ಸುದ್ದಿಗಳು

ಯೋಗರಾಜ್ ಭಟ್ ಪತ್ರ!!

ಬೆಂಗಳೂರು,ಏ.14: ನಟ ಯೋಗರಾಜ್ ಭಟ್ ಪಂಚತಂತ್ರ ಸಿನಿಮಾ ವಿಚಾರವಾಗಿ ಪತ್ರವೊಂದನ್ನು ಅಭಿಮಾನಿಗಳಿಗೆ ಬರೆದಿದ್ದಾರೆ.

ಪಂಚತಂತ್ರ ಚಿತ್ರ ಯಶಸ್ವಿ ೨೫ ದಿನ ಪೂರೈಸುವತ್ತ ಮುನ್ನಡೆದಿದೆ. ಈಗಾಗಲೇ ಸಿನಿಮಾ ಹೊರ ದೇಶಗಳಲ್ಲೂ ಸದ್ದು ಮಾಡುತ್ತಿದ್ದು, ನೋಡುಗರು ಸಿನಿಮಾವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ವಿಭಿನ್ನ ಕಥೆಯನ್ನಿಟ್ಟುಕೊಂಡು, ಅದಕ್ಕೊಂದು ವಿಭಿನ್ನ ಟೈಟಲ್ ಕೊಟ್ಟು ಸಿನಿಮಾ ಮಾಡಿರುವ ಯೋಗರಾಜ್ ಭಟ್ ಅವರ ಕಥೆ ಪ್ರೇಕ್ಷಕರಿಗೆ ತಲುಪುತ್ತಿದೆ. ಇದೀಗ ಈ ಸಿನಿಮಾ ಸಂಬಂಧ ನಿರ್ದೇಶಕ ಯೋಗರಾಜ್ ಭಟ್ ಪತ್ರವೋಮದನ್ನು ಬರೆದಿದ್ದಾರೆ.

ಓಲೆಯ ಮೂಲಕ ಯೋಗರಾಜ್ ಭಟ್ ಹೇಳಿದ್ದೇನು..?

ನಾಡಮಂದಿಗೆ ನಮನ. ಹಿರಿಯರು ಮತ್ತು ಕಿರಿಯರ ನಡುವಿನ ಜನರೇಷನ್ ಗಲಾಟೆಯ ಕಥೆಯೇ ಪಂಚತಂತ್ರ. ನಿಮ್ಮ ಮನೆಗಳ ಕಥೆ ಪರದೆಯಲ್ಲಿ ರಾರಾಜಿಸುತ್ತಿದೆ. ಕರೆಂಟು ಹರಿದಂಥ ಭಾವನಾತ್ಮಕ ಕ್ಲೈ ಮ್ಯಾಕ್ಸ್ ನೀಂದ ಚಿತ್ರ ಮನೆಮಾತಾಗುತ್ತಿದೆ. ಹತ್ತಿರದ ಚಿತ್ರಮಂದಿರಗಳಲ್ಲಿದೆ. ಎಷ್ಟೋ ವಯಸ್ಸು ಆಯ್ತು ನಾನ್ ಸಿನಿಮಾ ನೋಡಿಲ್ಲ.. ಎಂದು ಹೇಳುವ ಹಿರಿಯರೂ.. ಕನ್ನ ಪಿಕ್ಚರ್‌ನಲ್ಲಿ ಏನಿರುತ್ತೆ..? ಎಂಬ ಕಿರಿಯರೂ ನೋಡಬಹುದಾ ಅಪರೂಪದ ಸಿನಿಮಾ. ಪಂಚತಂತ್ರ ದಯವಿರಿಸಿ ನೋಡಿ.. ಹೊಸ ಮನೋರಂಜನೆ.. ಹೊಸಬರೇ ತುಂಬಿರುವ ಚಿತ್ರವಿದು. ನೈಜ ಮನರಂಜನೆ ಪಡೆದು ಹೊಸಬರನ್ನು ಉಳಿಸಿ ಬೆಳೆಸಿ ಹರಸಿ ಧನ್ಯವಾದ ಅಂತಾ ಓಲೆಯನ್ನು ಮುಗಿಸಿದ್ದಾರೆ.

 

View this post on Instagram

 

🙏🙏🙏

A post shared by Yogaraj Bhat (@yogarajbhatofficial) on

ವಿಕಟ ಕವಿ ನಿರ್ದೇಶನ ಸಿನಿಮಾ

 ಇನ್ನು ಯೊಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ವಿಹಾನ್ ಮತ್ತು ಸೋನಲ್ ಹಾಗೂ ಅಕ್ಷರ ಗೌಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.. ಇನ್ನು ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾ ನೋಡಿದವರೆಲ್ಲಾ ಸಿನಿಮಾಗೆ ಜೈ ಎಂದಿದ್ದಾರೆ. ಇನ್ನು ಈ ಚಿತ್ರ ಹಿರಿಯರು ಹಾಗೂ ಕಿರಿಯರ ನಡುವಿನ ಆಮೆ ಮೊದಲ ಕಥೆಯಾಗಿದೆ.

‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ ಗೆ ಬಂತು ಟಾಲಿವುಡ್ ನಿಂದ ಭರ್ಜರಿ ಆಫರ್…!

#bollywood #kannadamovies #yograjbhat

 

Tags