ಸುದ್ದಿಗಳು

ಮೊದಲ ಚಿತ್ರದಲ್ಲೇ ಹವಾ ಸೃಷ್ಟಿಸಿದ ಕ್ರೇಜಿಸ್ಟಾರ್ ಕಿರಿಯ ಪುತ್ರ…!!!

ಕ್ರೇಜಿಸ್ಟಾರ್ ವಿ ರವಿಚಂದ್ರನ್ ರ ಕಿರಿಯ ಪುತ್ರ ವಿಕ್ರಮ್ ಇದೀಗ ‘ತ್ರಿವಿಕ್ರಮ’ನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರತಂಡ ತಮ್ಮದು ‘ಹೈ ವೋಲ್ಟೇಜ್ ಲವ್ ಸ್ಟೋರಿ..’ ಎಂದು ಹೇಳಿಕೊಂಡಿದ್ದು, ಚಿತ್ರದ ಟೀಸರ್ ಬಿಡುಗಡೆಗೊಳಿಸಿದ್ದಾರೆ.

ಇನ್ನು ಫಸ್ಟ್ ಲುಕ್ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದ ‘ತ್ರಿವಿಕ್ರಮ’ ಚಿತ್ರವು ಇದೀಗ ಟೀಸರ್ ಗಳ ಮೂಲಕವೂ ಅಬ್ಬರಿಸುತ್ತಿದೆ. ಇನ್ನು ರವಿಚಂದ್ರನ್ ಸಿನಿಮಾಗಳೆಂದರೆ, ಪ್ರೀತಿ, ಪ್ರೇಮ, ರೊಮ್ಯಾನ್ಸ್ ಎಲ್ಲವೂ ಇರುತ್ತದೆ. ಇದೀಗ ಮಗನ ಚಿತ್ರದಲ್ಲೂ ಅಂಥದ್ದೇ ಖದರ್, ಲುಕ್ ಇರುವ ಟೀಸರ್ ಗಳು ಹವಾ ಎಬ್ಬಿಸುತ್ತಿವೆ.

ಈ ಟೀಸರ್ ಗಳಲ್ಲಿ ವಿಕ್ರಮ್ ಮಾಸ್ ಹಾಗೂ ಕ್ಲಾಸ್ ಲುಕ್ ನಲ್ಲಿ ದರ್ಶನ ಕೊಟ್ಟಿದ್ದಾರೆ. ಜೊತೆಗೆ ದಗದಗ ಉರಿಯುವ ಬೆಂಕಿಯಂತ ಬೈಕ್ ಏರಿ, ಡ್ಯಾನ್ಸ್ ಗೂ ಸೈ, ರೊಮ್ಯಾನ್ಸ್ ಗೂ ಜೈ ಎಂದಿದ್ದಾರೆ.

ಚಿತ್ರಕ್ಕೆ ನಾಯಕಿಯಾಗಿ ಮುಂಬೈ ಬೆಡಗಿ ಆಕಾಂಕ್ಷಾ ಶರ್ಮ ನಟಿಸುತ್ತಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಚಿಕ್ಕಣ್ಣ ಸೇರಿದಂತೆ ಅನೇಕರು ನಟಿಸುತ್ತಿದ್ದು, ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆಗಳು ಮೂಡಿವೆ.

ಸಂತ್ರಸ್ತರ ನೆರವಿಗೆ ಬರುವಂತೆ ಮಿಲ್ಕಿ ಬ್ಯೂಟಿಯ ಮನವಿ..!!

#youngstarvikram ravichandran #movietrivikram #vikramravichandranmovie #Trivikramteaser

Tags