ಸುದ್ದಿಗಳು

ಹಂಸಲೇಖಗೆ ಹಾರ್ಮೋನಿಯಂ ಗಿಫ್ಟ್ ಮಾಡಿದ ಯೋಗರಾಜ್ ಭಟ್

ಹಂಸಲೇಖ. ದಿ ಲೆಜೆಂಟ್ ಆಫ್ ಸಂಗೀತಾ ಅಂತಾನೆ ಹೆಸರು ಪಡೆದವರು. ಸ್ಯಾಂಡಲ್ ​ವುಡ್​​ ನ ಪಾಲಿಗೆ ಸಂಗೀತ ಅಂದ್ರೆ ಹಂಸಲೇಖ, ಹಂಸಲೇಖ ಅಂದ್ರೆ ಸಂಗೀತ. ಹಂಸಲೇಖ ಸಂಗೀತ ನಿರ್ದೇಶಕರಾಗಿ ಕನ್ನಡಕ್ಕೆ ಕೊಡುಗೆ ಅಪಾರ ಕೊಡುಗೆ ನೀಡಿದ್ದಾರೆ. ಹಂಸಲೇಖ ಸಂಗೀತದಿಂದಲೇ ಸ್ಯಾಂಡಲ್ ​ವುಡ್ ​ಗೆ ಒಂದು ಗುರುತನ್ನ ತಂದು ಕೊಟ್ಟವರು. ಅವರ ಮ್ಯೂಸಿಕ್​ ಜ್ಞಾನದ ಬಗ್ಗೆ ಮಾತನಾಡದವರೆ ಇಲ್ಲ. ಯಾಕಂದ್ರೆ ಯಾವುದೇ ತಾಳ ಮೇಳಗನ್ನ ಸಲೀಸಾಗಿ ಹೇಳುವಷ್ಟು ಜ್ಞಾನ ಹೊಂದಿದವರು. ಇನ್ನು, ಮ್ಯೂಸಿಕ್​ ಇನ್ ​ಸ್ಟ್ರೂಮೆಂಟ್​ಗಳೆಂದರೇ ಹಂಸಲೇಖಗೆ ತುಂಬಾ ಇಷ್ಟವಂತೆ. ಅದ್ರಲ್ಲೂ ಹಾರ್ಮೋನಿಯಂ ಅಂದ್ರೆ ಹಂಸಲೇಖಂಗೆ ಎಲ್ಲಿಲ್ಲದ ಪ್ರೀತಿ. ಹೀಗಾಗಿಯೇ ಇವತ್ತು ನಿರ್ದೇಶಕ ಯೋಗರಾಜ್​ ಭಟ್​, ತಮ್ಮ ಗುರುಗಳಾದ ಹಂಸಲೇಖಗೆ ಹಾರ್ಮೋನಿಯಂ ಗಿಫ್ಟ್​ ಮಾಡಿದ್ದಾರೆ.

ಯೋಗರಾಜ್ ಭಟ್ಟರ ಪಾಲಿಗೆ ಹಂಸಲೇಖ ದ್ರೋಣಚಾರ್ಯರ ಸಮಾನ. ಯಾಕಂದ್ರೆ, ಹಂಸಲೇಖ ನೇರವಾಗಿ ಭಟ್ಟರಿಗೆ ಗುರುಗಳಾಗಿದ್ದರೂ ತಮ್ಮ ಸಂಗೀತ, ಸಾಹಿತ್ಯದಿಂದ ಗುರುವಾಗಿ ಬಿಟ್ಟಿದ್ದರು. ಅಲ್ಲದೇ, ಈ ಇಬ್ಬರಲ್ಲೂ ಒಂದು ಸಾಮ್ಯತೆಯಿದೆ. ಚಿ.ಉದಯಶಂಕರ್ ನಂತರ ಕನ್ನಡದಲ್ಲಿ ಬೇರೊಂದು ಬಗೆಯ ಸಂಗೀತ, ಸಾಹಿತ್ಯಕ್ಕೆ ಕಾರಣರಾದವರೂ ಹಂಸಲೇಖ. ತಮ್ಮದೇ ಆದ ಡಿಫರೆಂಟ್​ ಆಲೋಚನೆಗಳಿಂದ ಹಂಸಲೇಖ ಇಂಡಸ್ಟ್ರಿಯಲ್ಲಿ ಸಕ್ಸಸ್​ ಕಂಡಿದ್ದರು. ನಂತರ, ಹಂಸಲೇಖ ಯುಗ ಮುಗಿಯೋ ಟೈಂನಲ್ಲೆ ರೂಲ್​ ಬ್ರೇಕ್​ ಮಾಡಬೇಕು ಅಂತಲೇ ಬಂದೋರು ಯೋಗರಾಜ್ ಭಟ್​.

