ಸುದ್ದಿಗಳು

ವಿದ್ಯಾರ್ಥಿಯಾಗಿ ಕಾಲೇಜ್ ಗೆ ಹೊರಟ ‘ಯುವರತ್ನ’

ಈಗಾಗಲೇ ಗಮನ ಸೆಳೆದಿರುವ ಸಿನಿಮಾ

ಬೆಂಗಳೂರು.ಮಾ.23: ಸುಮಾರು ವರ್ಷಗಳ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿದ್ಯಾರ್ಥಿಯಾಗಿ ನಟಿಸುತ್ತಿರುವ ಸಿನಿಮಾ ‘ಯುವರತ್ನ’. ಹೌದು, ಈ ಚಿತ್ರದಲ್ಲಿ ಅವರು ಪವರ್ ಪುಲ್ ಪಾತ್ರವೊಂದರಲ್ಲಿ ನಟಿಸುತ್ತಿದ್ದು, ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ನಡುವೆ ಪುನೀತ್ ಲುಕ್ ಹೇಗಿರುತ್ತದೆ ಎಂಬುದು ಕುತೂಹಲ ಮೂಡಿಸಿತ್ತು. ಆ ಕುತೂಹಲಕ್ಕೀಗ ಉತ್ತರ ಸಿಕ್ಕಿದೆ.

ಹೌದು, ನಿರ್ದೇಶಕ ಸಂತೋಷ್ ಆನಂದ್ ರಾಮ್ ‘ಯುವರತ್ನ’ ಚಿತ್ರದ ಸ್ಟಿಲ್ ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ರಿವಿಲ್ ಮಾಡಿದ್ದಾರೆ. ಪುನೀತ್ ಸ್ಟೈಲಿಶ್ ಆಗಿ ಬೈಕ್ ಏರಿ ಬರ್ತಿರುವ ಈ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ. ಸ್ಟುಡೆಂಟ್ ಲುಕ್ ನಲ್ಲಿ ಅವರು ಭರ್ಜರಿಯಾಗಿ ಕಂಗೊಳಿಸುತ್ತಿದ್ದಾರೆ.

ಈಗಾಗಲೇ ಎರಡು ಹಂತಗಳ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ನಿನ್ನೆಯಿಂದ ಮೂರನೇಯ ಹಂತದ ಶೂಟಿಂಗ್ ಶುರು ಮಾಡಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ನಿರ್ಮಾಣ ಮಾಡುತ್ತಿದ್ದು, ಚಿತ್ರದಲ್ಲಿ ಸಯೇಶಾ ಸೈಗಲ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಸಿಷ್ಠ ಸಿಂಹ, ಧನಂಜಯ್, ಹಿರಿಯ ನಟಿ ರಾಧಿಕಾ ಶರತ್ ಕುಮಾರ್ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ.

ಇನ್ನು ಪುನೀತ್ ಆರಂಭದಲ್ಲಿ ‘ಅಪ್ಪು’ ಮತ್ತು ‘ಅಭಿ’ ಚಿತ್ರಗಳಲ್ಲಿ ಕಾಲೇಜ್ ಹುಡುಗನಾಗಿ ಯುವಜನತೆ ಮನಗೆದ್ದಿದ್ದರು. ಈಗ ಪುನಃ ಮತ್ತೆ ಸ್ಟೈಲಿಶ್ ಕಾಲೇಜ್ ಕುಮಾರನಾಗಿ ಎಂಟ್ರಿ ಕೊಡುತ್ತಿದ್ದಾರೆ. ಇದುವರೆಗೂ ಉಡುಪಿ, ಮಂಗಳೂರು ನಂತರ ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಸಲಾಗಿದೆ.

ನಾನು ಯಾರಿಗೂ ಮೋಸ ಮಾಡಿಲ್ಲ: ನಟ ಧರ್ಮ

#yuvarathna, #shooting, #balkaninews #kannadasuddigalu ,#punithrajkumar, #santhoshandandram. #hombalefilms

Tags