ಸುದ್ದಿಗಳು

ಈ ಸಂಕಷ್ಟದಿಂದ ಹೊರಬರುತ್ತಾರಾ ಪಾಯಲ್?

ಚಿತ್ರರಂಗದಲ್ಲಿ ಕೆಲವರು ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ. ಇನ್ನು ಕೆಲವರು ಒಂದು ಫ್ಲಾಪ್ ನಲ್ಲಿ ಕಾಣಿಸಿಕೊಂಡರೆ ಪೂರ್ತಿಯಾಗಿ ಕೆಳಗೆ ಬೀಳುತ್ತಾರೆ. ಸದ್ಯಕ್ಕೆ ಯುವ ನಟಿ ಪಾಯಲ್ ರಜಪೂತ್ ಅವರಿಗೆ ಎರಡನೇ ಪರಿಸ್ಥಿತಿ ಎದುರಾಗಿದೆ.

ತನ್ನ ಚೊಚ್ಚಲ ಚಿತ್ರ ‘ಆರ್‌ಎಕ್ಸ್ 100’ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು ಪಾಯಲ್. ಆದರೆ  ನಂತರ ನಟಿಸಿದ ಯಾವುದೇ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಲಿಲ್ಲ.

ಎನ್ಟಿಆರ್ ಬಯೋಪಿಕ್ ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ನಿರ್ದೇಶಕ ತೇಜಾ ಅವರ ‘ಸೀತಾ’ದಲ್ಲಿ ಐಟಂ ಸಾಂಗ್ ಮಾಡಿದರು. ಎರಡೂ ಚಿತ್ರಗಳು ಹೇಳಲು ಹೆಸರಿಲ್ಲದಂತಾದವು.

ಇತ್ತೀಚೆಗೆ ತೆರೆಕಂಡ ‘ಆರ್‌ಡಿಎಕ್ಸ್ ಲವ್’ ಚಿತ್ರ ಪಾಯಲ್ ಅವರನ್ನು ಬಿ-ಗ್ರೇಡ್ ನಾಯಕಿ ಆಗಿ ಕಾಣುವಂತೆ ಮಾಡಿತು.

ಸದ್ಯ ‘ವೆಂಕಿ ಮಾಮಾ’ ಮತ್ತು ‘ಡಿಸ್ಕೋ ರಾಜಾ’ ಚಿತ್ರಗಳು ಆಕೆಗೆ ಯಶಸ್ಸು ತಂದುಕೊಡಬಹುದು. ಆದರೆ ‘ಇಸ್ಮಾರ್ಟ್’ ನಟಿ ನಭಾ ‘ಡಿಸ್ಕೋ ರಾಜಾ’ದಲ್ಲಿ ಪಾಯಲ್ ಗಿಂತ ಹೆಚ್ಚು ಯುವಕರನ್ನು ಆಕರ್ಷಿಸಬಹುದು ಎಂದು ಹೇಳಲಾಗುತ್ತಿದೆ.

ಹೀಗಾಗಿ ಡೇಂಜರ್ ನಲ್ಲಿರುವ ಪಾಯಲ್ ಸೇಫ್ ಆಗುತ್ತಾರಾ ಎಂಬುದನ್ನು ಮುಂದೆ ಕಾದುನೋಡಬೇಕಿದೆ.

ವಿಶೇಷ ಚೇತನ ಹೆಣ್ಣು ಮಕ್ಕಳ ಪರವಾಗಿ ನಿಂತ ರಾಗಿಣಿ ದ್ವಿವೇದಿ

#balkaninews #payalrajput #tollywoodnews

Tags