ಸುದ್ದಿಗಳು

ಇದೇ ಮೊದಲ ಬಾರಿಗೆ ಕನ್ನಡ ಚಿತ್ರದ ಬಗ್ಗೆ ಟ್ವೀಟ್ ಮಾಡಿದ ಯೂಟ್ಯೂಬ್..!!!

ಹಾರಲಿ ಏರಲಿ ಕನ್ನಡದ ಬಾವುಟ ಎಂದ ಜಗ್ಗೇಶ್

ಬೆಂಗಳೂರು.ಫೆ.12

ಇತ್ತೀಚೆಗೆ ಕನ್ನಡದ ಸಿನಿಮಾಗಳು ಯುಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಈಗಾಗಲೇ ‘ನಟ ಸಾರ್ವಭೌಮ’, ‘ಸೀತಾರಾಮ ಕಲ್ಯಾಣ’, ‘ಯಜಮಾನ’, ‘ಕಿಸ್’ ಸೇರಿದಂತೆ ಅನೇಕ ಚಿತ್ರಗಳ ಹಾಡುಗಳು, ಟ್ರೈಲರ್ ಗಳು ಸಾಕಷ್ಟು ಸುದ್ದಿ ಮಾಡುತ್ತಿದ್ದು, ಯುಟ್ಯೂಬ್ ನಲ್ಲಿ ಟಾಪ್ ಟೆನ್ ಟ್ರೆಡಿಂಗ್ ಪಡೆಯುತ್ತಿವೆ.

ಮೊದಲ ಬಾರಿಗೆ ಟ್ವೀಟ್

ಇದೀಗ ಚಂದನವನದ ಚಿತ್ರಗಳ ಬಗ್ಗೆ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ. ಇಡೀ ಭಾರತ ಮತ್ತು ವಿಶ್ವಚಿತ್ರರಂಗವೂ ಕನ್ನಡ ಚಿತ್ರಗಳ ಕಡೆ ನೋಡುವಂತಾಗಿದೆ. ಅದಕ್ಕೆ ತಾಜಾ ಉದಾಹರಣೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’. ಈ ಹಿಂದೆ ಯಶ್ ಅಭಿನಯದ ‘ಕೆ.ಜಿ.ಎಫ್’ ಸಿನಿಮಾ ಐದು ಭಾಷೆಯಲ್ಲಿ ತೆರೆಕಂಡು ಸ್ಯಾಂಡಲ್ ವುಡ್ ಹಿರಿಮೆಯನ್ನು ವಿಸ್ತರಿಸಿತ್ತು. ಈಗ ‘ಯಜಮಾನ’ನ ಸರದಿ.

ಟಾಪ್ ಒನ್ ಟ್ರೆಡಿಂಗ್ ನಲ್ಲಿ ‘ಯಜಮಾನ’

ಮೊನ್ನೆಯಷ್ಟೇ ‘ಯಜಮಾನ’ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಕೇವಲ 24 ಗಂಟೆಯಲ್ಲಿ 10 ಮಿಲಿಯನ್ ವೀಕ್ಷಣೆ ಕಂಡಿದೆ. ಇದನ್ನ ಕಂಡು ಸಹಜವಾಗಿ ಯೂಟ್ಯೂಬ್ ಸಂಸ್ಥೆಯೇ ದಂಗಾಗಿದೆ. ಆ ಅಚ್ಚರಿ, ಸಂತಸವನ್ನು ಸ್ವತಃ ಯೂಟ್ಯೂಬ್ ಸಂಸ್ಥೆ ತಮ್ಮ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. “ಇಷ್ಟು ದಿನ ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದವು. ಈಗೀಗ ಕನ್ನಡ ಸಿನಿಮಾಗಳು ಅಬ್ಬರವಿಟ್ಟಿವೆ. ಹೀಗೆಯೇ ಮುಂದುವರೆಯಲಿ” ಎಂದಿದೆ.

ಸಂತಸ ವ್ಯಕ್ತಪಡಿಸಿದ ಜಗ್ಗೇಶ್

ಕನ್ನಡ ಚಿತ್ರಗಳ ಈ ಬೆಳವಣಿಗೆಯನ್ನು ಕಂಡು ಹಿರಿಯ ನಟ ಜಗ್ಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ.”ಹೃದಯತುಂಬಿ ಬಂತು ಕನ್ನಡ ಚಿತ್ರರಂಗದ ರಹದಾರಿಕಂಡು.. ಹಾರಲಿ ಏರಲಿ ಕನ್ನಡದ ಬಾವುಟ.. ನಾನು ಚಿತ್ರಮಂದಿರದಲ್ಲೆ ನೋಡಿ ಬೆಂಬಲಿಸುವೆ” ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


ಮಾರ್ಚ್ 1 ರಂದು ತೆರೆಗೆ

‘ಯಜಮಾನ’ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್ ಹೆಚ್ಚುತ್ತಿದ್ದು, ಬರುವ ತಿಂಗಳ 1 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ದರ್ಶನ್, ರಶ್ಮಿಕಾ ಮಂದಣ್ಣ, ತಾನ್ಯಾ ಹೋಪ್, ಧನಂಜಯ್, ರವಿಶಂಕರ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ಮಗಳ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ರಜನಿಕಾಂತ್

#youtube, #balkaninews #jaggesh. #kannadasuddigalu, #yajamana, #darshan,

Tags