ಸುದ್ದಿಗಳು

ಯೋಗರಾಜ್ ಭಟ್ ಇನ್ ‘ಬೆಲ್ ಬಾಟಂ’!!

ಯೋಗರಾಜ್ ಭಟ್ ಬಹಳ ಸಮಯದ ಬಳಿಕ ಮತ್ತೆ ನಟನೆಗೆ

ಬೆಂಗಳೂರು,ಡಿ.7: ‘ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು’ ರಿಕ್ಕಿ’,’ಕಿರಿಕ್ ಪಾರ್ಟಿ’ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಮೊದಲ ಬಾರಿ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ ‘ಬೆಲ್ ಬಾಟಂ’. ಸದ್ಯ, ಈ ಚಿತ್ರವು ವಿಭಿನ್ನ ಪೋಸ್ಟರ್ ಮತ್ತು ಮೇಕಿಂಗ್ ಮೂಲಕ ಸದ್ದು ಮಾಡುತ್ತಿದೆ…, ಮೊನ್ನೆಯಷ್ಟೇ ನಾಯಕ ಡಿಟೆಕ್ಟಿವ್ ದಿವಾಕರನನ್ನು ಪರಿಚಯಿಸುವ ಸಲುವಾಗಿ ಚಿತ್ರತಂಡ ಸಣ್ಣ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿತ್ತು. ಇಂದು ಈ ಚಿತ್ರದ ಟೀಸರ್ ಅನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ.

ಡಿಫರೆಂಟ್ ಲುಕ್  

ಇನ್ನು ಈ ಚಿತ್ರದಲ್ಲಿ ಟೀಸರ್ ನಲ್ಲಿ, ನಿರ್ದೇಶಕ ಯೊಗರಾಜ್ ಭಟ್ ಹಾಗೂ ಶಿವಮಣಿ ಕಾಣಿಸಿದ್ದಾರೆ. ಈ ಹಿಂದೆ ‘ದ್ಯಾವ್ರೇ’ ಚಿತ್ರದಲ್ಲಿ ನಟಿಸಿದ್ದ ಯೋಗರಾಜ್ ಭಟ್ ಬಹಳ ಸಮಯದ ಬಳಿಕ ಒಂದು ಪಾತ್ರ ಮಾಡಿದ್ದಾರೆ. ಯೋಗರಾಜ್ ಭಟ್ ರ ಡಿಫರೆಂಟ್ ಲುಕ್  ಮೋಡಿ ಮಾಡಿದೆ..

ಡಿಟೆಕ್ಟಿವ್ ದಿವಾಕರ್
ರಿಷಬ್ ಈ ಚಿತ್ರದಲ್ಲಿ ಡಿಟೆಕ್ಟಿವ್ ದಿವಾಕರ್ ಪಾತ್ರ ನಿರ್ವಹಿಸಿದ್ದು,ಅವರಿಗೆ ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ. ಜಯತೀರ್ಥ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.ಇನ್ನು ರಕ್ಷಿತ್ ಶೆಟ್ಟಿ ಸ್ನೇಹಿತರಾಗಿ ರಿಷಬ್ ಆರಂಭದಿಂದಲೂ ಜೊತೆಯಲ್ಲಿದ್ದಾರೆ.

 

 

Tags

Related Articles