ಸುದ್ದಿಗಳು

‘ಲಂಕೆ’ಯಿಂದ ಲೂಸ್ ಮಾದ ಯೋಗಿಗೆ ಲಕ್ ಸಿಗುವುದೇ..!?!

ಇದೊಂದು ಪೌರಾಣಿಕ ಚಿತ್ರ, ರಾಮಾಯಣದಲ್ಲಿ ರಾವಣನೇ ಸಿನಿಮಾದ ಕಥಾವಸ್ತು

ಬೆಂಗಳೂರು.ಫೆ.12

‘ದುನಿಯಾ’ ಚಿತ್ರದ ಮೂಲಕ ಗುರುತಿಸಿಕೊಂಡದವರಲ್ಲಿ ಲೂಸ್ ಮಾದ ಯೋಗಿ ಕೂಡಾ ಒಬ್ಬರು. ಈ ಚಿತ್ರದ ನಂತರ ಅವರು ನಾಯಕನಟರಾಗಿ ನಟಿಸಿದ ‘ನಂದಾ ನಂದಿತಾ’ ಹಾಗೂ ‘ಅಂಬಾರಿ’ ಚಿತ್ರಗಳು ಸೂಪರ್ ಹಿಟ್ ಆದವು. ಆನಂತರ ಹಿಂತಿರುಗಿ ನೋಡದ ಅವರು ಒಂದಾದರಂತೆ ಒಂದೊಂದು ಸಿನಿಮಾಗಳಲ್ಲಿ ನಟಿಸಿದರು.

ಗೆಲುವು ಬೇಕಾಗಿದೆ

ಯಾಕೋ ಇತ್ತೀಚೆಗೆ ಯೋಗಿ ನಟಿಸಿರುವ ಸಿನಿಮಾಗಳು ಅಷ್ಟೊಂದು ಸದ್ದು ಮಾಡುತ್ತಿಲ್ಲ. ಇನ್ನು ಕಳೆದ ಕೆಲವು ವಾರಗಳ ಹಿಂದೆಯಷ್ಟೇ ತೆರೆ ಕಂಡಿದ್ದ ‘ಲಂಬೋದರ’ ಸಿನಿಮಾ ಚೆನ್ನಾಗಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಅಷ್ಟೊಂದು ಕಮಾಲ್ ಮಾಡಲಾಗಲಿಲ್ಲ. ಇದೀಗ ಅವರು ‘ಲಂಕೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಂದ ಹಾಗೆ ಇದೊಂದು ಪೌರಾಣಿಕ ಚಿತ್ರವಾಗಿದ್ದು ರಾಮಾಯಣದಲ್ಲಿ ರಾವಣನೇ ಸಿನಿಮಾದ ಕಥಾವಸ್ತುವಾಗಿದೆ.

ಗೆಲುವು ತರುವುದು ಗ್ಯಾರಂಟಿ

ಈ ಹಿಂದೆ ‘ಬಣ್ಣ ಬಣ್ಣದ ಲೋಕ’ ಸಿನಿಮಾ ನಿರ್ದೇಶನ ಮಾಡಿದ್ದ ರಾಮ್ ಪ್ರಸಾದ್ ಈಗ ‘ಲಂಕೆ’ಗೆ ಸಾರಥಿಯಾಗಿದ್ದಾರೆ. ಈ ಮೂಲಕ ಯೋಗಿಯನ್ನು ಬೇರೆಯದ್ದೇ ರೀತಿಯಲ್ಲಿ ತೋರಿಸುವಂಥಾ ವಿಶಿಷ್ಟ ಕಥೆಯನ್ನೂ ರೆಡಿ ಮಾಡಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರವು ಖಂಡಿತ ಯೋಗಿಗೊಂದು ಗೆಲುವು ತಂದುಕೊಡುವುದು ಗ್ಯಾರಂಟಿ ಎಂಬ ಮಾತುಗಳು ಕೇಳಿ ಬರುತ್ತಿವೆ.

ಚಿತ್ರದ ಬಗ್ಗೆ

ಇದೊಂದು ರಾಮಾಯಣ ಆಧಾರಿತ ಚಿತ್ರವಾಗಿದ್ದು, ಲೂಸ್ ಮಾದ ಯೋಗಿ, ಸಂಚಾರಿ ವಿಜಯ್, ಕಾವ್ಯಾ ಶೆಟ್ಟಿ ಮತ್ತು ಕ್ರಿಷಿ ತಾಪಂದಾ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಪಟೇಲ್ ಶ್ರೀನಿವಾಸ್ ನಿರ್ಮಾಣದ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ, ರಮೇಶ್ ಬಾಬು ಛಾಯಾಗ್ರಹಣ ಮಾಡಲಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಬೆಂಗಳೂರು ಹಾಗೂ ಶೃಂಗೇರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

ಕನ್ನಡದ  ‘ಇಂಪು’-‘ಕಂಪು’ ಎರಡೂ ಮಾಯ..!

#yogi, #balkaninews #filmnews, #lambodara, #lanke, #kannadasuddigalu

Tags