ಯೋಗರಾಜ್ ಭಟ್ಟರ ಸಾಹಿತ್ಯ ತುಂಬಾ ಡಿಫರೆಂಟ್​. ಕನ್ನಡವನ್ನು ಹೀಗೂ ಬಳಸಬಹುದು ಅಂತಾ ತೋರಿಸಿ ಕೊಟ್ಟ ವ್ಯಕ್ತಿ. ಹಂಸಲೇಖರ ಐಡಿಯಾಲಜಿಯನ್ನು ಮುಂದೆ ಸಾಗಿಸುತ್ತಿರೋ ಸಾಹಿತಿ, ನಿರ್ದೇಶಕರೆಂದರೆ ಅದು ಯೋಗರಾಜ್​ ಭಟ್. ಹೀಗಾಗಿ ಹಂಸಲೇಖರಿಗೂ ಭಟ್ಟರು ಅಂದ್ರೆ ತುಂಬಾ ಪ್ರೀತಿ. ಇದನ್ನು ಅವರೇ ಅದೆಷ್ಟೋ ಬಾರಿ ಹೇಳಿಕೊಂಡಿದ್ದಾರೆ. ಇವತ್ತು ಯೋಗರಾಜ್ ಭಟ್ಟರ ಆಡಿಯೋ ಕಂಪೆನಿ ಆರಂಭವಾಗ್ತಿರೋ ಸಂದರ್ಭದಲ್ಲಿ ಹಂಸಲೇಖರೇ ಖುದ್ದು ಹಾಜರಿದ್ದರು. ಪ್ರಿಯ ಶಿಷ್ಯನಿಗೆ ಹಂಸಲೇಖ ಹೃದಯ ಪೂರ್ವಕವಾಗಿ ಶುಭಾಶಯ ಕೋರಿದರು. ಇದೇ ವೇಳೆ ಭಟ್ಟರು, ತಮ್ಮ ಗುರುಗಳಿಗೆ ಇಷ್ಟವಾದ ಹಾರ್ಮೋನಿಯಂ ಒಂದನ್ನು ಉಡುಗೊರೆ ನೀಡಿದರು.

ಭಟ್ಟರ ಉಡುಗೊರೆ ನೋಡಿ ಹಂಸಲೇಖ ತುಂಬಾ ಖುಷಿ ಪಟ್ಟರು. ಈ ವೇಳೆ ಯೋಗರಾಜ್​ ಗೆ ಧನ್ಯವಾದ ಹೇಳಿದ ಹಂಸಲೇಖ. ಭಟ್ಟರು ನೀಡಿದ ಹಾರ್ಮೋನಿಯಂನಲ್ಲಿ ಮುಂಗಾರುಮಳೆ ಸಿನಿಮಾದ ಅನಿಸುತಿದೆ ಯಾಕೋ ಇಂದು ಹಾಡನ್ನು ಟ್ಯೂನ್​ ನುಡಿಸಿದರಂತೆ.

 

Tags