ಸುದ್ದಿಗಳು

ಮತದಾನ ಜಾಗೃತಿಗೆ ಭಟ್ಟರ ಕವನ

ನಿರ್ದೇಶಕ ಯೋಗರಾಜ್ ಭಟ್ ಇದೀಗ, ಜನರಲ್ಲಿ ಮತದಾನದ ಅರಿವು ಮೂಡಿಸುವ ಸಲವಾಗಿ, ಈಗಿನ ಪೀಳಿಗೆಯ ಪ್ರೇಕ್ಷಕರ ನಾಡಿಮಿಡಿತವನ್ನು ಅರಿತು ಕವನವೊಂದನ್ನು ಬರೆದಿದ್ದು, ಈಗಾಗಲೇ ಈ ಹಾಡಿನ ಚಿತ್ರೀಕರಣ ಮುಗಿಸಿದೆ.

ನಿನ್ನಾ ಬೆರಳಲಿ
ನಾಡಿನ ಭವಿಷ್ಯ
ಅಡಗಿಹುದು ಮಹನೀಯ…
ಶಾಯಿ ಚುಕ್ಕಿಯ
ಧರಿಸು ಈ ದಿನ
ತಪ್ಪದಲೆ ಮಹರಾಯ
ಕರುನಾಡ ನಾಗರಿಕರೆಂದು
ಮತ ನೀಡುವಿಕೆಯಲ್ಲಿ ಮುಂದು
ಹೆಮ್ಮೆಯಿಂದ
ತೋರೀ ನಿಮ್ಮ
ತೋರು ಬೆರಳನ್ನಾ
ಮಾಡಿ ಮಾಡಿ ಮಾಡಿ ಮತದಾನ..
ಇರಲಿ ದೇಶದ ಮೇಲೆ ಅಭಿಮಾನ..

ಈ ರೀತಿ ಶುರುವಾಗುವ ಗೀತೆಯನ್ನು ಯೋಗರಾಜ್ ಅವರು ಬರೆದಿದ್ದಾರೆ. ಹಾಗೂ ಈ ಮೂಲಕ ಮೊಟ್ಟಮೊದಲ ಬಾರಿಗೆ ಕರ್ನಾಟಕ ವಿಧಾನಸಭಾ ಚುನಾವಣೆ 2018 ತನ್ನದೇ ಆದ ಗೀತೆ ಹೊಂದಿದ ಖ್ಯಾತಿಗೆ ಪಾತ್ರವಾಗಲಿದೆ.

ಈ ಹಾಡು ಇವತ್ತು ಸಂಜೆ 6:30 ಕ್ಕೆ ವಿಕಾಸ ಸೌಧದಲ್ಲಿ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯ ಚುಣಾವಣಾಧಿಕಾರಿ ಸಂಜೀವ್ ಕುಮಾರ್, ಯೋಗರಾಜ್ ಭಟ್, ವಿ. ಹರಿಕೃಷ್ಣ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ. ಹಾಗೂ ಈ ಗೀತೆ ಜಾಗೃತ ಮತ್ತು ನೈತಿಕ ಮತದಾನವನ್ನು ಉತ್ತೇಜಿಸಿ, ದೊಡ್ಡ ಸಂಖ್ಯೆಯಲ್ಲಿ ಮತದಾರರು ಆಗಮಿಸಿ ಮತದಾನ ಮಾಡಲು ಪ್ರೇರೇಪಿಸುತ್ತದೆ.

ಒಟ್ಟಾರೆ ಯೋಗರಾಜ್ ಭಟ್ಟರ ಈ ಚುನಾವಣಾ ಗೀತೆಯಲ್ಲಿ ಹೊಸ ಥರದ ಧಮ್, ರಿದಮ್ ಎರಡೂ ಇದ್ದು ಭಟ್ಟರ ಇತರೆ ಗೀತೆಗಳಂತೆ ಈ ಚುನಾವಣಾ ಗೀತೆ ಕೂಡಾ ಜನಪ್ರಿಯವಾಗುವ ನಿರೀಕ್ಷೆ ಇದೆ.

Tags