮೇಕಿಂಗ್ ವೀಡಿಯೋಸ್ ಹಾಗು ಪಾತ್ರಧಾರಿಗಳ ಲುಕ್ಸ್, ಎಲ್ಲವೂ ವಿಭಿನ್ನವಾಗಿ ತೋರುತ್ತಿದೆ. ಅಂಡರ್ ವರ್ಡ್ ನ ಎನ್ನೋದು ಮುಖ ಸಲಗ ಎನ್ನಲಾಗುತ್ತಿದೆ. ಹವರು ಕುತೂಹಲವನ್ನು ಮೂಡಿಸಿರುವ ವಿಜಯ್ ಅವರ ಸಲಗ ಅತಿಶೀಘ್ರದ್ಲಲಿ ಬರಲಿದೆ. ಸಲಗನ ವೇಗಕ್ಕೆ ಈಗ ಯೋಗಿ ಬಿ ಜೊತೆಯಾಗಿರುವುದು ವಿಶೇಷ.

ಟೈಗರ್ ಸೀನನನ್ನು ಮೆಚ್ಚಿದ ವರ್ಮಾ…!

#salaga #duniyavijay #yogib #dananjay #chanaraj #yashshetty #balkaninews #kannadamovie #ciniadda

Tags